Srujan Lokesh: ಮಜಾ ಟಾಕೀಸ್ ನಿಲ್ಲಿಸಲು ಕಾರಣ ಬಿಚ್ಚಿಟ್ಟ ಸೃಜನ್ ಲೋಕೇಶ್, ಮತ್ತೆ ಶುರುವಾಗಲಿದೆ ಮಜಾ ಟಾಕೀಸ್.

ಹಲವು ಕಾರಣಗಳಿಂದ ನಿಂತಿದ್ದ ಮಜಾ ಟಾಕೀಸ್ ಮತ್ತೆ ಶುರುವಾಗಲಿದೆ ಎಂದು ಸೃಜನ್ ಲೋಕೇಶ್ ಹೇಳಿದ್ದಾರೆ.

Srujan Lokesh About Majaa Talkies: ಕಲರ್ಸ್ ಕನ್ನಡ ಚಾನಲ್ ಅಲ್ಲಿ ಮೂಡಿ ಬರುತ್ತಿದ್ದ ಮಜಾ ಟಾಕೀಸ್ ರಿಯಾಲಿಟಿ ಶೋ ಪ್ರೇಕ್ಷಕರಿಗೆ ಸಾಕಷ್ಟು ಮನೋರಂಜನೆಯನ್ನು ನೀಡುತ್ತಿತ್ತು. ಮಜಾ ಟಾಕೀಸ್ ರಿಯಾಲಿಟಿ ಶೋ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿತ್ತು. ನಟ ಸೃಜನ್ ಲೋಕೇಶ್ ಅವರ ನಿರೂಪಣೆಯಲ್ಲಿ ಈ ಶೋ ಹೆಸರುವಾಸಿಯಾಗಿತ್ತು.

ಆದರೆ ಇದೀಗ ಈ ರಿಯಾಲಿಟಿ ಶೋ ಟಿವಿ ಯಲ್ಲಿ ಪ್ರಸಾರವಾಗುತ್ತಿಲ್ಲ. ಇದನ್ನು ನಿಲ್ಲಿಸಿರುವುದಕ್ಕೆ ಕಾರಣ ಏನೆಂಬುದನ್ನು ನಟ ಸೃಜನ್ ಲೋಕೇಶ್ (Srujan Lokesh)  ಬಿಚ್ಚಿಟ್ಟಿದ್ದಾರೆ.

ನಟ ಸೃಜನ್ ಲೋಕೇಶ್ ಅವರು ಕಲರ್ಸ್ ಕನ್ನಡ ವಾಹಿನಿಯಲ್ಲಿ ಫ್ಯಾಮಿಲಿ ಗ್ಯಾಂಗ್ ಸ್ಟರ್ ಗೇಂ ರಿಯಾಲಿಟಿ ಶೋ ಅನ್ನು ಆರಂಭಿಸಿದ್ದಾರೆ. ಈ ರಿಯಾಲಿಟಿ ಶೋ ನಲ್ಲಿ ಪ್ರತಿಯೊಂದು ಸೀರಿಯಲ್ ತಂಡ ಸ್ಪರ್ದಿಸಲಿದ್ದಾರೆ.

Srujan Lokesh said the reason for stopping Maja Talkies
Image Credit: Asianetnews

ಮಜಾ ಟಾಕೀಸ್ ನಿಲ್ಲಿಸಲು ಕಾರಣ ಹೇಳಿದ ಸೃಜನ್ ಲೋಕೇಶ್
ಮಜಾ ಟಾಕೀಸ್ ಆರಂಭಿಸಿದ್ದು ಕೇವಲ 32 ಎಪಿಸೋಡ್‌ ಗಳಿಗೆ ಕೊನೆಯಲ್ಲಿ 32ರಿಂದ 600 ಎಪಿಸೋಡ್‌ಗಳು ಆಯ್ತು ಅಲ್ಲಿವರೆಗೂ ಏನೂ ಪ್ಲ್ಯಾನ್ ಮಾಡಿರಲಿಲ್ಲ. 6 ವರ್ಷಗಳ ಕಾಲ ಮಜಾ ಟಾಕೀಸ್ ಮಾಡಿಕೊಂಡು ಇರುವಾಗ ಬೇರೆ ರೀತಿ ಶೋಗಳ ಪ್ಲ್ಯಾನಿಂಗ್ ಬರಲಿಲ್ಲ ಏಕೆಂದರೆ ಜನರು ಅದನ್ನೇ ಹೆಚ್ಚಿಗೆ ಇಷ್ಟ ಪಡಲು ಆರಂಭಿಸಿದ್ದರು. ಸ್ವಲ್ಪ ಬ್ರೇಕ್ ತೆಗೆದುಕೊಂಡು ಆರಂಭ ಮಾಡಿದೆ ಆನಂತರ ಕೊರೋನಾ ಬಂತು ಮತ್ತೊಮ್ಮೆ ಬ್ರೇಕ್ ಆಯಿತು.

ರಾಜಾ ರಾಣಿ ಹೊಸ ರೀತಿಯ ರಿಯಾಲಿಟಿ ಶೋ ಅದಲ್ಲಿಂದ ಹೊಸಬ್ಬರು ಆಗಮಿಸಿದರು ಅದಾದ ಮೇಲೆ ನನ್ನಮ್ಮ ಸೂಪರ್ ಸ್ಟಾರ್ ಮತ್ತು ಗಿಚ್ಚಿ ಗಿಲಿಗಿಲಿ ನಡೆಯಿತ್ತು ಇಷ್ಟು ಜವಾಬ್ದಾರಿಗಳನನ್ನು ಮುಗಿಸಿದ ಮೇಲೆ ನಾಲ್ಕು ತಿಂಗಳು ಬ್ರೇಕ್ ತೆಗೆದುಕೊಂಡು ಫ್ಯಾಮಿಲಿ ಗ್ಯಾಂಗ್‌ಸ್ಟರ್ ಶುರು ಮಾಡುತ್ತಿರುವುದು ಇದೊಂದು ಬ್ಯುಟಿಫುಲ್ ಚಾಲೆಂಜ್ ಎಂದು ಸೃಜನ್ ಯುಟ್ಯೂಬ್ ಚಾನೆಲ್‌ ನಲ್ಲಿ ಮಾತನಾಡಿದ್ದಾರೆ.

Join Nadunudi News WhatsApp Group

Srujan Lokesh said the reason for stopping Maja Talkies
Image Credit: Vijaykarnataka

ಮತ್ತೆ ಬರಲಿದೆ ಮಜಾ ಟಾಕೀಸ್
ನಟ ಸೃಜನ್ ಲೋಕೇಶ್ ಮತ್ತೆ ಮಜಾ ಟಾಕೀಸ್ ಆರಂಭಿಸುವ ಬಗ್ಗೆ ಮಾತನಾಡಿದ್ದಾರೆ. ಬಿಡುವಂತ ಶೋ ಅದಲ್ಲ. 200 % ಅದನ್ನು ಆರಂಭಿಸುತ್ತೇನೆ. ಹಲವಾರು ಕಾರಣಗಳಿಂದ ಅದನ್ನು ನಿಲ್ಲಿಸಬೇಕಾಯಿತು. ಕೋವಿಡ್ ದೊಡ್ಡ ಕಾರಣವಾಗಿತ್ತು. ಅದಲ್ಲದೆ ಸಿನಿಮಾ ಕೆಲಸಗಳು ನಡೆಯುತ್ತಿರಲಿಲ್ಲ. ಸಿನಿಮಾ ರಿಲೀಸ್ ಕೂಡ ಆಗುತ್ತಿರಲಿಲ್ಲ.

ಸರ್ಕಾರ ಹೊಸ ಹೊಸ ನಿಯಮಗಳನ್ನು ತರುತ್ತಿತ್ತು, ಒಳಗೆ ಚಿತ್ರೀಕರಣ ಮಾಡುವಂತೆ ಇರಲಿಲ್ಲ. ಕೊರೋನಾ ದಾಟಿ ಮುಂದೆ ಬಂದಿದ್ದೇವೆ, ತುಂಬಾ ಸಿನಿಮಾ ರಿಲೀಸ್ ಆಗುತ್ತಿದೆ. ನಮ್ಮ ಚಿತ್ರರಂಗ ನೆಮ್ಮದಿಯಾಗಿದೆ. ಮುಖ್ಯವಾಗಿ ಸಿನಿಮಾ ಇಂಡಸ್ಟ್ರಿಗೆ ಪ್ರಚಾರ ಮಾಡಲು ಸಹಾಯ ಮಾಡುತ್ತಿದೆ ಅಂದರೆ ಖುಷಿಯ ವಿಚಾರವೇ.

Srujan Lokesh said the reason for stopping Maja Talkies
Image Credit: Times Of India

450 ರಿಂದ 600 ಸಿನಿಮಾ ತಂಡಗಳಿಂದ ಒಂದು ರೂಪಾಯಿಯೂ ಪಡೆಯದೆ ಪ್ರಚಾರ ಮಾಡಿದ್ದೀವಿ. ಸಾಮಾನ್ಯವಾಗಿ ಪ್ರಚಾರಕ್ಕೆ ತುಂಬಾ ಹಣ ಖರ್ಚು ಆಗುತ್ತದೆ ಆದರೆ ಮಜಾ ಟಾಕೀಸ್ ಮೂಲಕ ಸಹಾಯ ಆಗಿದೆ ಪ್ರಚಾರ ಸಿಕ್ಕಿದೆ ಅಂದರೆ ಅದಕ್ಕಿಂತ ಹೆಮ್ಮೆ ಏನು ಬೇಕು, ಎಂದು ಸೃಜನ್ ಹೇಳಿದ್ದಾರೆ.

Join Nadunudi News WhatsApp Group