SSY 2024: SSY ಹೂಡಿಕೆದಾರರಿಗೆ ಹೊಸ ರೂಲ್ಸ್, ಖಾತೆಯಲ್ಲಿ ಇಷ್ಟು ಹಣ ಇಲ್ಲದಿದ್ದರೆ ಬಂದ್ ಆಗಲಿದೆ ಆಕೌಂಟ್.
ಸುಕನ್ಯಾ ಸಮೃದ್ಧಿ ಖಾತೆಯಲ್ಲಿ ಇಷ್ಟು ಕನಿಷ್ಠ ಬ್ಯಾಲೆನ್ಸ್ ನಿರ್ವಹಿಸುವುದು ಅಗತ್ಯವಾಗಿದೆ.
SSY Minimum Balance Rules: SSY ಹೆಣ್ಣುಮಕ್ಕಳ ಉತ್ತಮ ಭವಿಷ್ಯಕ್ಕಾಗಿ SSY ಹೂಡಿಕೆ ಉತ್ತಮವಾಗಿರುತ್ತದೆ. ಕೇಂದ್ರ ಸರ್ಕಾರವು ಈ ಯೋಜನೆಯಡಿ ಹೂಡಿಕೆ ಮಾಡುವವರಿಗೆ ವಿಶೇಷ ಬಡ್ಡಿಯನ್ನು ನೀಡುತ್ತದೆ ಸದ್ಯ ಕೇಂದ್ರ ಸರ್ಕಾರ SSY ಹೂಡಿಕೆದಾರರಿಗೆ ಹೊಸ ನಿಯಮವನ್ನು ಜಾರಿಗೊಳಿಸಿದೆ. SSY ಹೂಡಿಕೆದಾರರು ಈ ನಿಯಮವನ್ನು ಪಾಲಿಸುವುದು ಕಡ್ಡಾಯವಾಗಿದೆ. ನಿಗದಿತ ಸಮಯದೊಳಗೆ ನೀವು ಈ ಕೆಲಸವನ್ನು ಪೂರ್ಣಗೊಳಿಸಿಕೊಳ್ಳದಿದ್ದರೆ ನಿಮ್ಮ ಖಾತೆ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಬಹುದು.
![SSY Minimum Balance](https://nadunudi.in/wp-content/uploads/2024/02/SSY-Minimum-Balance.png)
ಸುಕನ್ಯಾ ಸಮೃದ್ಧಿ ಯೋಜನೆಯ ಹೂಡಿಕೆದಾರರಿಗೆ ಹೊಸ ರೂಲ್ಸ್
ಸದ್ಯ ಕೇಂದ್ರದಿಂದ ಸುಕನ್ಯಾ ಸಮೃದ್ಧಿ ಯೋಜನೆಯ ಹೂಡಿಕೆದಾರರಿಗೆ ಹೊಸ ರೂಲ್ಸ್ ಜಾರಿಯಾಗಿದೆ. Sukanya Samriddhi Yojana (SSY) ಖಾತೆಯನ್ನು ಸಕ್ರಿಯವಾಗಿಡಲು ಕನಿಷ್ಠ ಬ್ಯಾಲೆನ್ಸ್ ಅನ್ನು ನಿರ್ವಹಿಸುವುದು ಕಡ್ಡಾಯವಾಗಿದೆ. ಈ ನಿಟ್ಟಿನಲ್ಲಿ ಹೊಸ ನಿಯಮವೂ ಜಾರಿಗೆ ಬಂದಿದೆ.
ಮಾರ್ಚ್ 31, 2024 ರ ವರೆಗೆ ಈ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಅನ್ನು ನಿರ್ವಹಿಸಬೇಕಾಗುತ್ತದೆ. ಖಾತೆದಾರರು ತನ್ನ ಬ್ಯಾಲೆನ್ಸ್ ಅನ್ನು ನಿರ್ವಹಿಸದಿದ್ದರೆ ಅಂತವರ ಖಾತೆಯು ನಿಷ್ಕ್ರಿಯವಾಗಬಹುದು. ನಿಷ್ಕ್ರಿಯ ಖಾತೆಯನ್ನು ಪುನಃ ತೆರೆಯಲು, ಖಾತೆದಾರರು ದಂಡವನ್ನು ಪಾವತಿಸಬೇಕಾಗುತ್ತದೆ. ಇದೀಗ ನಾವು ಸುಕನ್ಯಾ ಸಮೃದ್ಧಿ ಖಾತೆಯಲ್ಲಿ ಇಷ್ಟು ಕನಿಷ್ಠ ಬ್ಯಾಲೆನ್ಸ್ ನಿರ್ವಹಿಸುವುದು ಅಗತ್ಯವಾಗಿದೆ.
![SSY Latest News Update](https://nadunudi.in/wp-content/uploads/2024/02/SSY-Latest-News-Update-1.png)
SSY ಖಾತೆಯಲ್ಲಿ ಇಷ್ಟು ಹಣ ಇಲ್ಲದಿದ್ದರೆ ಫ್ರೀಜ್ ಆಗಲಿದೆ ಆಕೌಂಟ್
ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಕನಿಷ್ಠ ಬ್ಯಾಲೆನ್ಸ್ 250 ರೂ. ಆಗಿದೆ. ಅಂದರೆ ಖಾತೆಯನ್ನು ಸಕ್ರಿಯವಾಗಿಡಲು ಆರ್ಥಿಕ ವರ್ಷದಲ್ಲಿ 250 ರೂ. ಗಳನ್ನು ಹೂಡಿಕೆ ಮಾಡುವುದು ಅಗತ್ಯ. ನೀವು ಈ ಯೋಜನೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಹೂಡಿಕೆ ಮಾಡದಿದ್ದರೆ ಖಾತೆಯನ್ನು ಬಂದ್ ಮಾಡಲಾಗುತ್ತದೆ. ಖಾತೆಯನ್ನು ಮತ್ತೆ ಸಕ್ರಿಯಗೊಳಿಸಲು ಖಾತೆದಾರನು ವರ್ಷಕ್ಕೆ 50 ರೂಪಾಯಿ ದಂಡವನ್ನು ಪಾವತಿಸಬೇಕಾಗುತ್ತದೆ. ನೀವು ನಿಮ್ಮ SSY ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಅನ್ನು ಮಾರ್ಚ್ 31 ರೊಳಗೆ ಕಾಯ್ದಿರಿಸುವುದು ಅಗತ್ಯ.