SSY A/C: ಪೋಸ್ಟ್ ಆಫೀಸ್ ನಲ್ಲಿ ಸುಕನ್ಯಾ ಸಮೃದ್ಧಿ ಖಾತೆ ತೆರೆಯಲು ಬೇಕಾಗಿರುವ ದಾಖಲೆ ಏನು…? ಇಲ್ಲಿದೆ ಡೀಟೇಲ್ಸ್.
SSY ಯೋಜನೆಗೆ ಅರ್ಜಿ ಸಲ್ಲಿಸಲು ಈ ಅರ್ಹತೆ ಕಡ್ಡಾಯ
SSY Scheme Details: ಕೇಂದ್ರದ ಮೋದಿ ಸರ್ಕಾರ ವಿಶೇಷವಾಗಿ SSY ಯೋಜನೆಯನ್ನು ಹೆಣ್ಣುಮಕ್ಕಳಗಾಗಿ ಪರಿಚಯಿಸಿದೆ. ಹೆಣ್ಣು ಮಕ್ಕಳ ಭವಿಷ್ಯದ ಚಿಂತೆ ಮಾಡುತ್ತಿರುವವ ಪೋಷಕರಿಗೆ ಈ SSY ಯೋಜನೆಯು ಸಾಕಷ್ಟು ಸಹಾಯ ಮಾಡಲಿದೆ.
ನೀವು ಯಾವುದೇ ನಷ್ಟದ ಚಿಂತೆಯಿಲ್ಲದೆ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಈಗಾಗಲೇ SSY ಯೋಜನೆಯಡಿ ಸಾಕಷ್ಟು ಪೋಷಕರು ತಮ್ಮ ಮಕ್ಕಳ ಹೆಸರಲ್ಲಿ ಖಾತೆಯನ್ನು ತೆರೆದು ಹೂಡಿಕೆಯನ್ನು ಆರಂಭಿಸಿದ್ದಾರೆ. ಹತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನ ನಿಮ್ಮ ಹೆಣ್ಣು ಮಗುವಿನ ಹೆಸರಿನಲ್ಲಿ ಖಾತೆಯನ್ನು ತೆರೆದರೆ, ನಿಮ್ಮ ಮಗಳು 21 ವರ್ಷ ತುಂಬಿದಾಗ ಅವಳ ವಿದ್ಯಾಭ್ಯಾಸ, ಮದುವೆ, ಉದ್ಯೋಗಕ್ಕೆ ಮೆಚ್ಯುರಿಟಿ ಹಣವನ್ನು ಪಡೆದುಕೊಳ್ಳಬಹುದು.
![SSY Scheme Details](https://nadunudi.in/wp-content/uploads/2024/05/SSY-Scheme-Details.png)
ಪೋಸ್ಟ್ ಆಫೀಸ್ ನಲ್ಲಿ ಸುಕನ್ಯಾ ಸಮೃದ್ಧಿ ಖಾತೆ ತೆರೆಯಲು ಬೇಕಾಗಿರುವ ದಾಖಲೆ ಏನು…?
*ಮಗುವಿನ ಜನನ ಪ್ರಮಾಣಪತ್ರ
*ಪೋಷಕರ ಗುರುತಿನ ಪ್ರಮಾಣಪತ್ರ
*ಹೆಣ್ಣು ಮಗುವಿನ ಫೋಟೋ
*ಅರ್ಜಿ ನಮೂನೆ
*ಮಗುವಿನ ವಯಸ್ಸಿನ ಪುರಾವೆ
SSY ಯೋಜನೆಗೆ ಅರ್ಜಿ ಸಲ್ಲಿಸಲು ಈ ಅರ್ಹತೆ ಕಡ್ಡಾಯ
•ಖಾತೆಯನ್ನು ತೆರೆಯುವ ದಿನಾಂಕದಂದು ಮಗುವಿಗೆ ಹತ್ತು ವರ್ಷಕ್ಕಿಂತ ಕಡಿಮೆ ವಯಸ್ಸಾಗಿರುವುದರಿಂದ, ಪೋಷಕರು ಅಥವಾ ಯಾವುದೇ ಕಾನೂನು ಪಾಲಕರು ಹೆಣ್ಣು ಮಗುವಿನ ಹೆಸರಿನಲ್ಲಿ SSY ಖಾತೆಯನ್ನು ತೆರೆಯಬಹುದು.
•ಪ್ರತಿಯೊಬ್ಬ ಖಾತೆದಾರರು ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ ಗರಿಷ್ಠ ಒಂದು ಖಾತೆಯನ್ನು ತೆರೆಯಬಹುದು
•ಒಂದು ಕುಟುಂಬದ ಇಬ್ಬರು ಹೆಣ್ಣು ಮಕ್ಕಳು ಮಾತ್ರ ಈ ಯೋಜನೆಯಡಿ ಖಾತೆ ತೆರೆಯಬಹುದು.
![Sukanya Samriddhi Yojana interest rate](https://nadunudi.in/wp-content/uploads/2024/05/Sukanya-Samriddhi-Yojana-interest-rate.png)
SSY ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ ಹೇಗೆ…?
SSY ಯೋಜನೆಗೆ ಅರ್ಹರಾಗಿರುವವರು ತಮ್ಮ ಆಯ್ಕೆಯ ಅಂಚೆ ಕಚೇರಿ ಅಥವಾ ಬ್ಯಾಂಕ್ ನಲ್ಲಿ SSY ಖಾತೆಗೆ ಅರ್ಜಿ ಸಲ್ಲಿಸಬಹುದು. ಅಗತ್ಯವಿರುವ ಎಲ್ಲಾ ವಿವರಗಳನ್ನು ಒದಗಿಸಿದ ನಂತರ ಮತ್ತು ಅಗತ್ಯ ದಾಖಲೆಗಳನ್ನು ಸಲ್ಲಿಸಿದ ನಂತರ ಅರ್ಜಿದಾರರು ಅರ್ಜಿ ನಮೂನೆಯನ್ನು ಪೂರ್ಣಗೊಳಿಸಬಹುದು. ಅರ್ಜಿದಾರರು ನಗದು, ಚೆಕ್ ಅಥವಾ ಡಿಮ್ಯಾಂಡ್ ಡ್ರಾಫ್ಟ್ ಮೂಲಕ ರೂ. 250 ರಿಂದ ರೂ. 1.5 ಲಕ್ಷದವರೆಗೆ ಆರಂಭಿಕ ಠೇವಣಿ ಮಾಡಬಹುದು. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ನಿಮ್ಮ SSY ಖಾತೆ ತೆರೆಯುತ್ತದೆ. ಇದರಲ್ಲಿ ಹೂಡಿಕೆ ಮಾಡುತ್ತ ನಿಮ್ಮ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಬಹುದು.
![SSY Latest Update](https://nadunudi.in/wp-content/uploads/2024/05/SSY-Latest-Update.png)