Post Office Job: 10 ನೇ ತರಗತಿ ಪಾಸ್ ಆದವರಿಗೆ ಪೋಸ್ಟ್ ಆಫೀಸ್ ನಲ್ಲಿ ಬಂಪರ್ ಉದ್ಯೋಗ, 63 ಸಾವಿರ ಸಂಬಳ.

ಅಂಚೆ ಇಲಾಖೆಯಲ್ಲಿ ಉತ್ತಮ ಉದ್ಯೋಗಾವಕಾಶ ಇಂದೇ ಅರ್ಜಿ ಸಲ್ಲಿಸಿ .

Staff Car Driver Indian Post Office Recruitment: ಭಾರತೀಯ ಅಂಚೆ ಇಲಾಖೆ (Indian Post Office) ಜನಸಾಮಾನ್ಯರಿಗೆ ವಿವಿಧ ಯೋಜನೆಯನ್ನು ನೀಡುತ್ತದೆ. ಜನರು ಅಂಚೆ ಇಲಾಖೆಯ ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ. ಇನ್ನು ಅಂಚೆ ಇಲಾಖೆಯು ಯೋಜನೆಯನ್ನು ಜಾರಿಗೊಳಿಸುವುದರ ಜೊತೆಗೆ ನಿರುದ್ಯೋಗಿಗಳಿಗೆ ಸಹಾಯವಾಗಲು ಹುದ್ದೆಗೆ ಅರ್ಜಿ ಆಹ್ವಾನ ನೀಡುತ್ತದೆ. ಆಸಕ್ತರು ಅಂಚೆ ಇಲಾಖೆ ಹುದ್ದೆಗೆ ಅರ್ಜಿ ಸಲ್ಲಿಸಿ ಉದ್ಯೋಗವನ್ನು ಪಡೆಯಬಹುದು.

post office recruitment
Image Credit: Economictimes.indiatimes

ಅಂಚೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗಾವಕಾಶ
ಈಗಾಗಲೇ ಭಾರತೀಯ ಅಂಚೆ ಇಲಾಖೆ ವಿವಿಧ ಹುದ್ದೆಯ ಬಗ್ಗೆ ಮಾಹಿತಿ ನೀಡಿದೆ. ಕೆಲ ಹುದ್ದೆಗೆ ಅರ್ಜಿ ಆಹ್ವಾನ ಆರಂಭಗೊಂಡು ಕೊನೆಯ ದಿನಾಂಕ ಕೂಡ ಹತ್ತಿರವಾಗುತ್ತಿದೆ. ಇದೀಗ ಅಂಚೆ ಇಲಾಖೆ ಅರ್ಜಿ ಆಹ್ವಾನದ ಮಾಡಿರುವ ಉದ್ಯೋಗದ ಬಗ್ಗೆ ಮಾಹಿತಿ ಲಭಿಸಿದೆ. ಕೆಲವರಿಗೆ ಈ ಅರ್ಜಿ ಆಹ್ವಾನದ ಬಗ್ಗೆ ಮಾಹಿತಿ ತಿಳಿದಿರುವುದಿಲ್ಲ. ನೀವು ಕೊನೆಯ ದಿನಾಂಕ ಮುಗಿಯುವುದರೊಳಗೆ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಅಂಚೆ ಇಲಾಖೆಯ ಹುದ್ದೆಯ ವಿವರದ ಸಂಪೂರ್ಣ ವಿವರ ತಿಳಿದುಕೊಳ್ಳುವ ಮೂಲಕ ಇಂದೇ ಅರ್ಜಿ ಸಲ್ಲಿಸಿ.

10 ನೇ ತರಗತಿ ಪಾಸ್ ಆದವರಿಗೆ ಪೋಸ್ಟ್ ಆಫೀಸ್ ನಲ್ಲಿ ಬಂಪರ್ ಉದ್ಯೋಗ
ಭಾರತೀಯ ಅಂಚೆ ಇಲಾಖೆ Staff Car Driver ಹುದ್ದೆಗೆ ಅರ್ಜಿ ಆಹ್ವಾನ ಮಾಡಿದೆ. ಅರ್ಜಿ ಸಲ್ಲಿಕೆಗೆ Septembar 25, 2023 ಕೊನೆಯ ದಿನಾಂಕ ನಿಗದಿಪಡಿಸಿದೆ. ಇನ್ನು 10 ನೇ ತರಗತಿ ಪಾಸ್ ಆದವರು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಪೋಸ್ಟ್ ಆಫೀಸ್ ನಲ್ಲಿ ಒಟ್ಟು 2 ಸ್ಟಾಪ್ ಕಾರ್ ಡ್ರೈವರ್ ಹುದ್ದೆಗಳು ಖಾಲಿ ಇದ್ದು ಅವುಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತ ಅಭ್ಯರ್ಥಿಗಳು ಆದಷ್ಟು ಬೇಗ ಅರ್ಜಿ ಸಲ್ಲಿಸಿ ಉದ್ಯೋಗ ಪಡೆದುಕೊಳ್ಳಬಹುದು.

Staff Car Driver Indian Post Office Recruitment
Image Credit: sarkarijobhere

ಅರ್ಜಿ ಸಲ್ಲಿಕೆಗೆ ಇರಬೇಕಾಗದ ಅರ್ಹತೆಗಳು
ಭಾರತೀಯ ಅಂಚೆ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಚಂಡೀಗಢದಲ್ಲಿ ಪೋಸ್ಟಿಂಗ್ ಅನ್ನು ನೀಡಲಾಗುತ್ತದೆ. ಅಂಚೆ ಇಲಾಖೆ ನೇಮಕಾತಿಯಲ್ಲಿ ಆಯ್ಕೆ ಯಾಗುವ ಅಭ್ಯರ್ಥಿಗಳಿಗೆ ಮಾಸಿಕವಾಗಿ 19,900 ರಿಂದ 63,200 ರ ವರೆಗೆ ಸಂಬಳವನ್ನು ನೀಡಲಾಗುತ್ತದೆ. ಅಭ್ಯರ್ಥಿ ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು, ಹಾಗೆ ಡ್ರೈವಿಂಗ್ ಟೆಸ್ಟೆಡ್ ಸಂದರ್ಶನ ಮಾಡಲಾಗುತ್ತದೆ.

ಅರ್ಜಿದಾರರ ವಯೋಮಿತಿ ಎಷ್ಟು
ಅಂಚೆ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಕಡ್ಡಾಯವಾಗಿ 10 ನೇ ತರಗತಿ ಉತ್ತೀರ್ಣವಾಗಿರಬೇಕು. ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆ ಜೊತೆಗೆ ಅಗತ್ಯ ದಾಖಲೆಗಳೊಂದಿಗೆ ಪೋಸ್ಟ್ ಆಫೀಸ್ ಮೂಲಕ ಅರ್ಜಿ ಸಲ್ಲಿಸಬೇಕು. ಎಲ್ಲ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 100 ರೂ. ಆಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 18 ರಿಂದ 27 ವರ್ಷದವರಾಗಿರಬೇಕು. 10 ನೇ ತರಗತಿಯ ಅಂಕಗಳ ಆಧಾರದ ಮೇಲೆ ಅರ್ಹತೆ ನಿರ್ಧರಿತವಾಗಿರುತ್ತದೆ.

Join Nadunudi News WhatsApp Group

Join Nadunudi News WhatsApp Group