Business Loan: ಬಿಸಿನೆಸ್ ಮಾಡುವ ಮಹಿಳೆಯರಿಗೆ ಕೇಂದ್ರದಿಂದ ಸಿಗಲಿದೆ 10 ಲಕ್ಷ ರೂ, ಇಂದೇ ಅರ್ಜಿ ಸಲ್ಲಿಸಿ

ಮಹಿಳೆಯರಿಗೆ ಸರ್ಕಾರ ನೀಡುತ್ತಿದೆ 10 ಲಕ್ಷ ಸಾಲ ಸೌಲಭ್ಯ, ಸಾಲ ಪಡೆಯಲು ಯಾರು ಅರ್ಹರು..?

Stand Up India Scheme: ಪ್ರದಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ದೇಶದ ಜನತೆಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಜನಸಮಾನ್ಯರು ಸರಕಾರ ವಿವಿಧ ಯೋಜನೆಗಳ ಲಾಭವನ್ನು ಪಡೆಯುತ್ತಿದ್ದಾರೆ ಎನ್ನಬಹುದು. ಇನ್ನು ಮಹಿಳೆಯರಿಗೆ ಆರ್ಥಿಕ ಸಮಸ್ಯೆ ಎದುರಾಗುತ್ತಲೇ ಇರುತ್ತದೆ.

ಇದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಮಹಿಳೆಯರಿಗಾಗಿ ಸಾಲ ಸೌಲಭ್ಯವನ್ನು ನೀಡಲು ಸಾಕಷ್ಟು ಯೋಜನೆಯನ್ನು ಪರಿಚಯಿಸಿದೆ. ಮಹಿಳೆಯರಿಗೆ ಪರಿಚಯಿಸಿರುವ ಸಾಲದ ಯೋಜನೆಗಳಲ್ಲಿ ಸ್ಟ್ಯಾಂಡಪ್ ಇಂಡಿಯಾ ಯೋಜನೆ (Stand Up India Scheme) ಕೂಡ ಒಂದಾಗಿದೆ. ಇದೀಗ ನಾವು ಈ ಲೇಖನದಲ್ಲಿ ಈ ಯೋಜನೆಯ ಬಗ್ಗೆ ಸಂಪೂರ್ಣ ವಿವರ ತಿಳಿಯೋಣ.

business loan for ladies
Image Credit: Original Source

ಮಹಿಳೆಯರಿಗೆ ಸರ್ಕಾರ ನೀಡುತ್ತಿದೆ 10 ಲಕ್ಷ ಸಾಲ ಸೌಲಭ್ಯ
ಸರ್ಕಾರ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಮಹಿಳೆಯರಿಗಾಗಿ ಸ್ಟ್ಯಾಂಡಪ್ ಇಂಡಿಯಾ ಯೋಜನೆಯನ್ನು ಪರಿಚಯಿಸಿದೆ. ಯಾವುದೇ ಬ್ಯಾಂಕ್ ಸಾಲಗಳಲ್ಲಿ ರೂ. 10 ಲಕ್ಷದಿಂದ 1 ಕೋಟಿಯ vವರೆಗಿನ ಸಾಲಗಳಲ್ಲಿ ಒಂದು ಸಾಲವನ್ನು ಮಹಿಳಾ ಉದ್ಯೋಗದಾತರಿಗೆ, ಇಲ್ಲವಾದಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ನೀಡಬೇಕು ಎಂದು ತೀರ್ಮಾನಿಸಲಾಗಿದೆ.

ಇದು ಉತ್ಪಾದನೆ, ಸೇವೆ ಮತ್ತು ವ್ಯಾಪಾರದ ಎಲ್ಲಾ ಮೂರು ಕ್ಷೇತ್ರಗಳಿಗೆ ಅನ್ವಯಿಸುತ್ತದೆ. ಪಾಲುದಾರಿಕೆ ಸಂಸ್ಥೆಯಾಗಿದ್ದರೆ ರೂ. 51% ಪಾಲುದಾರಿಕೆಯನ್ನು ಮಹಿಳೆ/ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ವ್ಯಕ್ತಿ ಹೊಂದಿರಬೇಕು.ರೂ. 10 ಲಕ್ಷದಿಂದ 1 ಕೋಟಿಯವರೆಗೆ ಇದು ಕಾಂಪೋಸಿಟ್ ಸಾಲವಾಗಿದೆ. ಅಂದರೆ ಕರಾರು ಸಾಲ ಮತ್ತು ಕಾರ್ಯವಾಹಿ ಬಂಡವಾಳ ಎರಡು ಅನ್ವಯವಾಗುತ್ತದೆ. ಬ್ಯಾಂಕುಗಳು ಈ ಯೋಜನೆಯಡಿ ಅತಿ ಕಡಿಮೆ ದರದಲ್ಲಿ ಬಡ್ಡಿಯನ್ನು ನೀಡುತ್ತದೆ.

stand up india scheme for ladies
Image Credit: Original Source

ಈ ಯೋಜನೆಯಡಿ ಸಾಲ ಪಡೆಯಲು ಯಾರು ಅರ್ಹರು..?
•ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಮಹಿಳೆಯಾಗಿರಬೇಕು.

Join Nadunudi News WhatsApp Group

•ಅರ್ಜಿದಾರರ ವಯಸ್ಸು 18 ವರ್ಷ ಮೇಲ್ಪಟ್ಟಿರಬೇಕು.

•ಈ ಸಾಲದ ಫಲಾನುಭವಿಯು ಹಸಿರು ವಲಯ ಯೋಜನೆಯಡಿಯಲ್ಲಿರಬೇಕು. ಇಲ್ಲಿ ಹಸಿರು ಕ್ಷೇತ್ರವು ಉತ್ಪಾದನೆ, ಸೇವೆ ಅಥವಾ ಹೊಸ ವ್ಯವಹಾರವನ್ನು ಪ್ರಾರಂಭಿಸಬೇಕು.

•ಸಾಲಗಾರರು ಯಾವುದೇ ಬ್ಯಾಂಕಿನ ಸದಸ್ಯರಾಗಿರಬಾರದು.

Join Nadunudi News WhatsApp Group