SBI Interest: SBI ನಲ್ಲಿ ಸಾಲ ಮಾಡಿದವರಿಗೆ ಬೇಸರದ ಸುದ್ದಿ, ಬಡ್ಡಿ ದರ ಮತ್ತು EMI ನಲ್ಲಿ ಮತ್ತೆ ಏರಿಕೆ

ಸಾಲದ ಮೇಲಿನ ಕನಿಷ್ಠ ವೆಚ್ಚದ ದರ ಏರಿಸಿದ ಎಸ್‌ಬಿಐ, ಸಾಲದ ನಿಯಮ ಬದಲಾವಣೆ

SBI Loan Interest Rate Changes: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ತನ್ನ ಗ್ರಾಹಕರಿಗೆ ಒಂದು ಬಿಗ್ ಶಾಕ್ ಅನ್ನು ನೀಡುತ್ತಿದೆ. ದೇಶದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಾರ್ವಜನಿಕ ವಲಯದ ಅತಿದೊಡ್ಡ ಬ್ಯಾಂಕ್ ಆಗಿದ್ದು, ಈ ಬ್ಯಾಂಕ್ ಈಗ ಸಾಲದ ಮೇಲಿನ ಕನಿಷ್ಠ ವೆಚ್ಚದ ದರವನ್ನು ಹೆಚ್ಚಿಸುವುದಾಗಿ ಘೋಷಿಸಿದೆ.

ಎಸ್‌ಬಿಐ ಸಾಲದ ಮೇಲಿನ ಕನಿಷ್ಠ ವೆಚ್ಚದ ದರವನ್ನು (MCLR) ಹತ್ತು ಬೇಸಿಸ್ ಪಾಯಿಂಟ್‌ಗಳಿಂದ (BPS) ಹೆಚ್ಚಿಸಿರುವುದಾಗಿ ಹೇಳಿದ್ದು, ಅವಧಿವಾರು ಎಂಸಿಎಲ್‌ಆರ್ ಬಡ್ಡಿ ದರಗಳು ಜಾರಿಗೆ ಬರುತ್ತವೆ. ಇನ್ನು SBI MCLR ದರದವನ್ನ ಹೆಚ್ಚಳ ಮಾಡಿದರೆ ಅದರ ನೇರ ಪರಿಣಾಮ ಬ್ಯಾಂಕಿನಲ್ಲಿ ಸಾಲ ಮಾಡಿದವರ ಮೇಲೆ ಬೀಳುತ್ತದೆ ಎಂದು ಹೇಳಬಹುದು. MCLR ದರದಲ್ಲಿ ಏರಿಕೆ ಮಾಡಿದರೆ ಸಾಲದ ಬಡ್ಡಿದರ ಮತ್ತೆ ಏರಿಕೆ ಆಗುತ್ತದೆ.

SBI Latest News Update
Image Credit: Live Mint

ಸಾಲದ ಬಡ್ಡಿದರದಲ್ಲಿ ಹೆಚ್ಚಳ

SBI ಸಾಲದ ಮೇಲಿನ ಕನಿಷ್ಠ ವೆಚ್ಚದ ದರವನ್ನು ಹೆಚ್ಚಿಸಿದ ಪರಿಣಾಮವಾಗಿ ಮನೆ, ಆಟೋ ಮತ್ತಿತರ ಸಾಲಗಳ ಬಡ್ಡಿದರ ಹೆಚ್ಚಾಗುತ್ತದೆ. ಕಳೆದ ವಾರ ಬ್ಯಾಂಕ್ ಆಫ್ ಬರೋಡಾ 2022 ರ ಏಪ್ರಿಲ್ 12 ರಿಂದ ಅನ್ವಯವಾಗುವ ನಿಧಿ ಆಧಾರಿತ ಸಾಲದ ಬಡ್ಡಿದರಗಳ ಕನಿಷ್ಠ ವೆಚ್ಚದಲ್ಲಿ 0.05 ಪ್ರತಿಶತ ಏರಿಕೆಯನ್ನು ಘೋಷಿಸಿತ್ತು. ಭಾರತೀಯ ರಿಸರ್ವ್ ಬ್ಯಾಂಕ್ 2022 ರ ಏಪ್ರಿಲ್ 8 ರಂದು ನಡೆದ ಹಣಕಾಸು ನೀತಿ ಸಭೆಯಲ್ಲಿ ಬಡ್ಡಿ ದರಗಳನ್ನು ಯಥಾಸ್ಥಿತಿಯಲ್ಲಿ ಇರಿಸಿತ್ತು.

SBI Loan Interest Rate Changes
Image Credit: ETV Bharat

MCLR ನ ಕುರಿತು ಮಾಹಿತಿ

Join Nadunudi News WhatsApp Group

ಆರ್​ಬಿಐನ ಹೊಸ ಮಾರ್ಗಸೂಚಿಯ ಪ್ರಕಾರ ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್ ಆಧಾರಿತ ಲೆಂಡಿಂಗ್ ರೇಟ್ (MCLR) ವಾಣಿಜ್ಯ ಬ್ಯಾಂಕ್‌ಗಳಿಗೆ ಸಾಲದ ದರಗಳನ್ನು ಹೊಂದಿಸಲು ಮೂಲ ದರವನ್ನು ಬದಲಾಯಿಸಿದೆ. MCLR ಅನ್ನು ನಿರ್ಧರಿಸುವಲ್ಲಿ ನಿಧಿಗಳ ಕನಿಷ್ಠ ವೆಚ್ಚವು ಪ್ರಮುಖ ಅಂಶವಾಗಿದೆ. ನಿಧಿಯ ಕನಿಷ್ಠ ವೆಚ್ಚದ ಮೇಲೆ ಪರಿಣಾಮ ಬೀರುವ ರೆಪೋ ದರದಂತಹ ಪ್ರಮುಖ ದರಗಳಲ್ಲಿನ ಯಾವುದೇ ಬದಲಾವಣೆಗಳು MCLR ಮೇಲೆ ಪರಿಣಾಮ ಬೀರುತ್ತವೆ.

ಗೃಹ ಸಾಲದ ಮರುಹೊಂದಿಸುವ ದಿನಾಂಕ ಬಂದಾಗ ಎಂಸಿಎಲ್‌ಆರ್ ನಲ್ಲಿನ ಹೆಚ್ಚಳವು EMI ಗಳಲ್ಲಿ ಸಮಾನ ಮಾಸಿಕ ಕಂತುಳಿಗೆ ಹೊಂದಿಸಲ್ಪಡುತ್ತದೆ ಎನ್ನಲಾಗಿದೆ. ಸದ್ಯ SBI ಮತ್ತೆ MCLR ದರವನ್ನ ಏರಿಕೆ ಮಾಡಲು ತೀರ್ಮಾನವನ್ನ ಮಾಡಿದ್ದು ಇದು ಸಾಲಗಾರದ ಮೇಲೆ ಇನ್ನಷ್ಟು ಹೊರೆಯನ್ನ ತರಿಸಲಿದೆ ಎಂದು ಹೇಳಬಹುದು. ಹೊಸ ವರ್ಷದ ಆರಂಭದಿಂದ ಹೊಸ MCLR ದರ ಜಾರಿಗೆ ಬರುವ ಸಾಧ್ಯತೆ ಇದೆ ಎಂದು SBI ಮೂಲಗಳಿಂದ ತಿಳಿದುಬಂದಿದೆ.

Join Nadunudi News WhatsApp Group