OPS Update: ರಾಜ್ಯ ಸರ್ಕಾರೀ ನೌಕರರಿಗೆ ಭರ್ಜರಿ ಗುಡ್ ನ್ಯೂಸ್, ಹಳೆಯ ಪಿಂಚಣಿ ಬಗ್ಗೆ ಮಹತ್ವದ ಘೋಷಣೆ.

ರಾಜ್ಯ ಸರ್ಕಾರದಿಂದ ಹಳೆಯ ಪಿಂಚಣಿ ವ್ಯವಸ್ಥೆ ಜಾರಿ ಬಗ್ಗೆ ಬಿಗ್ ಅಪ್ಡೇಟ್

Old Pension Scheme Latest Update: ಪ್ರಸ್ತುತ ರಾಜ್ಯದಲ್ಲಿ ಸರ್ಕಾರೀ ನೌಕರರ ವೇತನ ಹೆಚ್ಚಳದ ಜೊತೆಗೆ ನೌಕರಿಗೆ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಜಾರಿ ಮಾಡುವುದರ ಬಗ್ಗೆ ಕೂಡ ಬಾರಿ ಚರ್ಚೆ ನಡೆಯುತ್ತಿದೆ. ಸಧ್ಯ ರಾಜ್ಯ ಸರ್ಕಾರ ಇಂತಹ ಸರ್ಕಾರ ನೌಕರರಿಗೆ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಜಾರಿ ಮಾಡುವುದಾಗಿ ಘೋಷಿಸಿದೆ. ಸದ್ಯ ರಾಜ್ಯ ಸರ್ಕಾರದಿಂದ ಹಳೆಯ ಪಿಂಚಣಿ ವ್ಯವಸ್ಥೆ ಜಾರಿ ಬಗ್ಗೆ ಬಿಗ್ ಅಪ್ಡೇಟ್ ಹೊರಬಿದ್ದಿದೆ. ಈ ಮೂಲಕ ರಾಜ್ಯ ಸರಕಾರಿ ನೌಕರರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ.

Old Pension Scheme
Image Credit: Zeebiz

ರಾಜ್ಯ ಸರ್ಕಾರೀ ನೌಕರರಿಗೆ ಭರ್ಜರಿ ಗುಡ್ ನ್ಯೂಸ್
ದಿನಾಂಕ: 01.04.2006 ಕ್ಕಿಂತ ಮೊದಲು ನೇಮಕಗೊಂಡ ಮತ್ತು ನಂತರ ಮಂಜೂರಾದ ನೌಕರರನ್ನು ಹಳೆಯ ನಿಶ್ಚಿತ ಪಿಂಚಣಿ ಯೋಜನೆಯಡಿ ತರಲು ರಾಜ್ಯ ಸರ್ಕಾರವು ಮಹತ್ವದ ಆದೇಶವನ್ನು ಹೊರಡಿಸಿದೆ.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ದಿನಾಂಕ:01-04-2006ರ ಪೂರ್ವದಲ್ಲಿನ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆ ಹೊಂದಿ ಆ ದಿನಾಂಕದಂದು ಅಥವಾ ನಂತರದಲ್ಲಿ ರಾಜ್ಯ ಸರ್ಕಾರದ ಸೇವೆಗೆ ಸೇರಿದ ನೌಕರರನ್ನು ಹಳೆಯ ಡಿಫೈನ್ಸ್ ಪಿಂಚಣಿ ಯೋಜನೆಗೆ ಒಳಪಡಿಸಲು ಸಂಬಂಧಪಟ್ಟ ಸರ್ಕಾರಿ ನೌಕರರಿಂದ ಅಭಿಮತ ಪಡೆದು ಕ್ರಮ ಕೈಗೊಳ್ಳುವ ಸಂಬಂಧ ಈ ಕಳಕಂಡ ಷರತ್ತುಗಳಿಗೆ ಒಳಪಟ್ಟು ಉಲ್ಲೇಖಿತ ಸರ್ಕಾರದ ಆದೇಶದಲ್ಲಿ ಸೂಚನೆಗಳನ್ನು ನೀಡಲಾಗಿರುತ್ತದೆ.

Old Pension Scheme Latest Update
Image Credit: Jagran

ಹಳೆಯ ಪಿಂಚಣಿ ಬಗ್ಗೆ ಮಹತ್ವದ ಘೋಷಣೆ
•ದಿನಾಂಕ:01.04.2006 ರ ಮೊದಲು ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆಯಾದ ಮತ್ತು ಆ ದಿನಾಂಕದಂದು ಅಥವಾ ನಂತರ ರಾಜ್ಯ ಸರ್ಕಾರದ ಸೇವೆಗೆ ಸೇರ್ಪಡೆಗೊಂಡ ಸರ್ಕಾರಿ ನೌಕರರು ಹಳೆಯ ರಕ್ಷಣಾ ಪಿಂಚಣಿ ಯೋಜನೆಯಡಿ ಒಳಗೊಳ್ಳಲು ಬಯಸುವವರು ತಮ್ಮ ಆಸಕ್ತಿಯನ್ನು ನೇರವಾಗಿ ಸಕ್ಷಮ ನೇಮಕಾತಿ ಪ್ರಾಧಿಕಾರಕ್ಕೆ ಸಲ್ಲಿಸಬೇಕು. ದಿನಾಂಕ: 30.06.2024 ರೊಳಗೆ ನಿಗದಿತ ನಮೂನೆ ಸಲ್ಲಿಸಬೇಕು. ಈ ಆಯ್ಕೆಯನ್ನು ಒಮ್ಮೆ ಮಾತ್ರ ಚಲಾಯಿಸಲು ಅನುಮತಿಸಲಾಗಿದೆ.

•ಒಮ್ಮೆ ಮಾಡಿದ ಆಯ್ಕೆಯನ್ನು ಬದಲಾಯಿಸಲು ಅವಕಾಶವಿಲ್ಲ.

Join Nadunudi News WhatsApp Group

•ಮೇಲಿನ 1 ರ ಪ್ರಕಾರ ಆಯ್ಕೆಯನ್ನು ಚಲಾಯಿಸಲು ಅರ್ಹರಾಗಿರುವ ಸರ್ಕಾರಿ ನೌಕರರು ನಿಗದಿತ ದಿನಾಂಕದೊಳಗೆ ತಮ್ಮ ಆಯ್ಕೆಯನ್ನು ಚಲಾಯಿಸದಿದ್ದರೆ ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಮುಂದುವರಿಯುತ್ತಾರೆ.

•ದಿನಾಂಕ 01.04.2006 ರ ಮೊದಲು ರಾಜ್ಯ ಸಿವಿಲ್ ಸೇವೆಯಲ್ಲಿನ ಖಾಲಿ ಹುದ್ದೆಗಳಿಗೆ ಹೊರಡಿಸಲಾದ ನೇಮಕಾತಿ ಅಧಿಸೂಚನೆಯನ್ವಯ ಆಯ್ಕೆಯಾಗಿ ಕರ್ತವ್ಯಕ್ಕೆ ವರದಿ ಮಾಡಿಕೊಂಡು ತದನಂತರ ಸಮುಚಿತ ಮಾರ್ಗದಲ್ಲಿ ಅರ್ಜಿಯನ್ನು ಸಲ್ಲಿಸಿ ಸರ್ಕಾರದ ಅನ್ಯ ಇಲಾಖೆಯಲ್ಲಿನ ಹುದ್ದೆಗೆ ನೇಮಕಾತಿ ಹೊಂದಿದ ಅರ್ಹ ಸರ್ಕಾರೀ ನೌಕರರು ಹಿಂದಿನ ಡಿಫೈನ್ಸ್ ಪಿಂಚಣಿ ಯೋಜನೆ ಸೌಲಭ್ಯ ಪಡೆದುಕೊಳ್ಳಲು ಬಯಸಿದ್ದಲ್ಲಿ ಮನವಿಯನ್ನು ಹಿಂದಿನ ನೇಮಕಾತಿ ಪ್ರಾಧಿಕಾರಕ್ಕೆ ದಿನಾಂಕ 30 .06 .2024 ರೊಳಗಾಗಿ ಸಲ್ಲಿಸಬೇಕಾಗುತತದೆ.

Govt Employees Old Pension Scheme
Image Credit: Rights Of Employees

Join Nadunudi News WhatsApp Group