Poultry Farming: ಹೊಸದಾಗಿ ಕೋಳಿ ಫಾರ್ಮ್ ಮಾಡುವವರಿಗೆ ಸರ್ಕಾರದಿಂದ ಸಿಗಲಿದೆ 25 ಲಕ್ಷ, ಇಂದೇ ಅರ್ಜಿ ಸಲ್ಲಿಸಿ

ಕೋಳಿ ಸಾಕಾಣಿಕೆಗೆ ಸರ್ಕಾರದಿಂದ ಸಿಗಲಿದೆ 25 ಲಕ್ಷ, ಅರ್ಜಿ ಸಲ್ಲಿಸುವ ಮೂಲಕ ಸರಕಾರದಿಂದ ಸಹಾಯಧನ ಪಡೆಯಬಹುದು

Subsidy For Poultry Farming 2024: ಸ್ವಂತ ಉದ್ಯೋಗದ ಕನಸು ಕಾಣುವವರಿಗೆ ಕೋಳಿ ಸಾಕಾಣಿಕೆ ಉತ್ತಮ ಆಯ್ಕೆ ಎನ್ನಬಹುದು. ಮಾರುಕಟ್ಟೆಯಲ್ಲಿ ಕೋಳಿ ಮಾಂಸಗಳಿಗೆ ಹೆಚ್ಚಿನ ಬೇಡಿಕೆ ಇದೆ. ಇನ್ನಿತರ ಮಾಂಸಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕೋಳಿ ಮಾಂಸವನ್ನು ಇಷ್ಟಪಡುತ್ತಾರೆ. ಮಾರುಕಟ್ಟೆಯಲ್ಲಿ ವಿವಿಧ ತಳಿಯ ಕೋಳಿಗಳನ್ನು ಸಾಕಲಾಗುತ್ತಿದೆ.

ಒಂದೊಂದು ತಳಿಯ ಕೋಳಿಗಳು ಒಂದೊಂದು ರೀತಿಯ ಬೆಲೆಯನ್ನು ಹೊಂದಿರುತ್ತದೆ. ಇನ್ನು ನೀವು ಕೋಳಿ ಸಾಕಾಣಿಕೆಯ ಯೋಜನೆಯಲ್ಲಿದ್ದರೆ ಸರ್ಕಾರವೇ ನಿಮಗೆ ಧನಸಹಾಯ ಮಾಡಲಿದೆ. ನೀವು ಅರ್ಜಿ ಸಲ್ಲಿಸುವ ಮೂಲಕ ಸರಕಾರದಿಂದ ಸಹಾಯಧನ ಪಡೆಯಬಹುದು.

Subsidy For Poultry Farming
Image Credit: Agriculturalmagazine

ಕೋಳಿ ಸಾಕಾಣಿಕೆಗೆ ಸರ್ಕಾರದಿಂದ ಸಿಗಲಿದೆ 25 ಲಕ್ಷ
ಜಾನುವಾರು ಅಭಿಯಾನದಡಿ ಕೋಳಿ ಸಾಕಾಣಿಕೆಗೆ 50 ಪ್ರತಿಶತ ಸಹಾಯಧನವನ್ನು ಸರ್ಕಾರವು ನೀಡುತ್ತದೆ. ಇದಲ್ಲದೇ ಕೋಳಿ ಸಾಕಾಣಿಕೆಗೆ ಕಡಿಮೆ ದರದಲ್ಲಿ ನಬಾರ್ಡ್ ನಿಂದ ಸಾಲ ದೊರೆಯುತ್ತದೆ. ಕೋಳಿ ಸಾಕಾಣಿಕೆಯನ್ನು ದೊಡ್ಡ ಪ್ರಮಾಣದಲ್ಲಿ ಪ್ರಾರಂಭಿಸಬೇಕಾದರೆ ರಾಷ್ಟ್ರೀಯ ಜಾನುವಾರು ಮಿಷನ್ ಅಡಿಯಲ್ಲಿ ಸರ್ಕಾರವು 50 ಪ್ರತಿಶತದವರೆಗೆ ಸಹಾಯಧನವನ್ನು ನೀಡುತ್ತದೆ.

ಕೋಳಿ ಸಾಕಾಣಿಕೆ ವೆಚ್ಚ ತಗ್ಗಿಸಲು ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಶೇ.50 ಅನುದಾನ ಅಥವಾ ಗರಿಷ್ಠ 25 ಲಕ್ಷ ರೂ.ಗಳನ್ನು ನೀಡಲು ಅವಕಾಶವಿದೆ. ಈ ಯೋಜನೆಯ ಲಾಭ ಪಡೆದು ಕೋಳಿ ಘಟಕ ಆರಂಭಿಸಲು ಆನ್‌ ಲೈನ್‌ ನಲ್ಲಿ ನೀವು ಸುಲಭವಾಗಿ ಅರ್ಜಿ ಸಲ್ಲಿಸಬಹುದು.

Poultry Farming Latest Update
Image Credit: Theindianiris

ಕೋಳಿ ಸಾಕಾಣಿಕೆಗೆ ಸಬ್ಸಿಡಿ ಪಡೆಯಲು ಈ ರೀತಿಯಾಗಿ ಅರ್ಜಿ ಸಲ್ಲಿಸಿ
•ನೀವು ಅಧಿಕೃತ ಪೋರ್ಟಲ್ https://nlm.udyamimitra.in/ ಗೆ ಭೇಟಿ ನೀಡುವ ಮೂಲಕ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಹೊಸ ಕೋಳಿ ಫಾರಂಗೆ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಬಹುದು.

Join Nadunudi News WhatsApp Group

•ರೈತರು ಬೇಕಿದ್ದರೆ ಸಮೀಪದ ಜಿಲ್ಲೆಯ ಪಶುಸಂಗೋಪನಾ ಇಲಾಖೆ ಕಚೇರಿಗೆ ತೆರಳಿ ಕೋಳಿ ಸಾಕಾಣಿಕೆ ಮಾಡಬಹುದು. ಕೋಳಿಗಳ ಮುಂದುವರಿದ ತಳಿಗಳು, ಕೋಳಿ ಸಾಕಣೆಯ ಒಟ್ಟು ವೆಚ್ಚ ಮತ್ತು ಕೋಳಿ ಫಾರ್ಮ್ ಅನ್ನು ಸ್ಥಾಪಿಸುವ ಬಗ್ಗೆ ಬಳಕೆದಾರರು ಮಾಹಿತಿಯನ್ನು ಪಡೆಯಬಹುದು.

Join Nadunudi News WhatsApp Group