SSY: ಹೆಣ್ಣು ಮಗುವಿಗೆ 21 ವರ್ಷವಾದಾಗ ಕೇಂದ್ರದಿಂದ ಸಿಗಲಿದೆ 27 ಲಕ್ಷ ರೂ, ಕೇಂದ್ರದ ಬಹುದೊಡ್ಡ ಯೋಜನೆ

ಕೇಂದ್ರ ಸರ್ಕಾರದ ಈ ಯೋಜನೆಯಡಿಯಲ್ಲಿ 5000 ಹೂಡಿಕೆ ಮಾಡಿದರೆ ಸಿಗಲಿದೆ 27 ಲಕ್ಷ ರೂಪಾಯಿ

Sukanya Samriddhi Scheme Details: ಪೋಷಕರು ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸುದು ಸರ್ವೇ ಸಾಮಾನ್ಯ ಆಗಿದೆ. ಏಕೆಂದರೆ ಮಕ್ಕಳ ಸಂಪೂರ್ಣ ಜವಾದ್ದಾರಿ ಪಾಲಕರದ್ದಾಗಿರುತ್ತದೆ. ಅದರಲ್ಲೂ ಕೂಡ ಹೆಣ್ಣು ಮಕ್ಕಳ ಚಿಂತೆ ಪೋಷಕರಿಗೆ ಹೆಚ್ಚಾಗಿರುತ್ತದೆ.

ಮಕ್ಕಳ ವಿಧ್ಯಾಬ್ಯಾಸಕ್ಕಾಗಿ, ಮದುವೆಗಾಗಿ ಹಣ ಹೊಂದಿಸಲು ಬಹಳ ಕಷ್ಟ ಪಡುತ್ತಾರೆ. ಹೆತ್ತವರ ಈ ಚಿಂತೆಯನ್ನು ತಪ್ಪಿಸುವ ಸಲುವಾಗಿ ಕೇಂದ್ರ ಸರ್ಕಾರ SSY ಹೂಡಿಕೆ ಯೋಜನೆಯನ್ನ ಜಾರಿಗೆ ತಂದಿದೆ. ಈ ಯೋಜನೆಯ ಬಗ್ಗೆ ನಾವೀಗ ಸಂಪೂರ್ಣವಾಗಿ ತಿಳಿದುಕೊಳ್ಳೋಣ.

Sukanya Samriddhi Scheme Details
Image Credit: Times Now News

ಸುಕನ್ಯಾ ಸಮೃದ್ಧಿ ಯೋಜನೆ
ಮಕ್ಕಳ ಬಗ್ಗೆ ಪೋಷಕರಿಗೆ ಚಿಂತೆ ಇರುವುದು ಸಹಜ, ಅದರಲ್ಲೂ ಹೆಣ್ಣು ಮಕ್ಕಳ ಮೇಲೆ ಮೇಲೆ ಹೆತ್ತವರ ಜವಾದ್ದಾರಿ ಹೆಚ್ಚಾಗಿರುತ್ತದೆ. ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಸಣ್ಣ ಹೂಡಿಕೆ ಮಾಡುದು ಬಹಳ ಉತ್ತಮ. ಇನ್ನು ಹೂಡಿಕೆ ಮಾಡುವಾಗ ಯಾವುದೇ ಅಪಾಯ ಇಲ್ಲದೆ, ಸರಿಯಾದ ಹಣ ನಿಮ್ಮ ಕೈ ಸೇರಬೇಕೆಂದರೆ ಸರ್ಕಾರದ ಯೋಜನೆಗಳಲ್ಲಿ ಹೂಡಿಕೆ ಮಾಡುದು ಉತ್ತಮ. ನೀವು ಈ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಸಣ್ಣ ಮೊತ್ತವನ್ನು ಹೂಡಿಕೆ ಮಾಡಿದರೆ ಮೆಚುರಿಟಿ ಅವಧಿಗೆ ಲಕ್ಷಾಂತರ ರೂಪಾಯಿ ಹಣವನ್ನು ಹಿಂಪಡೆಯಬಹುದಾಗಿದೆ.

ಹೂಡಿಕೆ ವಿಧಾನದ ಬಗ್ಗೆ ಮಾಹಿತಿ…
ಪೋಷಕರು ಹೆಣ್ಣು ಮಗು ಹುಟ್ಟಿದ 10 ವರ್ಷಗಳ ಒಳಗೆ SSY ಯೋಜನೆಯಡಿಯಲ್ಲಿ ಹೂಡಿಕೆ ಆರಂಭಿಸಬೇಕು. ಕೇವಲ 250 ರೂಪಾಯಿಂದ 1.5 ಲಕ್ಷ ರೂಪಾಯಿಗಳ ವರೆಗೆ ಹೂಡಿಕೆ ಮಾಡಲು ಅವಕಾಶವಿದೆ. ಇದು 15 ವರ್ಷಗಳ ಹೂಡಿಕೆ ಅವಧಿಯನ್ನು ಪಡೆದುಕೊಂಡಿದೆ. ಈ ಯೋಜನೆಯಲ್ಲಿ ನಿರಂತರ ಹೂಡಿಕೆ ಅಗತ್ಯವಾಗಿದೆ. ಹಾಗೆ ಯೋಜನೆಯ ಮುಕ್ತಾಯದ ನಂತರದ 6 ವರ್ಷಗಳವರೆಗೆ ಲಾಕ್ ಇನ್ ಪಿರಿಯಡ್ ನಲ್ಲಿ ಠೇವಣಿ ಇಡಬಹುದಾಗಿದೆ.

SSY Investment Profit
Image Credit: Aajtak

5000 ಹೂಡಿಕೆ ಮಾಡಿದರೆ ಸಿಗಲಿದೆ 27 ಲಕ್ಷ ರೂಪಾಯಿ
ನಿಮ್ಮ ಹೆಣ್ಣು ಮಗು ಹುಟ್ಟಿದ ತಕ್ಷಣ ಆಕೆಯ ಹೆಸರಿನಲ್ಲಿ 5000 ಹೂಡಿಕೆ ಆರಂಭಿಸಿದರೆ, ಆಕೆಗೆ 21 ವರ್ಷ ವಯಸ್ಸಾದಾಗ 27 ಲಕ್ಷಗಳನ್ನು ನೀವು ಪಡೆದುಕೊಳ್ಳಬಹುದಾಗಿದೆ. ಆ ಮಗುವಿನ ಉನ್ನತ ವಿಧ್ಯಾಬ್ಯಾಸಕ್ಕೆ ಅಥವಾ ಮದುವೆಗೆ ಈ ಹಣವನ್ನ ಬಳಕೆ ಮಾಡಿಕೊಳ್ಳಬಹುದಾಗಿದೆ. ಸುಕನ್ಯಾ ಸಮೃದ್ಧಿ ಯೋಜನೆಯಡಿಯಲ್ಲಿ ನೀವು 8 ರಷ್ಟು ಬಡ್ಡಿಯನ್ನು ಪಡೆದುಕೊಳ್ಳಬಹುದಾಗಿದೆ.

Join Nadunudi News WhatsApp Group

Join Nadunudi News WhatsApp Group