PPF And SSY: ಮಾರ್ಚ್ 31 ರ ನಂತರ ಬಂದ್ ಆಗಲಿದೆ ಈ ಜನರ ಸುಕನ್ಯಾ ಸಮೃದ್ಧಿ ಮತ್ತು PPF ಖಾತೆ, ಕೇಂದ್ರದ ಘೋಷಣೆ.
ಮಾರ್ಚ್ 31 ರ ನಂತರ ಸುಕನ್ಯಾ ಸಮೃದ್ಧಿ ಮತ್ತು PPF ಖಾತೆ ಹೊಂದಿದವರಿಗೆ ಹೊಸ ರೂಲ್ಸ್
Sukanya Samriddhi Yojana And Public Provident Fund: ಸಾರ್ವಜನಿಕರಿಗಾಗಿ ವಿವಿಧ ಹೂಡಿಕೆಯ ವಿಧಾನಗಳಿವೆ. ಜನರು ಅನೇಕ ರೀತಿಯ ಹೂಡಿಕೆಯ ಯೋಜನೆಯಲ್ಲಿ ಉಳಿತಾಯವನ್ನು ಆರಂಭಿಸಿರುತ್ತಾರೆ. ಸದ್ಯ Sukanya Samriddhi Yojana ಹಾಗೂ Public Provident Fund ನಲ್ಲಿ ಹೂಡಿಕೆ ಮಾಡಿದವರಿಗೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ.
ಈ ಎರಡು ಯೋಜನೆಯಲ್ಲಿ ಹೂಡಿಕೆ ಮಾಡಿದವರು ನಿಗದಿತ ದಿನಾಂಕದೊಳಗೆ ಈ ಕೆಲಸಗಳನ್ನು ಮಾಡುವುದು ಕಡ್ಡಾಯವಾಗಿದೆ. ಒಂದು ವೇಳೆ ಈ ಕೆಲಸ ಆಗದಿದ್ದರೆ ನಿಮ್ಮ ಯೋಜನೆಯಲ್ಲಿನ ಖಾತೆಗಳು ನಿಷ್ಕ್ರಿಯವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಸದ್ಯ ಕೇಂದ್ರ ಎಚ್ಚರಿಕೆಯನ್ನ ನೀಡಿದ್ದು ಸುಕನ್ಯಾ ಸಮೃದ್ಧಿ ಮತ್ತು PPF ಖಾತೆ ಇದ್ದವರು ಈ ಕೆಲಸ ಮಾಡುವುದು ಕಡ್ಡಾಯವಾಗಿದೆ.
![Sukanya Samriddhi Yojana Latest Update](https://nadunudi.in/wp-content/uploads/2024/01/Sukanya-Samriddhi-Yojana-Latest-Update.jpg)
ಮಾರ್ಚ್ 31 ರ ನಂತರ ಬಂದ್ ಆಗಲಿದೆ ಈ ಜನರ ಸುಕನ್ಯಾ ಸಮೃದ್ಧಿ ಮತ್ತು PPF ಖಾತೆ
ಸದ್ಯ ಕೇಂದ್ರದಿಂದ ಸುಕನ್ಯಾ ಸಮೃದ್ಧಿ ಮತ್ತು PPF ಖಾತೆ ಹೊಂದಿದವರಿಗೆ ಹೊಸ ರೂಲ್ಸ್ ಜಾರಿಯಾಗಿದೆ. Public Provident Fund (PPF) ಮತ್ತು Sukanya Samriddhi Yojana (SSY) ಖಾತೆಯನ್ನು ಸಕ್ರಿಯವಾಗಿಡಲು ಕನಿಷ್ಠ ಬ್ಯಾಲೆನ್ಸ್ ಅನ್ನು ನಿರ್ವಹಿಸಬೇಕು.
ಈ ನಿಟ್ಟಿನಲ್ಲಿ ಹೊಸ ನಿಯಮವೂ ಜಾರಿಗೆ ಬಂದಿದೆ. ಮಾರ್ಚ್ 31, 2024 ರ ವರೆಗೆ ಈ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಅನ್ನು ನಿರ್ವಹಿಸಬೇಕಾಗುತ್ತದೆ. ಖಾತೆದಾರರು ತನ್ನ ಬ್ಯಾಲೆನ್ಸ್ ಅನ್ನು ನಿರ್ವಹಿಸದಿದ್ದರೆ ಅವನ ಖಾತೆಯು ನಿಷ್ಕ್ರಿಯವಾಗಬಹುದು. ನಿಷ್ಕ್ರಿಯ ಖಾತೆಯನ್ನು ಪುನಃ ತೆರೆಯಲು, ಖಾತೆದಾರರು ದಂಡವನ್ನು ಪಾವತಿಸಬೇಕಾಗುತ್ತದೆ. ಇದೀಗ ನಾವು ಸುಕನ್ಯಾ ಸಮೃದ್ಧಿ ಮತ್ತು PPF ಖಾತೆಯಲ್ಲಿ ನಿರ್ವಹಿಸಬೇಕಾದ ಕನಿಷ್ಠ ಬ್ಯಾಲೆನ್ಸ್ ಎಷ್ಟು..? ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.
![Public Provident Fund](https://nadunudi.in/wp-content/uploads/2024/01/Public-Provident-Fund-1.png)
PPF ಖಾತೆಯಲ್ಲಿ ನಿರ್ವಹಿಸಬೇಕಾದ ಕನಿಷ್ಠ ಬ್ಯಾಲೆನ್ಸ್ ಎಷ್ಟು..?
ಪಿಪಿಎಫ್ ಖಾತೆದಾರರು ಕನಿಷ್ಠ 500 ರೂ.ಗಳನ್ನು ಠೇವಣಿ ಇಡಬೇಕಾಗುತ್ತದೆ. ಆರ್ಥಿಕ ವರ್ಷದಲ್ಲಿ ಕನಿಷ್ಠ 500 ರೂ. ಖಾತೆಯಲ್ಲಿ ಸಾಕಷ್ಟು ಬ್ಯಾಲೆನ್ಸ್ ಇಲ್ಲದಿದ್ದರೆ ಖಾತೆಯನ್ನು ಮುಚ್ಚಬಹುದು. ಪಿಪಿಎಫ್ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳಲು ಕೊನೆಯ ದಿನಾಂಕ 31 ಮಾರ್ಚ್ 2024 ಆಗಿದೆ. ಮಾರ್ಚ್ 31 ರೊಳಗೆ ಖಾತೆಗೆ 500 ರೂ.ಗಳನ್ನು ಜಮಾ ಮಾಡದಿದ್ದರೆ, ಖಾತೆಯನ್ನು ಪುನಃ ಸಕ್ರಿಯಗೊಳಿಸಲು ದಂಡವನ್ನು ಪಾವತಿಸಬೇಕಾಗುತ್ತದೆ. ಅದರ ದಂಡವನ್ನು ವರ್ಷಕ್ಕೆ 50 ರೂ.ನಂತೆ ಪಾವತಿಸಬೇಕು.
SSY ಖಾತೆಯಲ್ಲಿ ನಿರ್ವಹಿಸಬೇಕಾದ ಕನಿಷ್ಠ ಬ್ಯಾಲೆನ್ಸ್ ಎಷ್ಟು..?
ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಕನಿಷ್ಠ ಬ್ಯಾಲೆನ್ಸ್ 250 ರೂ. ಆಗಿದೆ. ಅಂದರೆ ಖಾತೆಯನ್ನು ಸಕ್ರಿಯವಾಗಿಡಲು ಆರ್ಥಿಕ ವರ್ಷದಲ್ಲಿ 250 ರೂ.ಗಳನ್ನು ಹೂಡಿಕೆ ಮಾಡುವುದು ಅಗತ್ಯ. ನೀವು ಈ ಯೋಜನೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಹೂಡಿಕೆ ಮಾಡದಿದ್ದರೆ ಖಾತೆಯನ್ನು ಫ್ರೀಜ್ ಮಾಡಲಾಗುತ್ತದೆ. ಖಾತೆಯನ್ನು ಮತ್ತೆ ಸಕ್ರಿಯಗೊಳಿಸಲು, ಖಾತೆದಾರನು ವರ್ಷಕ್ಕೆ 50 ರೂಪಾಯಿ ದಂಡವನ್ನು ಪಾವತಿಸಬೇಕಾಗುತ್ತದೆ.