Sukanya Samriddhi: ಮಗಳ ಮದುವೆಗೆ ಸಿಗಲಿದೆ 63 ಲಕ್ಷ ರೂಪಾಯಿ, ಕೇಂದ್ರದ ಯೋಜನೆಯ ಲಾಭ ಪಡೆದುಕೊಳ್ಳಿ.
ಮಗಳ ಹೆಸರಿನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆ ತೆರೆದರೆ ಮಗಳ ಮದುವೆಯ ಸಮಯದಲ್ಲಿ 63 ಲಕ್ಷ ರೂಪಾಯಿಯ ತನಕ ಲಾಭ ಪಡೆದುಕೊಳ್ಳಬಹುದು.
Sukanya Samriddhi Yojana Benefits: ಕೇಂದ್ರ ಸರ್ಕಾರದಿಂದ ಬಿಡುಗಡೆಯಾದ ಸುಕನ್ಯಾ ಸಮೃದ್ಧಿ ಯೋಜನೆಯಿಂದ (Sukany samriddhi Yojana) ಹೆಣ್ಣು ಮಕ್ಕಳ ಪೋಷಕರಿಗೆ ಹೊಸ ಸುದ್ದಿ ಒಂದು ಹೊರ ಬಿದ್ದಿದೆ.
ನರೇಂದ್ರ ಮೋದಿ (Narendra Modi) ಸರ್ಕಾರವು ಹೆಣ್ಣು ಮಕ್ಕಳಿಗಾಗಿ ಈ ಯೋಜನೆಯಿಂದ ಅಧಿಕ ಲಾಭವಾಗುತ್ತವಂತೆ ಹೊಸದಾದ ಸಿಹಿ ಸುದ್ದಿಯೊಂದನ್ನು ಹೊರ ಹಾಕಿದ್ದಾರೆ. ಸುಕನ್ಯಾ ಸಮೃದ್ಧಿ ಯೋಜನೆಯಿಂದ ಹಣ ಹೂಡಿಕೆ ಮಾಡಿ ಅಧಿಕ ಲಾಭ ಪಡೆಯಬಹುದು.
![If the Sukanya Samriddhi Yojana account is opened in the name of the daughter, the benefit can be up to Rs 63 lakh at the time of the daughter's marriage.](https://nadunudi.in/wp-content/uploads/2023/04/sukanya-samriddhi-yojana-invetment.png)
ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಬಡ್ಡಿ ದರ ಹೆಚ್ಚಳ ಮಾಡಿದ ಕೇಂದ್ರ ಸರ್ಕಾರ
ಹೆಣ್ಣು ಮಕ್ಕಳ ಪೋಷಕರಿಗೆ ಸಹಾಯ ಆಗುವ ಯೋಚನೆಯಲ್ಲಿ ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಇನ್ನು ಈ ಉಳಿತಾಯ ಯೋಜನೆಯಲ್ಲಿ ಸರ್ಕಾರ ಬಡ್ಡಿ ದರವನ್ನು ಹೆಚ್ಚಳ ಮಾಡಿದೆ.
ಕೇಂದ್ರ ಸರ್ಕಾರ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಬಡ್ಡಿ ದರವನ್ನು 7.60% ರಿಂದ 8% ಕ್ಕೆ ಹೆಚ್ಚಿಸಿದೆ. ಇದರಿಂದ ಹೂಡಿಕೆದಾರರು ಧೀರ್ಘಾವಧಿಗೆ ತಮ್ಮ ಹೂಡಿಕೆಯ ಮೇಲೆ ಗರಿಷ್ಠ ಲಾಭವನ್ನು ಪಡೆಯಬಹುದಾಗಿದೆ. ಪೋಷಕರಿಗೆ ಹೆಣ್ಣು ಮಗು ಜನಿಸಿದ ನಂತರ ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಮಗಳು ಮದುವೆ ಆಗುವ ಸಮಯಕ್ಕೆ ಅಧಿಕ ಲಾಭ ಸಿಗಲಿದೆ.
![If Sukanya Samriddhi account is opened in daughter's name then one can get more benefit during daughter's marriage.](https://nadunudi.in/wp-content/uploads/2023/04/sukanya-samriddhi-yojana-interest-rate.png)
ಸುಕನ್ಯಾ ಸಮೃದ್ಧಿ ಯೋಜನೆಯ ಲಾಭ
ಪೋಷಕರು ಹೆಣ್ಣು ಮಗುವಿನ ಜನನದ ನಂತರ SSY ಖಾತೆಯಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದರೆ 15 ವರ್ಷಗಳವರೆಗೆ ಠೇವಣಿ ಇಡಲು ಸಾಧ್ಯವಾಗುತ್ತದೆ. ಒಬ್ಬರ ಸುಕನ್ಯಾ ಸಮೃದ್ಧಿ ಯೋಜನೆ ಖಾತೆಗೆ 14 ವರ್ಷ ವಯಸ್ಸಾಗುವವರೆಗೂ ಠೇವಣಿ ಮಾಡಬಹುದು. ನಂತರ ನಿಮ್ಮ ಹೆಣ್ಣು ಮಗಳಿಗೆ 18 ವರ್ಷ ವಯಸ್ಸಾದಾಗ ಮೆಚ್ಯುರಿಟಿ ಮೊತ್ತದ 50 ಪ್ರತಿಶತದಷ್ಟು ಹಿಂದೆ ಪಡೆಯಬಹುದು.
![The central government has implemented the Sukanya Samriddhi Yojana for the safety of the girl child and under this scheme the girl children of the country can get a lot of benefits.](https://nadunudi.in/wp-content/uploads/2023/04/sukanya-samriddhi-yojana-account.png)
ಉಳಿದ ಮೆಚ್ಯುರಿಟಿ ಮೊತ್ತವನ್ನು ಹೆಣ್ಣು ಮಗುವಿಗೆ 21 ವರ್ಷವಾದಾಗ ಹಿಂಪಡೆಯಬಹುದು. ಹೆಣ್ಣು ಮಗಳು ಜನಿಸಿದ ನಂತರ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ತಿಂಗಳಿಗೆ 12,500 ರೂಪಾಯಿ ಹೂಡಿಕೆ ಮಾಡಲು ಪ್ರಾರಂಭಿಸಿದರೆ. ಆ ಹುಡುಗಿಗೆ 21 ವರ್ಷ ಆದನಂತರ SSY ಮೆಚ್ಯುರಿಟಿ ಮೊತ್ತವು 63,79,634 ರೂಪಾಯಿ ಆಗಿರುತ್ತದೆ.