Sukanya Samriddhi: ಕೇಂದ್ರದ ಈ ಯೋಜನೆಯಲ್ಲಿ 250 ರೂ ಹೂಡಿಕೆ ಮಾಡಿದ್ರೆ ನಿಮ್ಮ ಮಗಳ ಮದುವೆ ಖರ್ಚು ಸರ್ಕಾರವೇ ಭರಿಸಲಿದೆ

ಮಗಳ ಹೆಸರಿನಲ್ಲಿ 250 ರೂ ಹೂಡಿಕೆ ಮಾಡಿದರೆ ಸಿಗಲಿದೆ ಲಕ್ಷಕ್ಕೂ ಅಧಿಕ ಲಾಭ

Sukanya Samriddhi Yojana Investment: ಸಾಮಾನ್ಯವಾಗಿ ಕೇಂದ್ರ ಸರ್ಕಾರ ದೇಶದ ಮಹಿಳೆಯರಿಗೆ ಹೆಚ್ಚಿನ ಯೋಜನೆಯನ್ನು ಪರಿಚಯಿಸುತ್ತಿದೆ. ಇನ್ನು ಮನೆಯಲ್ಲಿ ಹೆಣ್ಣು ಮಗು ಜನಿಸಿದರೆ ತಂದೆ ತಾಯಿಗೆ ಆ ಮಗುವಿನ ಭವಿಷ್ಯದ ಚಿಂತೆ ಹೆಚ್ಚಿರುತ್ತದೆ. ತಮ್ಮ ಮಗಳಿಗೆ ಉತ್ತಮ ಜೀವನದ ಜೊತೆಗೆ ಶಿಕ್ಷಣವನ್ನು ನೀಡಬೇಕೆನ್ನುವ ಆಸೆ ಎಲ್ಲ ಪೋಷಕರಲ್ಲಿಯೂ ಇರುವುದು ಸಾಮಾನ್ಯ.

ಹೀಗಾಗಿ ಕೇಂದ್ರ ಸರಕಾರ ಹೆಣ್ಣು ಮಕ್ಕಳ ಭವಿಷ್ಯದ ಚಿಂತೆಯನ್ನು ಪೋಷಕರಿಗೆ ಕಡಿಮೆ ಮಾಡಲು SSY ಹೂಡಿಕೆ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆ ಹೆಣ್ಣು ಮಕ್ಕಳ ಭವಿಷ್ಯವನ್ನು ಭದ್ರಪಡಿಸಲು ಉತ್ತಮವಾಗಿದೆ. ಈ ಯೋಜನೆಯಡಿ ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಮತ್ತು ಮದುವೆಯ ವೆಚ್ಚವನ್ನು ಸರಕಾರವೇ ಭರಿಸುತ್ತದೆ. ಈ ಯೋಜನೆಯ ಬಗ್ಗೆ ನಾವೀಗ ಸಂಪೂಣವಾಗಿ ತಿಳಿದುಕೊಳ್ಳೋಣ.

Sukanya Samriddhi Yojana Investment
Image Credit: etmoney

ಮಗಳ ಹೆಸರಿನಲ್ಲಿ 250 ರೂ ಹೂಡಿಕೆ ಮಾಡಿದರೆ ಸಿಗಲಿದೆ ಲಕ್ಷಕ್ಕೂ ಅಧಿಕ ಲಾಭ
ಮೋದಿ ಸರ್ಕಾರ ತನ್ನ ಮೊದಲ ಅವಧಿಯಲ್ಲಿ ಈ ಯೋಜನೆಯನ್ನು ಪ್ರಾರಂಭಿಸಿದೆ. ಪೋಷಕರು ಹೆಣ್ಣು ಮಗು ಹುಟ್ಟಿದ 10 ವರ್ಷಗಳ ಒಳಗೆ SSY ಯೋಜನೆಯಡಿಯಲ್ಲಿ ಹೂಡಿಕೆ ಆರಂಭಿಸಬೇಕು. ಕೇವಲ 250 ರೂಪಾಯಿಂದ 1.5 ಲಕ್ಷ ರೂಪಾಯಿಗಳ ವರೆಗೆ ಹೂಡಿಕೆ ಮಾಡಲು ಅವಕಾಶವಿದೆ. ಇದು 15 ವರ್ಷಗಳ ಹೂಡಿಕೆ ಅವಧಿಯನ್ನು ಪಡೆದುಕೊಂಡಿದೆ.

ಸುಕನ್ಯಾ ಸಮೃದ್ಧಿ ಖಾತೆ ತೆರೆಯುವ ವಿಧಾನ…?
*SSY ಅರ್ಜಿ ನಮೂನೆಯನ್ನು Post Office/Bank Website ನಲ್ಲಿ Download ಮಾಡಿಕೊಳ್ಳಬೇಕು.

*ಮಗಳ ಫೋಟೋ, ಜನ್ಮ ಪ್ರಮಾಣಪತ್ರ, ಪೋಷಕರ ಗುರುತಿನ ಚೀಟಿ ಮತ್ತು ಇತರ ದಾಖಲೆಗಳನ್ನು ಫಾರ್ಮ್ ನಲ್ಲಿ ಭರ್ತಿ ಮಾಡಬೇಕು.

Join Nadunudi News WhatsApp Group

*ಈ ಫಾರ್ಮ್ ಮತ್ತು ದಾಖಲೆಗಳನ್ನು ಹತ್ತಿರದ ಬ್ಯಾಂಕ್ ಅಥವಾ Post Office ಗೆ ಸಲ್ಲಿಸಬೇಕು.

*ಫಾರ್ಮ್ ಮತ್ತು ಮೂಲ ದಾಖಲೆಗಳನ್ನು ಪರಿಶೀಲಿಸಿದ ನಂತರ ಮಗುವಿನ ಹೆಸರಿನಲ್ಲಿ ಖಾತೆ ತೆರೆಯಲಾಗುತ್ತದೆ.

*ಈ ಎಲ್ಲ ಕಾರ್ಯಗಳು ಮುಗಿದ ನಂತರ SSY ಅಲ್ಲಿ ಹೂಡಿಕೆ ಮಾಡಬೇಕು.

Sukanya Samriddhi Yojana Profit
Image Credit: Times Now News

ಮಾರ್ಚ್ 31 ರೊಳಗೆ ಈ ಕೆಲಸ ಪೂರ್ಣಗೊಳಿಸಿ
ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ Minimum Balance 250 ರೂ. ಆಗಿದೆ. ಅಂದರೆ ಖಾತೆಯನ್ನು ಸಕ್ರಿಯವಾಗಿಡಲು ಆರ್ಥಿಕ ವರ್ಷದಲ್ಲಿ 250 ರೂ. ಗಳನ್ನು ಹೂಡಿಕೆ ಮಾಡುವುದು ಅಗತ್ಯ. ನೀವು ಈ ಯೋಜನೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಹೂಡಿಕೆ ಮಾಡದಿದ್ದರೆ ಖಾತೆಯನ್ನು ಬಂದ್ ಮಾಡಲಾಗುತ್ತದೆ. ಖಾತೆಯನ್ನು ಮತ್ತೆ ಸಕ್ರಿಯಗೊಳಿಸಲು ಖಾತೆದಾರನು ವರ್ಷಕ್ಕೆ 50 ರೂಪಾಯಿ ದಂಡವನ್ನು ಪಾವತಿಸಬೇಕಾಗುತ್ತದೆ. ನೀವು ನಿಮ್ಮ SSY ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಅನ್ನು ಮಾರ್ಚ್ 31 ರೊಳಗೆ ಕಾಯ್ದಿರಿಸುವುದು ಅಗತ್ಯ.

Join Nadunudi News WhatsApp Group