SSY Withdrawal: ಅವಧಿಗೂ ಮುನ್ನವೇ ಸುಕನ್ಯಾ ಸಮೃದ್ಧಿ ಯೋಜನೆಯ ಹಣ ವಾಪಾಸ್ ಪಡೆಯಬಹುದೇ…? ಇಲ್ಲಿದೆ ನಿಯಮ

SSY ಯೋಜನೆಯಲ್ಲಿ ಈ ಮೂರು ಸಂದರ್ಭದಲ್ಲಿ ಮಾತ್ರ ಅವಧಿಗೂ ಮುನ್ನ ಹಣವನ್ನು ಹಿಂಪಡೆಯಲು ಸಾಧ್ಯ

Sukanya Samriddhi Yojana Money Withdrawal Rules: ಕೇಂದ್ರ ಸರ್ಕಾರ ಹೆಣ್ಣು ಮಕ್ಕಳಿಗಾಗಿ ಪರಿಚಯಿಸಿರುವ Sukanya Samriddhi ಯೋಜನೆಯ ಬಗ್ಗೆ ಈಗಾಗಲೇ ನಿಮಗೆ ಮಾಹಿತಿ ತಿಳಿದಿರಬಹುದು. ಈ ಯೋಜನೆಯಡಿ ದೇಶದ್ಲಲಿ ಲಕ್ಷಾಂತರ ಪೋಷಕರು ತಮ್ಮ ಮಕ್ಕಳ ಹೆಸರಿನಲ್ಲಿ ಹೂಡಿಕೆಯನ್ನು ಆರಂಭಿಸಿದ್ದಾರೆ.

ಹೆಣ್ಣು ಮಕ್ಕಳ ಮುಂದಿನ ಭವಿಷ್ಯಕ್ಕೆ SSY ಸಹಕಾರಿಯಾಗುತ್ತದೆ. ಇನ್ನು SSY ಹೂಡಿಕೆದಾರರಿಗೆ ಅವಧಿಗೂ ಮುನ್ನವೇ ಸುಕನ್ಯಾ ಸಮೃದ್ಧಿ ಯೋಜನೆಯ ಹಣ ವಾಪಾಸ್ ಪಡೆಯಬಹುದೇ…? ಎನ್ನುವ ಬಗ್ಗೆ ಪ್ರಶ್ನೆ ಹುಟ್ಟಿರಬಹುದು. ನೀವು SSY ಯೋಜನೆಯಲ್ಲಿ ಈ ಮೂರು ಸಂದರ್ಭದಲ್ಲಿ ಮಾತ್ರ ಅವಧಿಗೂ ಮುನ್ನ ಹಣವನ್ನು ಹಿಂಪಡೆಯಲು ಸಾಧ್ಯವಾಗುತ್ತದೆ. ಹಾಗಾದರೆ ಅವಧಿಗೂ ಮುನ್ನ SSY ಹಣ ಪಡೆಯುವುದು ಹೇಗೆ ಎಂದು ತಿಳಿಯೋಣ ಬನ್ನಿ.

Sukanya Samriddhi Yojana Money Withdrawal Rules
Image Credit: Kannada News

ಅವಧಿಗೂ ಮುನ್ನವೇ ಸುಕನ್ಯಾ ಸಮೃದ್ಧಿ ಯೋಜನೆಯ ಹಣ ವಾಪಾಸ್ ಪಡೆಯಬಹುದೇ…?
ಮಗಳು ಮದುವೆಯಾದಾಗ
ನಿಮ್ಮ ಮಗಳು 18 ನೇ ವಯಸ್ಸಿನಲ್ಲಿ ಮದುವೆಯಾದರೆ ನೀವು ಖಾತೆಯಲ್ಲಿನ 50 ಪ್ರತಿಶತವನ್ನು ಹಿಂಪಡೆಯಬಹುದು. ಆದರೆ ಇದು ಕಳೆದ ಆರ್ಥಿಕ ವರ್ಷದ ಒಟ್ಟು ಮೊತ್ತದ ಶೇ.50 ರಷ್ಟಿದೆ. ಇದಕ್ಕಾಗಿ ಹುಡುಗಿಯ ಮದುವೆಗೆ ಒಂದು ತಿಂಗಳ ಮೊದಲು ಮದುವೆಯ ನಂತರ ಮೂರು ತಿಂಗಳವರೆಗೆ ಹಣವನ್ನು ಹಿಂಪಡೆಯಬಹುದು.

ಉನ್ನತ ವ್ಯಾಸಂಗಕ್ಕಾಗಿ
ನೀವು 10 ನೇ ತರಗತಿಯ ನಂತರ ನಿಮ್ಮ ಮಗುವನ್ನು ಉನ್ನತ ಶಿಕ್ಷಣಕ್ಕೆ ಕಳುಹಿಸಲು ಬಯಸಿದರೆ ಮತ್ತು ಇದಕ್ಕಾಗಿ ನಿಮಗೆ ಹಣದ ಅಗತ್ಯವಿದ್ದರೆ ನಿಮ್ಮ ಮಗಳು 18 ವರ್ಷಗಳನ್ನು ಪೂರ್ಣಗೊಳಿಸಿದ ನಂತರ ನೀವು ಮೊತ್ತದ 50 ಪ್ರತಿಶತದ ವರೆಗೆ ಹಿಂಪಡೆಯಬಹುದು. ಈ ಮೊತ್ತವು ಕಳೆದ ಹಣಕಾಸು ವರ್ಷದ ಒಟ್ಟು ಬಾಕಿಯ 50 ಪ್ರತಿಶತವೂ ಆಗಿರಬಹುದು. ಆದರೆ ಇದಕ್ಕಾಗಿ ನೀವು ಉನ್ನತ ವ್ಯಾಸಂಗಕ್ಕೆ ಪುರಾವೆಗಳನ್ನು ನೀಡಬೇಕಾಗುತ್ತದೆ.

Sukanya Samriddhi Yojana Benefits
Image Credit: India Tv News

ಹುಡುಗಿಯ ಮರಣದ ನಂತರ
ಯೋಜನೆಯು ಪಕ್ವಗೊಳ್ಳುವ ಮೊದಲು ಹುಡುಗಿ ವಯಸ್ಸಿಗೆ ಬಂದರೆ, ಆಕೆಯ ಪೋಷಕರು ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಹಣವನ್ನು ಬಡ್ಡಿಯೊಂದಿಗೆ ಪಡೆಯುತ್ತಾರೆ. ಆದರೆ, ಇದಕ್ಕಾಗಿ ಬಾಲಕಿಯ ಮರಣ ಪ್ರಮಾಣ ಪತ್ರ ಸಲ್ಲಿಸಬೇಕು.

Join Nadunudi News WhatsApp Group

SSY ಯೋಜನೆಯ ನಿಯಮಗ ಬಗ್ಗೆ ತಿಳಿದುಕೊಳ್ಳಿ
•ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ ಖಾತೆ ತೆರೆಯಲು ಮಗುವಿನ ಗರಿಷ್ಠ ವಯಸ್ಸು 10 ವರ್ಷ ಆಗಿದೆ.

•ಈ ಯೋಜನೆಯಲ್ಲಿ ಮಗಳಿಗೆ 21 ವರ್ಷ ತುಂಬಿದ ನಂತರ ಮಾತ್ರ ಮೆಚ್ಯೂರಿಟಿ ಮೊತ್ತ ಲಭ್ಯವಾಗುತ್ತದೆ.

•18 ವರ್ಷ ವಯಸ್ಸಿನಲ್ಲಿ ನೀವು ಮೊತ್ತದ 50 ಪ್ರತಿಶತವನ್ನು ಹಿಂತೆಗೆದುಕೊಳ್ಳಬಹುದು.

•ಸದ್ಯ ಜನವರಿ ಮಾರ್ಚ್ ನ ತ್ರೈಮಾಸಿಕಕ್ಕೆ ಸರ್ಕಾರವು SSY ಬಡ್ಡಿದರದವನ್ನು 20 ಬೇಸಿಸ್ ಪಾಯಿಂಟ್ ಗಳಷ್ಟು ಹೆಚ್ಚಿಸಲಿದ್ದು, SSY ಬಡ್ಡಿದರವು 8 ರಿಂದ 8.2 ಕ್ಕೆ ಏರಿಕೆಯಾಗಿದೆ.

•SSY ಯೋಜನೆಯಲ್ಲಿ ಕನಿಷ್ಠ 250 ರೂ.ಗಳಿಂದ ಗರಿಷ್ಠ 1.50 ಲಕ್ಷ ರೂ.ವರೆಗೆ ಹೂಡಿಕೆ ಮಾಡಬಹುದು.

Join Nadunudi News WhatsApp Group