SSY v/s Mutual: ಮಗಳ ಹೆಸರಲ್ಲಿ ಹಣ ಕೂಡಿಡಲು SSY ಮತ್ತು Mutual Fund ನಲ್ಲಿ ಯಾವುದು ಬೆಸ್ಟ್…? ಇಲ್ಲಿದೆ ಡೀಟೇಲ್ಸ್.

ಹೂಡಿಕೆ ಮಾಡಲು SSY ಹಾಗೂ Mutual ಫಂಡ್ ನಲ್ಲಿ ಯಾವುದು ಬೆಸ್ಟ್...?

Sukanya Samriddhi Yojana v/s Mutual Fund Investment: ಇನ್ನು ಮಕ್ಕಳ ಭವಿಷ್ಯಕ್ಕಾಗಿ ಪೋಷಕರು ಉಳಿತ್ಯಾ ಯೋಜನೆಗಳಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ. ಹೂಡಿಕೆಗಾಗಿ ಸರ್ಕಾರದ ಯೋಜನೆಗಳು ಸಾಕಷ್ಟಿವೆ ಎನ್ನಬಹುದು. ಸರ್ಕಾರೀ ಯೋಜನೆಗಳ ಜೊತೆಗೆ Mutual Fund Investment ಕೂಡ ಲಭ್ಯವಿರುತ್ತದೆ. ಮ್ಯೂಚುವಲ್ ಫಂಡ್ ನಲ್ಲಿ ಮಕ್ಕಳ ಹೆಸರಿನಲ್ಲಿ ಹೂಡಿಕೆ ಮಾಡಿದರೆ ನೀವು ಹೆಚ್ಚಿನ ಲಾಭವನ್ನು ಪಡೆಯಬಹುದು. ಹಾಗಾದರೆ SSY ಮತ್ತು ಮ್ಯೂಚುಯಲ್ ಫಂಡ್ ನಲ್ಲಿ ಯಾವುದು ಬೆಸ್ಟ್ ಎಂದು ತಿಳಿಯೋಣ ಬನ್ನಿ

Sukanya Samriddhi Yojana Profit
Image Credit: Fisdom

Sukanya Samriddhi Yojana v /s Mutual Fund Investment
ಇನ್ನು ಸರ್ಕಾರ Sukanya Samriddhi ಯೋಜನೆಯನ್ನು ಮಕ್ಕಳಿಗಾಗಿಯೇ ಪರಿಚಯಿಸಿದೆ. ಈ ಯೋಜನೆಯಡಿ ಪೋಷಕರು ಹೂಡಿಕೆಯನ್ನು ಮಾಡಬಹುದು. ಇನ್ನು ಹೂಡಿಕೆ ಮಾಡಲು SSY ಹಾಗೂ Mutual Fund ನಲ್ಲಿ ಯಾವುದು ಬೆಸ್ಟ್ ಇರಬಹುದು ಎನ್ನುವ ಬಗ್ಗೆ ನಿಮಗೆ ಗೊಂದಲ ಇರಬಹುದು. ಇದೀಗ ನಾವು ಹೂಡಿಕೆ ಮಾಡಲು SSY ಹಾಗೂ Mutual ಫಂಡ್ ನಲ್ಲಿ ಯಾವುದು ಬೆಸ್ಟ್ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

•Sukanya Samriddhi Yojana
ಸುಕನ್ಯಾ ಸಮೃದ್ಧಿ ಯೋಜನೆಗೆ ಸರ್ಕಾರವು 8 .2 ಪ್ರತಿಶತದಷ್ಟು ಬಡ್ಡಿಯನ್ನು ನೀಡಲಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ನಿಮ್ಮ ಮಗುವಿನ ವಯಸ್ಸು 10 ವರ್ಷವಾಗಿರಬೇಕು. ಮೋದಿ ಸರ್ಕಾರ ತನ್ನ ಮೊದಲ ಅವಧಿಯಲ್ಲಿ ಈ ಯೋಜನೆಯನ್ನು ಪ್ರಾರಂಭಿಸಿದೆ, ಇದರಲ್ಲಿ ಕನಿಷ್ಠ 250 ರೂ.ಗಳಿಂದ ಗರಿಷ್ಠ 1.50 ಲಕ್ಷ ರೂ.ವರೆಗೆ ಹೂಡಿಕೆ ಮಾಡಬಹುದು.

Mutual Fund Investment
Image Credit: India TV News

ಮೋದಿ ಸರ್ಕಾರ ನಡೆಸುತ್ತಿರುವ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ನೀವು ಪ್ರತಿ ತಿಂಗಳು 12,500 ರೂಪಾಯಿಗಳನ್ನು ಹೂಡಿಕೆ ಮಾಡಬೇಕಾಗುತ್ತದೆ. ಇದರಲ್ಲಿ ಈ ಮೊತ್ತವು ಒಂದು ವರ್ಷದಲ್ಲಿ 1.5 ಲಕ್ಷ ಆಗುತ್ತದೆ. ಇದರಲ್ಲಿ ಪ್ರಮುಖವಾದ ವಿಷಯವೆಂದರೆ ನೀವು ಯಾವುದೇ ರೀತಿಯ ತೆರಿಗೆಯನ್ನು ಪಾವತಿಸಬೇಕಾಗಿಲ್ಲ. ಮಗಳ ವಯಸ್ಸು 21 ವರ್ಷವಾದಾಗ, ಮೆಚ್ಯೂರಿಟಿ ಆದ ಮೇಲೆ ಒಟ್ಟು 63,79,634 ರೂ. ಲಾಭವನ್ನು ಪಡೆಯಬಹುದು.

•Mutual Fund Investment
ಮ್ಯೂಚುವಲ್ ಫಂಡ್ ನಿಮ್ಮ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಸಾಧನವಾಗಿದೆ. ಇದರಲ್ಲಿ ಒಂದಿಷ್ಟು ಅಪಾಯವನ್ನು ಎದುರಿಸಬೇಕಾಗುತ್ತದೆ. AMFI ಡೇಟಾ ಪ್ರಕಾರ, ಈಕ್ವಿಟಿ ಮ್ಯೂಚುವಲ್ ಫಂಡ್‌ ಗಳು ಕಳೆದ ಒಂದು ವರ್ಷದಲ್ಲಿ ಹೂಡಿಕೆದಾರರಿಗೆ ಬಹಳ ಆಕರ್ಷಕವಾದ ಆದಾಯವನ್ನು ನೀಡಿವೆ.

Join Nadunudi News WhatsApp Group

Sukanya Samriddhi Yojana vs Mutual Fund Investment
Image Credit: Paisabazaar

ನಿಪ್ಪಾನ್ ಇಂಡಿಯಾದ ಮೌಲ್ಯ ನಿಧಿಯು ಶೇಕಡಾ 42.38 ರಷ್ಟು ಲಾಭವನ್ನು ನೀಡಿದೆ. ಇದರ ಹೊರತಾಗಿ, ಆದಿತ್ಯ ಬಿರ್ಲಾ ಸನ್ ಲೈಫ್ ಪ್ಯೂರ್ ವ್ಯಾಲ್ಯೂ ಫಂಡ್ 43.02 ಶೇಕಡಾ ಆದಾಯವನ್ನು ನೀಡಿದೆ. ಆದರೆ, ಆಕ್ಸಿಸ್ ವ್ಯಾಲ್ಯೂ ಫಂಡ್ 40.16 ಪ್ರತಿಶತದಷ್ಟು ಆದಾಯವನ್ನು ನೀಡಿದೆ, ಎಸ್‌ ಬಿಐ ಲಾಂಗ್ ಟರ್ಮ್ ಇಕ್ವಿಟಿ ಫಂಡ್ 40 ಪ್ರತಿಶತದವರೆಗೆ ಆದಾಯವನ್ನು ನೀಡಿದೆ.

Join Nadunudi News WhatsApp Group