Bank License Cancelled: ರಾತ್ರಿ ಬೆಳಗಾಗುವುದರಲ್ಲಿ ಇನ್ನೊಂದು ಬ್ಯಾಂಕಿನ ಲೈಸನ್ಸ್ ರದ್ದುಮಾಡಿದ RBI, ಆತಂಕದಲ್ಲಿ ಜನರು.

2024 ಎರಡನೆಯ ತಿಂಗಳಿನಲ್ಲೇ ಇನ್ನೊಂದು ಬ್ಯಾಂಕಿನ ಲೈಸೆನ್ಸ್ ರದ್ದು ಮಾಡಿದ RBI

Sumerpur Mercantile Urban Co-operative Bank License Cancelled: ಇತ್ತೀಚಿನ ದಿನಗಳಲ್ಲಿ RBI ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ.ನಿಯಮ ಉಲ್ಲಂಘನೆ ಮಾಡುತ್ತಿರುವ ಬ್ಯಾಂಕ್ ಅಥವಾ ವೈವುದೇ ಸಂಸ್ಥೆಗಳ ವಿರುದ್ಧ RBI ಕ್ರಮ ಕೈಗೊಳ್ಳುತ್ತಿದೆ. ಇತ್ತೀಚೆಗಷ್ಟೇ RBI ಜನಪ್ರಿಯ UPI ಪಾವತಿ ಅಪ್ಲಿಕೇಶನ್ ಆಗಿರುವ Paytm ಅನ್ನು ನಿರ್ಬಂಧಿಸಿದೆ.

ಈ Paytm ಮೇಲಿನ ನಿರ್ಬಂಧದ ನಂತರ ಸಾಕಷ್ಟು ನಿಯಮಗಳು ಜಾರಿಗೆ ಬಂದಿವೆ ಎನ್ನಬಹುದು. ಇದೀಗ RBI ಪೆಟಿಎಂ ನಿರ್ಬಂಧದ ಬೆನ್ನಲ್ಲೇ ದೇಶದ ಸಹಕಾರಿ ಬ್ಯಾಂಕ್ ನ ಪರವಾನಗಿಯನ್ನು ರದ್ದು ಮಾಡಿದೆ. ಪರವಾನಗಿಯನ್ನು ರದ್ದು ಮಾಡುವುದರ ಜೊತೆಗೆ ಹಣ ಹಿಂಪಡೆಯುವ ನಿಯಮಗ ಬಗ್ಗೆ ಮಾಹಿತಿ ನೀಡಿದೆ. ಸದ್ಯ RBI 2024 ರಲ್ಲಿ ಮೊದಲು ಯಾವ ಬ್ಯಾಂಕ್ ನ ಪರವಾನಗಿಯನ್ನು ರದ್ದು ಮಾಡಿದೆ ಎನ್ನುವುದರ ಬಗೆ ಮಾಹಿತಿ ತಿಳಿಯೋಣ.

Sumerpur Mercantile Urban Co-operative Bank License Canceled
Image Credit: Indian Cooperative

ರಾತ್ರಿ ಬೆಳಗಾಗುವುದರಲ್ಲಿ ಇನ್ನೊಂದು ಬ್ಯಾಂಕಿನ ಲೈಸನ್ಸ್ ರದ್ದುಮಾಡಿದ RBI
ಭಾರತೀಯ ರಿಸರ್ವ್ ಬ್ಯಾಂಕ್ ಕಳೆದ ವರ್ಷದಿಂದ ಸಾಕಷ್ಟು ಸಹಕಾರಿ ಬ್ಯಾಂಕ್ ಗಳ ಪರವಾನಗಿಯನ್ನು ರದ್ದು ಮಾಡಿದೆ. ನಿಯಮ ಉಲ್ಲಂಘನೆ ಮಾಡುವ ಬ್ಯಾಂಕ್ ನ ವಿರುದ್ಧ RBI ಕಠಿಣ ಕ್ರಮ ಕೈಗೊಳ್ಳುತ್ತದೆ. ಈ ಬಾರಿ RBI ಸುಮರ್‌ ಪುರ್ ಮರ್ಕೆಂಟೈಲ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಮೇಲೆ ಕ್ರಮ ಕೈಗೊಂಡಿದೆ.

ರಾಜಸ್ಥಾನದ ಪಾಲಿಯಲ್ಲಿರುವ ಸುಮರ್‌ ಪುರ್ ಮರ್ಕೆಂಟೈಲ್ ಅರ್ಬನ್ ಕೋಆಪರೇಟಿವ್ ಬ್ಯಾಂಕ್‌ ನ ಪರವಾನಗಿಯನ್ನು ರಿಸರ್ವ್ ಬ್ಯಾಂಕ್ ಬುಧವಾರ ರದ್ದುಗೊಳಿಸಿದೆ. ಬ್ಯಾಂಕ್ ಸಾಕಷ್ಟು ಬಂಡವಾಳ ಮತ್ತು ಗಳಿಕೆಯ ಸಾಮರ್ಥ್ಯವನ್ನು ಹೊಂದಿಲ್ಲದ ಕಾರಣ Sumerpur Mercantile Urban Co-operative Bank ನ ಪರವಾನಗಿಯನ್ನು RBI ರದ್ದು ಮಾಡಿದೆ.

ಹಣ ಹಿಂಪಡೆಯುವ ನಿಯಮ ಹೀಗಿದೆ
ಬ್ಯಾಂಕ್ ಅನ್ನು ಮುಚ್ಚಲು ಮತ್ತು ಲಿಕ್ವಿಡೇಟರ್ ಅನ್ನು ನೇಮಿಸಲು ಆದೇಶವನ್ನು ನೀಡುವಂತೆ ರಾಜಸ್ಥಾನದ ಸಹಕಾರ ಸಂಘಗಳ ರಿಜಿಸ್ಟ್ರಾರ್ ಅವರಿಗೂ ಮನವಿ ಮಾಡಲಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ಹೇಳಿಕೆಯಲ್ಲಿ ತಿಳಿಸಿದೆ.

Join Nadunudi News WhatsApp Group

ಬ್ಯಾಂಕ್ ಪರವಾನಗಿ ರದ್ದಾದ ಬಳಿಕ, ಪ್ರತಿಯೊಬ್ಬ ಠೇವಣಿದಾರನು ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (ಡಿಐಸಿಜಿಸಿ) ಯಿಂದ ತನ್ನ ಠೇವಣಿಗಳ ರೂ. 5 ಲಕ್ಷದವರೆಗಿನ ಠೇವಣಿ ವಿಮಾ ಕ್ಲೈಮ್ ಮೊತ್ತವನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದು RBI ಹೇಳಿದೆ. ಇನ್ನು 99.13 ಪ್ರತಿಶತ ಠೇವಣಿದಾರರು ತಮ್ಮ ಠೇವಣಿಗಳ ಸಂಪೂರ್ಣ ಮೊತ್ತವನ್ನು DICGC ಯಿಂದ ಸ್ವೀಕರಿಸಲು ಅರ್ಹರಾಗಿದ್ದಾರೆ ಎಂದು RBI ವರದಿ ಮಾಡಿದೆ.

Join Nadunudi News WhatsApp Group