Aadhaar Surname: ಮದುವೆಯ ನಂತರ ನಿಮ್ಮ ಉಪನಾಮ ಬದಲಾವಣೆ ಮಾಡಬೇಕೆ…? ಈ ರೀತಿಯಾಗಿ ಬದಲಾಯಿಸಿ.

ಆಧಾರ್ ಕಾರ್ಡ್ ನಲ್ಲಿ ಉಪನಾಮವನ್ನು ಈ ರೀತಿಯಾಗಿ ಬದಲಾಯಿಸಿ

Surname Change In Aadhaar Card: ಭಾರತೀಯ ಪ್ರಜೆಗಳಿಗೆ ಆಧಾರ್ ಕಾರ್ಡ್ ಮುಖ್ಯ ದಾಖಲೆಯಾಗಿದೆ. ಹೀಗಿರುವಾಗ ಪ್ರತಿಯೊಬ್ಬರೂ ಆಧಾರ್ ಕಾರ್ಡ್ ಹೊಂದುವುದು ಅಗತ್ಯ. ಇನ್ನು ಜನಸಾಮಾನ್ಯರು ತಮ್ಮ ಆಧಾರ್ ಕಾರ್ಡ್ ನಲ್ಲಿ ಸರಿಯಾದ ಮಾಹಿತಿಯನ್ನು ನೀಡಬೇಕಾಗುತ್ತದೆ.

ಇನ್ನು UIDAI ಆಧಾರ್ ಕಾರ್ಡ್ ಸಂಬಂಧಿತ ಹೊಸ ಹೊಸ ಅಪ್ಡೇಟ್ ನೀಡುತ್ತಾ ಇರುತ್ತದೆ. ಸದ್ಯ UIDAI ಆಧಾರ್ ಕಾರ್ಡ್ ನವೀಕರಣವನ್ನು ಉಚಿತವಾಗಿ ನೀಡುತ್ತಿದೆ. ಇನ್ನು ಹೆಚ್ಚಿನ ಜನರ ಆಧಾರ್ ಕಾರ್ಡ್ ನಲ್ಲಿ ತಪ್ಪುಗಳು ಇರುವುದು ಸಹಜ. ಹೀಗಾಗಿ ಆಧಾರ್ ತಿದ್ದುಪಡಿ ಮಾಡುತ್ತಾ ಇರುತ್ತಾರೆ.

Surname Change In Aadhaar Card
Image Credit: The Hindu

ಮದುವೆಯ ನಂತರ ನಿಮ್ಮ ಉಪನಾಮ ಬದಲಾವಣೆ ಮಾಡಬೇಕೆ…?
ಇನ್ನು ಮದುವೆಯಾದ ಯುವತಿಯರು ತಮ್ಮ ಆಧಾರ್ ಕಾರ್ಡ್ ನಲ್ಲಿ ಬದಲಾವಣೆ ಮಾಡುವುದು ಸಹಜ. ಕಾರಣ ತಮ್ಮ ತಂದೆಯ ಮನೆಯ ವಿಳಾಸ ಹಾಗೂ ಉಪನಾಮವನ್ನು ಬದಲಾಯಿಸುವುದು ಅಗತ್ಯವಾಗುತ್ತದೆ. ಇನ್ನು ಉಪನಾಮ ಬದಲಾವಣೆಗೆ ಹೆಚ್ಚು ಯೋಚಿಸುವ ಅಗತ್ಯ ಇರುವುದಿಲ್ಲ. ನಾವೀಗ ಈ ಲೇಖನದಲ್ಲಿ ಆಧಾರ್ ಕಾರ್ಡ್ ನಲ್ಲಿನ ಉಪನಾಮ ಬದಲಾವಣೆಯ ಬಗ್ಗೆ ಮಾಹಿತಿ ನೀಡಲಿದ್ದವೇ. ನೀವು ಈ ಲೇಖನವನ್ನು ಓದಿದರೆ ಈ ಉಪನಾಮ ಬದಲಾವಣೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬಹುದು.

ಆಧಾರ್ ಕಾರ್ಡ್ ನಲ್ಲಿ ಉಪನಾಮವನ್ನು ಈ ರೀತಿಯಾಗಿ ಬದಲಾಯಿಸಿ
•ಆಧಾರ್ ಕಾರ್ಡ್ ನಲ್ಲಿನ ಉಪನಾಮ ಬದಲಾವಣೆಗೆ ನೀವು ಮೊದಲು ನಿಮ್ಮ ಹತ್ತಿರದ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡಬೇಕಾಗುತ್ತದೆ.

•ಅದರ ನಂತರ ನೀವು ತಿದ್ದುಪಡಿ ಫಾರ್ಮ್ ಅನ್ನು ತೆಗೆದುಕೊಂಡು ಅದನ್ನು ಭರ್ತಿ ಮಾಡಬೇಕು.

Join Nadunudi News WhatsApp Group

•ಇದರಲ್ಲಿ, ನಿಮ್ಮ ಹೆಸರು, ಆಧಾರ್ ಸಂಖ್ಯೆ ಮುಂತಾದ ಇತರ ವಿಷಯಗಳನ್ನು ನೀವು ಭರ್ತಿ ಮಾಡಬೇಕು.

•ನಂತರ ನೀವು ನಿಮ್ಮ ಗಂಡನ ಆಧಾರ್ ಕಾರ್ಡ್, ಮದುವೆ ಪ್ರಮಾಣಪತ್ರದ ನಕಲು ಮತ್ತು ಮದುವೆ ಕಾರ್ಡ್ ನ ಪ್ರತಿಯನ್ನು ಈ ಭರ್ತಿ ಮಾಡಿದ ನಮೂನೆಯೊಂದಿಗೆ ಲಗತ್ತಿಸಬೇಕು.

Aadhaar Card Latest Update
Image Credit: News 18

•ಈ ಎಲ್ಲಾ ದಾಖಲೆಗಳ ನಕಲುಗಳ ಜೊತೆಗೆ ಮೂಲ ದಾಖಲೆಗಳನ್ನು ನೀವು ಪರಿಶೀಲನೆಗಾಗಿ ನೀಡಬೇಕಾಗುತ್ತದೆ.

•ಕೇಂದ್ರದಲ್ಲಿರುವ ಅಧಿಕಾರಿಯು ಈ ದಾಖಲೆಗಳ ಮೂಲ ಪ್ರತಿಯನ್ನು ನೋಡಬಹುದು.
ಈಗ ದಾಖಲೆಗಳೊಂದಿಗೆ ಫಾರ್ಮ್ ಅನ್ನು ಸಂಬಂಧಪಟ್ಟ ಅಧಿಕಾರಿಗೆ ನೀಡಿ.

•ಈಗ ನಿಮ್ಮ ಬಯೋಮೆಟ್ರಿಕ್ಸ್ ಮತ್ತು ಫೋಟೋಗಳನ್ನು ಕ್ಲಿಕ್ ಮಾಡಿಕೊಳ್ಳಲಾಗುತ್ತದೆ.

•ನಂತರ ನೀವು ಅದರ ನಿಗದಿತ ಶುಲ್ಕವನ್ನು ಪಾವತಿಸಬೇಕು, ಅದರ ನಂತರ ನಿಮ್ಮ ಮಾಹಿತಿಯನ್ನು ಕೆಲವೇ ದಿನಗಳಲ್ಲಿ ನವೀಕರಿಸಲಾಗುತ್ತದೆ

•ನೀವು ಕೇವಲ 50 ರೂಪಾಯಿಗಳನ್ನು ಖರ್ಚು ಮಾಡುವ ಮೂಲಕ ನಿಮ್ಮ ಮನೆಯಲ್ಲಿ PVC ಆಧಾರ್ ಕಾರ್ಡ್ ಅನ್ನು ಪಡೆಯಬಹುದು.

Aadhar Card Update Process
Image Credit: Thebegusarai

Join Nadunudi News WhatsApp Group