Free Electricity: ಯಾರು ಯಾರಿಗೆ ಸಿಗಲಿದೆ ಕೇಂದ್ರದಿಂದ 300 ಯೂನಿಟ್ ಉಚಿತ ಕರೆಂಟ್, ಅರ್ಜಿ ಯಾವ ಆರಂಭ…?

PM ಸೂರ್ಯ ಘರ್ ಯೋಜನೆಯಡಿ ಉಚಿತ ವಿದ್ಯುತ್ ಘೋಷಣೆ

Surya Ghar Muft Bijli Yojana Benefit: ದೇಶದ ಜನತೆಗಾಗಿ ಕೇಂದ್ರದ ಮೋದಿ (Narendra Modi) ಸರ್ಕಾರ ವಿವಿಧ ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿದೆ. ಅರ್ಹರು ಸರ್ಕಾರದ ಉಚಿತ ಯೋಜನೆಗಳ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ ಎನ್ನಬಹುದು. ಸದ್ಯ ಮೋದಿ ಸರ್ಕಾರ ದೇಶದ ಜನತೆಗೆ Electricity Bill ನ ಹೊರೆಯನ್ನು ಕಡಿಮೆ ಮಾಡಲು ಮುಂದಾಗಿದೆ.

ಇದಕ್ಕಾಗಿ ಹೊಸ ಯೋಜನೆಯನ್ನ ಸರ್ಕಾರ ಜಾರಿಗೊಳಿಸಿದೆ. ಉಚಿತ ವಿದ್ಯುತ್ ನೀಡುವ ಮೂಲಕ ದೇಶದ ಕೋಟ್ಯಂತರ ಮನೆಗಳನ್ನು ಬೆಳಗಲು ಸರ್ಕಾರ ಮುಂದಾಗಿದೆ. ಸರ್ಕಾರದ ಉಚಿತ ವಿದ್ಯುತ್ ಯೋಜನೆಯ ಬಗ್ಗೆ ನೀವು ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬಹುದು.

Surya Ghar Muft Bijli Yojana
Image Credit: Iasgyan

PM ಸೂರ್ಯ ಘರ್ ಯೋಜನೆಯಡಿ ಉಚಿತ ವಿದ್ಯುತ್ ಘೋಷಣೆ
ಸರಿಸುಮಾರು 75,000 ಕೋಟಿ ರೂಪಾಯಿಗಳ ಹೂಡಿಕೆಯೊಂದಿಗೆ 300 ಯೂನಿಟ್‌ ಗಳ ವರೆಗೆ ಉಚಿತ ವಿದ್ಯುತ್ ಒದಗಿಸುವ ಮೂಲಕ 1 ಕೋಟಿ ಕುಟುಂಬಗಳಿಗೆ ನೆರವಾಗಲು ಮೋದಿ ಸರ್ಕಾರ Surya Ghar Muft Bijli ಯೋಜನೆಯನ್ನು ಪರಿಚಯಿಸಿದೆ.

ಈ ಯೋಜನೆಯಡಿ ಸರ್ಕಾರ ಉಚಿತ ವಿದ್ಯುತ್ ಜೊತೆ Subsidy ಲಾಭವನ್ನು ನೀಡುತ್ತದೆ. ಸರ್ಕಾರ ಸಬ್ಸಿಡಿಯ ಮೊತ್ತವನ್ನು ಜನರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ. ಸದ್ಯ ಈ ಯೋಜನೆಯ ಲಾಭ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ ಎನ್ನುವ ಬಗ್ಗೆ ನಾವೀಗ ಹೇಳಲಿದ್ದೇವೆ.

PM ಉಚಿತ ವಿದ್ಯುತ್ ಯೋಜನೆಗೆ ಸಚಿವ ಸಂಪುಟ ಅನುಮೋದನೆ
ಸದ್ಯ Surya Ghar Muft Bijli ಯೋಜನೆಯ ಅಡಿಯಲ್ಲಿ ದೇಶದ ಜನತೆಗೆ ಉಚಿತ ವಿದ್ಯುತ್ ಅನ್ನು ನೀಡಲು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ದೇಶದ ಜನತೆಗೆ ಈ ಯೋಜನೆಯ ಲಾಭವನ್ನು ಅತಿ ಶೀಘ್ರದಲ್ಲೇ ಪಡೆಯಬಹುದು. ಭಾರತೀಯ ಪ್ರಜೆಯಾದವರು Surya Ghar Muft Bijli ಯೋಜನೆಯ ಅಡಿಯಲ್ಲಿ ಉಚಿತ ವಿದ್ಯುತ್ ಅನ್ನು ಪಡೆಯಬಹುದು. ಅರ್ಹ ಫಲಾನುಭವಿಗಳು ತಮ್ಮ ಮನೆಯ ಮೇಲ್ಚಾವಣಿಯಲ್ಲಿ ಸೌರ ವಿದ್ಯುತ್ ಅನ್ನು ಸ್ಥಾಪಿಸಲು Subsidy ಮೊತ್ತದಲ್ಲಿ ಸಹಾಯಧನ ಲಭ್ಯವಾಗಲಿದೆ.

Join Nadunudi News WhatsApp Group

Surya Ghar Muft Bijli Yojana Benefit
Image Credit: India Today

ಉಚಿತ ವಿದ್ಯುತ್ ಯೋಜನೆಯ ಪ್ರಯೋಜನವೇನು…?
ಗರಿಷ್ಟ 10 ಕಿ. ವ್ಯಾ ವಿದ್ಯುತ್ ಉತ್ಪಾದನೆಗೆ ಅಗತ್ಯ ಇರುವ ಸೌರ ಫಲಕಗಳನ್ನು ಮನೆಯ ಮೇಲ್ಚಾವಣಿಯಲ್ಲಿ ಅಳವಡಿಸಲು ಸರ್ಕಾರ ಈ ಸೌಲಭ್ಯವು ಒದಗಿಸಿದೆ. ಮೊದಲ 3 ಕಿ. ವ್ಯಾ ವರೆಗೆ ಶೇ. 40 ರಷ್ಟು ಮತ್ತು ಆ ಬಳಿಕದ ಸಾಮರ್ಥ್ಯಕ್ಕೆ ಶೇ. 20 ರಷ್ಟು ಸರ್ಕಾರ ನೀಡಲಿದೆ.

5 ವರ್ಷಗಳ ನಿರ್ವಾಣ ಗ್ಯಾರಂಟಿ ಜೊತೆಗೆ ವಿದ್ಯುತ್ ಬಿಲ್ ಕಡಿತವಾಗಲಿದೆ. ಫಲಾನುಭವಿಗಳು ಹೆಚ್ಚುವರಿ ವಿದ್ಯುತ್ ಅನ್ನು ಗಳಿಸಿದ್ದಲ್ಲಿ ಅದನ್ನು ಮಾರಾಟ ಮಾಡಿ ಆದಾಯವನ್ನು ಗಳಿಸಿಕೊಳ್ಳಬಹುದು. ಇನ್ನು 300 ಯೂನಿಟ್ ಉಚಿತ ವಿದ್ಯುತ್ ಪಡೆಯಲು https://pmsuryaghar.gov.in/ ನ ಅಧಿಕೃತ WebSite ಗೆ ಭೇಟಿ ನೀಡಿ ಉಚಿತ ವಿದ್ಯುತ್ ಗಾಗಿ ಅರ್ಜಿ ಸಲ್ಲಿಸಬಹುದು.

Join Nadunudi News WhatsApp Group