Solar Subsidy: ಚುನಾವಣೆಗೂ ಮುನ್ನವೇ ಕೇಂದ್ರದಿಂದ ಇನ್ನೊಂದು ಯೋಜನೆ, ಫ್ರೀ ಕರೆಂಟ್ ಜೊತೆಗೆ 15000 ರೂ ಉಚಿತ

ಮೋದಿ ಸರ್ಕಾರ ರೂಪಿಸಿರುವ ಈ ಯೋಜನೆಯ ಅಡಿಯಲ್ಲಿ ನೀವು ಉಚಿತ ವಿದ್ಯುತ್ ನ ಜೊತೆಗೆ 15 ಸಾವಿರ ಹಣವನ್ನು ಪಡೆಯಬಹುದು.

Surya Ghar Muft Bijli Yojana Subsidy: ಮೋದಿ ಸರ್ಕಾರ ದೇಶದ ಜನತೆಗೆ ಉಚಿತ ವಿದ್ಯುತ್ ಅನ್ನು ನೀಡುವ ಸಲುವಾಗಿ Surya Ghar Muft Bijli ಯೋಜನೆಯನ್ನು ಪರಿಚಯಿಸಿರುವ ಬಗ್ಗೆ ಎಲ್ಲರಿಗು ಈಗಾಗಲೇ ಮಾಹಿತಿ ತಿಳಿದಿರಬಹುದು. ಸರ್ಕಾರದಿಂದ Surya Ghar Muft Bijli ಯೋಜನೆಗೆ ಸಂಬಂಧಿಸಿದಂತೆ ಈಗಾಗಲೇ ಸಾಕಷ್ಟು ಅಪ್ಡೇಟ್ ಹೊರಬಿದ್ದಿದೆ.

ಯೋಜನೆಗೆ ಯಾರು ಅರ್ಹರು..? ಯೋಜನೆಯಿಂದ ಏನೇನು ಪ್ರಯೋಜನವಿದೆ..? ಯೋಜನೆಯ ಅರ್ಜಿ ಸಲ್ಲಿಕೆ ಹೇಗೆ..? ಎನ್ನುವ ಬಗ್ಗೆ ಸರ್ಕಾರ ಮಾಹಿತಿ ಬಹಿರಂಗಪಡಿಸಿದೆ. ಇನ್ನು ಈ ಯೋಜನೆಯಡಿ ನೀವು ಉಚಿತ ವಿದ್ಯುತ್ ನ ಜೊತೆಗೆ ಹಣವನ್ನು ಕೂಡ ಪಡೆಯಬಹುದು ಎನ್ನುವ ಬಗ್ಗೆ ನಿಮಗೆ ಮಾಹಿತಿ ತಿಳಿದಿದೆಯೇ..? ಹೌದು, ಮೋದಿ ಸರ್ಕಾರ ರೂಪಿಸಿರುವ Surya Ghar Muft Bijli ಯೋಜನೆಯ ಅಡಿಯಲ್ಲಿ ನೀವು ಉಚಿತ ವಿದ್ಯುತ್ ನ ಜೊತೆಗೆ 15 ಸಾವಿರ ಹಣವನ್ನು ಪಡೆಯಬಹುದು.

Surya Ghar Muft Bijli
Image Credit: Vistaar News

ಚುನಾವಣೆಗೂ ಮುನ್ನವೇ ಕೇಂದ್ರದಿಂದ ಇನ್ನೊಂದು ಯೋಜನೆ
ಸದ್ಯ ದೇಶದಲ್ಲಿ ಲೊಕ್ಸಭಾ ಚುನಾವಣೆ ಹತ್ತಿರವಾಗುತ್ತಿರುವ ಕಾರಣ ವಿವಿಧ ಯೋಜನೆಗಳು ಅನುಷ್ಠಾನಗೊಳ್ಳುತ್ತಿದೆ ಎನ್ನಬಹುದು. ಸದ್ಯ ಚುನಾವಣೆಗೂ ಮುನ್ನವೇ ಕೇಂದ್ರದಿಂದ ಇನ್ನೊಂದು ಯೋಜನೆ ಘೋಷಣೆಯಾಗಿದೆ.  ದೇಶದ 1 ಕೋಟಿ ಕುಟುಂಬಗಳಿಗೆ ನೆರವಾಗಲು ಮೋದಿ ಸರ್ಕಾರ 300 ಯೂನಿಟ್‌ ಗಳವರೆಗೆ ಉಚಿತ ವಿದ್ಯುತ್ ನೀಡಲು  ಮುಂದಾಗಿದೆ. ಸರ್ಕಾರದ ಈ ಯೋಜನೆಯಡಿ ಉಚಿತ ವಿದ್ಯುತ್ ಅನ್ನು ಪಡೆಯುವುದರ ಜೊತೆಗೆ ಫಲಾನುಭವಿಗಳು ಆದಾಯವನ್ನು ಕೂಡ ಗಳಿಸಬಹುದು.

ಫ್ರೀ ಕರೆಂಟ್ ಜೊತೆಗೆ 15000 ರೂ. ಉಚಿತ
ಪ್ರಧಾನ ಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಗಾಗಿ ಸರಕಾರ 75,021 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಈ ಯೋಜನೆಯಡಿಯಲ್ಲಿ 2 ಕಿಲೋವ್ಯಾಟ್ ವರೆಗಿನ ಸೋಲಾರ್ ಪ್ಲಾಂಟ್‌ ಗಳಿಗೆ ಶೇ.60 ಸಬ್ಸಿಡಿ ಮತ್ತು 1 ಕಿ.ವಾ.ಗೆ ಶೇ.40 ಸಬ್ಸಿಡಿಯನ್ನು ಸರ್ಕಾರ ನೀಡುತ್ತದೆ. ಸೋಲಾರ್ ಪ್ಲಾಂಟ್ ಸ್ಥಾಪಿಸಲು ಪ್ರತಿ ಕುಟುಂಬಕ್ಕೆ 78,000 ಸಹಾಯಧನ ಸಿಗುತ್ತದೆ.

Surya Ghar Muft Bijli Yojana Apply
Image Credit: Krishi Jagran

ಪ್ರಧಾನ ಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಶೀಘ್ರದಲ್ಲೇ ದೇಶದ ಜನತೆಗೆ Surya Ghar Muft Bijli ಯೋಜನೆಯಡಿ ಉಚಿತ ವಿದ್ಯುತ್ ಪ್ರಯೋಜನ ದೊರೆಯಲಿದೆ. ಈ ಯೋಜನೆಯಡಿ, 1 ಕೋಟಿ ಜನರಿಗೆ ಪ್ರತಿ ತಿಂಗಳು 300 ಯೂನಿಟ್ ಉಚಿತ ವಿದ್ಯುತ್ ಸಿಗಲಿದೆ. ಹಾಗೆಯೆ ವರ್ಷಕ್ಕೆ 15,000 ರೂ. ಸಹಾಯಧನದ ಲಾಭ ಸಿಗಲಿದೆ. ಇನ್ನು  https://pmsuryaghar.gov.in/ ನ ಅಧಿಕೃತ Web Site ಭೇಟಿ ನೀಡುವ ಮೂಲಕ  ಮೇಲ್ಚಾವಣಿ ಸೌರ ವಿದ್ಯುತ್ ಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.

Join Nadunudi News WhatsApp Group

Join Nadunudi News WhatsApp Group