Suryakumar Yadav: ದಿಡೀರ್ ಶಸ್ತ್ರಚಿಕಿತ್ಸೆಗೆ ಒಳಗಾದ ಸೂರ್ಯಕುಮಾರ್ ಯಾದವ್, ಅಭಿಮಾನಿಗಳಿಗೆ ಹೆಚ್ಚಾದ ಆತಂಕ.

ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾದ Suryakumar Yadav, ದಿಡೀರ್ ಶಸ್ತ್ರಚಿಕಿತ್ಸೆ

Suryakumar Yadav Groin Surgery: ಭಾರತೀಯ ಕ್ರಿಕೆಟ್ ತಂಡದ ಸ್ಪೋಟಕ ಬ್ಯಾಟ್ ಮ್ಯಾನ್ Suryakumar Yadav ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. Suryakumar Yadav ಅವರು ಆರೋಗ್ಯ ಸ್ಥಿತಿ ಹದೆಗೆಟ್ಟಿರುವುದರಿಂದ ಅವರ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅವರನ್ನು ಅಭಿಮಾನಿಗಳು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾದ Suryakumar Yadav ದಿಡೀರ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಲಭಿಸಿದೆ.

Suryakumar Yadav Groin Surgery
Image Credit: Times Now News

ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾದ Suryakumar Yadav
ಸೂರ್ಯ ಕುಮಾರ್ ಯಾದವ್ ಸ್ಪೋರ್ಟ್ಸ್ ಹರ್ನಿಯಾದಿಂದ (Sports Hernia) ಬಳಲುತ್ತಿದ್ದಾರೆ. ಈ ರೋಗವು ಹರ್ನಿಯಾದಂತೆಯೇ ಇರುತ್ತದೆ ಆದರೆ ಕ್ರೀಡಾ ಹರ್ನಿಯಾ ಹೆಚ್ಚಾಗಿ ಕ್ರೀಡಾಪಟುಗಳಲ್ಲಿ ಕಂಡುಬರುತ್ತದೆ. ಸ್ಪೋರ್ಟ್ಸ್ ಹರ್ನಿಯಾ ಒಂದು ವಿಶೇಷ ರೀತಿಯ ವೈದ್ಯಕೀಯ ಸ್ಥಿತಿಯಾಗಿದೆ. ಇದು ವಿಶೇಷವಾಗಿ ಕ್ರೀಡಾಪಟುಗಳಲ್ಲಿ ಅಂದರೆ ಕ್ರೀಡಾ ವ್ಯಕ್ತಿಗಳಲ್ಲಿ ಕಂಡುಬರುತ್ತದೆ.

ವಾಸ್ತವದಲ್ಲಿ ಓಟದಂತಹ ದೈಹಿಕ ಚಟುವಟಿಕೆಯು ಸ್ನಾಯುಗಳ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ ಮತ್ತು ಕೀಲುಗಳ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ಸ್ನಾಯುಗಳು ಹಾಗೂ ಕೀಲಿಗಳು ತೀವ್ರವಾಗಿ ಘಾಸಿಗೊಳ್ಳುತ್ತದೆ. ಸ್ಪೋಟಕ ಬ್ಯಾಟ್ ಮ್ಯಾನ್ Suryakumar Yadav ಅವರಿಗೆ ಸ್ಪೋರ್ಟ್ಸ್ ಹರ್ನಿಯಾ ಖಾಯಿಲೆ ಇರುವುದು ಇತ್ತೀಚಿಗೆ ತಿಳಿದುಬಂದಿದೆ. ಇದರಿಂದಾಗಿ ಅವರು ಹೆಚ್ಚಿನ ಚಿಕಿತ್ಸೆಗೆ ಒಳಗಾಗಬೇಕಾಗಿದೆ.

Join Nadunudi News WhatsApp Group

ದಿಡೀರ್ ಶಸ್ತ್ರಚಿಕಿತ್ಸೆಗೆ ಒಳಗಾದ ಸೂರ್ಯಕುಮಾರ್ ಯಾದವ್
ಜನವರಿ 17 ರಂದು ಜರ್ಮನಿಯ ಮ್ಯೂನಿಚ್‌ ನಲ್ಲಿ ಸೊಂಟದ ಶಸ್ತ್ರಚಿಕಿತ್ಸೆಗೆ ಸೂರ್ಯಕುಮಾರ್ ಯಾದವ್ ಒಳಗಾಗಿದ್ದರು. ಸೂರ್ಯಕುಮಾರ್ ಅವರು ತಮ್ಮ ಪತ್ನಿ ದೇವಿಶಾ ಅವರೊಂದಿಗೆ ಶಸ್ತ್ರಚಿಕಿತ್ಸಾ ಹಸ್ತಕ್ಷೇಪಕ್ಕಾಗಿ ಜರ್ಮನಿಯಲ್ಲಿದ್ದಾರೆ.

“ಶಸ್ತ್ರಚಿಕಿತ್ಸೆ ಮಾಡಲಾಗಿದೆ. ನನ್ನ ಆರೋಗ್ಯದ ಬಗ್ಗೆ ಕಾಳಜಿ ಮತ್ತು ಶುಭಾಶಯಗಳಿಗಾಗಿ ನಾನು ಎಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ ಮತ್ತು ನಾನು ಶೀಘ್ರದಲ್ಲೇ ಹಿಂತಿರುಗುತ್ತೇನೆ ಎಂದು ನಿಮಗೆ ಹೇಳಲು ನನಗೆ ಸಂತೋಷವಾಗಿದೆ” ಎಂದು ಅವರು ಶಸ್ತ್ರಚಿಕಿತ್ಸೆಯ ನಂತರ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಪೋಸ್ಟ್ ಮಾಡಿದ್ದಾರೆ.

Join Nadunudi News WhatsApp Group