MI Team: MI ಅಭಿಮಾನಿಗಳಿಗೆ ಮತ್ತೆ ಬೇಸರದ ಸುದ್ದಿ, ಸ್ಟಾರ್ ಆಟಗಾರ ತಂಡದಿಂದ ಹೊರಬೀಳುವ ಸಾಧ್ಯತೆ

MI ತಂಡದ ಸ್ಟಾರ್ ಆಟಗಾರ ತಂಡದಿಂದ ಹೊರಬೀಳುವ ಸಾಧ್ಯತೆ, ಅಭಿಮಾನಿಗಳಿಗೆ ಬೇಸರದ ಸುದ್ದಿ

Suryakumar Yadav In IPL 2024: ಐಪಿಎಲ್‌ ನ 17 ನೇ ಋತುವಿನ ಎರಡೂ ಪಂದ್ಯಗಳು ಮುಂಬೈ ಇಂಡಿಯನ್ಸ್‌ ತಂಡ ಸೋತಿರುವ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಬುಧವಾರ ನಡೆದ ಮ್ಯಾಚ್ ನಲ್ಲಿ ಸನ್‌ ರೈಸರ್ಸ್ ಹೈದರಾಬಾದ್ ಬ್ಯಾಟ್ಸ್‌ ಮನ್‌ ಗಳು ಉತ್ತಮ ಸ್ಕೋರ್ ಗಳಿಸಿದರು. ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ 277 ರನ್ ಗಳಿಸಿ ಐಪಿಎಲ್ ಇತಿಹಾಸದಲ್ಲೇ ಗರಿಷ್ಠ ಸ್ಕೋರ್ ಆಗಿತ್ತು.

ಈ ಸ್ಕೊರ್ ಬ್ರೇಕ್ ಮಾಡಲು ಕಣಕ್ಕಿಳಿದ ಮುಂಬೈ ಇಂಡಿಯನ್ಸ್ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದೆ. ಆದರೆ ತಂಡವು ಕೇವಲ 246 ರನ್ ಗಳಿಸುವ ಮೂಲಕ ಸನ್‌ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಸೋತಿದೆ. Mi ಸೋಲಿನಿಂದಾಗಿ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಇನ್ನು ಸತತ ಎರಡು ಬಾರಿ ಸೋಲು ಕಂಡಿರುವ ಮುಂಬೈ ಇಂಡಿಯನ್ಸ್ ತಂಡಕ್ಕೆ ಮತ್ತೊಂದು ಶಾಕ್ ಎದುರಾಗಿದೆ.

Suryakumar Yadav IPL 2024
Image Credit: Espncricinfo

ಮುಂಬೈ ಇಂಡಿಯನ್ಸ್ ತಂಡಕ್ಕೆ ಮತ್ತೊಂದು ಶಾಕ್
IPL 2024 ರಲ್ಲಿ ಎರಡು ಬಾರಿ ಸೋಲು ಕಂಡಿರುವ ಮುಂಬೈ ಇಂಡಿಯನ್ಸ್ ತಂಡಕ್ಕೆ ಇನ್ನೊಂದು ಶಾಕ್ ಎದುರಾಗಿದೆ. ಮುಂದಿನ ಮ್ಯಾಚ್ ಗೆ ಮುಂಬೈ ಇಂಡಿಯನ್ಸ್ ಸ್ಟಾರ್ ಬ್ಯಾಟರ್ ರೀ ಎಂಟ್ರಿಯಾಗೋದು ಅನುಮಾನ. ವಿಶ್ವ ನಂ.1 ಟಿ20 ಆಟಗಾರ ಸೂರ್ಯಕುಮಾರ್ ಯಾದವ್ ಟೀಮ್ ಗೆ ಸೇರುವುದು ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಗಾಯದಿಂದ ಚೇತರಿಸಿಕೊಳ್ಳಲು ಸೂರ್ಯಕುಮಾರ್ ಯಾದವ್‌ ಗೆ ಇನ್ನಷ್ಟು ಸಮಯ ಬೇಕಾಗಿದೆ. ಆದರೆ ಸಂಪೂರ್ಣ ಫಿಟ್ನೆಸ್ ಮರಳಿ ಪಡೆಯಲಿದ್ದಾರೆ. ಬಿಸಿಸಿಐ ಅಧಿಕಾರಿಗಳು ನಡೆಸಿದ ಫಿಟ್ನೆಸ್ ಪರೀಕ್ಷೆಯಲ್ಲಿ ಸೂರ್ಯ ಈಗಾಗಲೇ ಅನುತ್ತೀರ್ಣರಾಗಿದ್ದಾರೆ.

ಜೂನ್‌ ನಲ್ಲಿ 2024 ರ ಟಿ 20 ವಿಶ್ವಕಪ್‌ ನೊಂದಿಗೆ ಬಿಸಿಸಿಐ ಸೂರ್ಯನ ಬಗ್ಗೆ ಸಾಕಷ್ಟು ಕಾಳಜಿ ವಹಿಸಿದೆ. ಕಾಲಿನ ಗಾಯದ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಸೂರ್ಯಕುಮಾರ್ ಯಾದವ್ ಪ್ರಸ್ತುತ NCA ಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಅವರು ಐಪಿಎಲ್‌ ನಲ್ಲಿ ಆಡಲು ಬಯಸಿದರೆ, ಅವರು ಎನ್‌ಸಿಎ ಯಿಂದ ಅನುಮತಿ ಪಡೆಯಬೇಕು. ಇನ್ನು ಕೆಲವು ಪಂದ್ಯಗಳಿಂದ ಸೂರ್ಯ ಹೊರಗುಳಿಯುವ ಸಾಧ್ಯತೆ ಇದೆ ಎಂದು ಎನ್‌ಸಿಎ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಮುಂಬೈ ತಂಡದಲ್ಲಿ ಮಿಸ್ಟರ್ 360 ಆಟಗಾರರ ಕೊರತೆ ಈಗಾಗಲೇ ಎದ್ದು ಕಾಣುತ್ತಿದೆ.

Suryakumar Yadav Latest News
Image Credit: Khelnow

Join Nadunudi News WhatsApp Group

Join Nadunudi News WhatsApp Group