Suzuki Access 125 EMI: ಅಗ್ಗದ ಸುಜುಕಿ 125 ಸ್ಕೂಟರ್, ಕಡಿಮೆ ಬೆಲೆ ಜೊತೆಗೆ ಕಡಿಮೆ EMI ನಲ್ಲಿ ಖರೀದಿಸಿ.

ಒಂದು ಲೀಟರ್ ಪೆಟ್ರೋಲ್ ನಲ್ಲಿ 45Km ಮೈಲೇಜ್ ನೀಡಲಿದೆ ಈ ಸ್ಕೂಟರ್

Suzuki Access 125 EMI Details: ದೇಶಿಯ ಮಾರುಕಟ್ಟೆಯಲ್ಲಿ ದ್ವಿಚಕ್ರ ವಾಹನಗಳ ಮೇಲಿನ ಬೇಡಿಕೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇತ್ತೀಚಿಗೆ ಬೈಕ್ ಗಳ ಜೊತೆಗೆ ಸ್ಕೂಟರ್ ಗಳ ಮೇಲಿನ ಬೇಡಿಕೆಯು ವೇಗವಾಗಿ ಹೆಚ್ಚುತ್ತಿದೆ. ದೇಶದ ಜನಪ್ರಿಯ ಸ್ಕೂಟರ್ ತಯಾರಕ ಕಂಪನಿಗಳು ಮಾರುಕಟ್ಟೆಯಲ್ಲಿ ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಸ್ಕೂಟರ್ ಗಳನ್ನೂ ಲಾಂಚ್ ಮಾಡುತ್ತಿದೆ.

ಸದ್ಯ ಮಾರುಕಟ್ಟೆಯಲ್ಲಿ Suzuki Access 125 Scooter ಕ್ರೇಜ್ ಹೆಚ್ಚುತ್ತಿದೆ. ಈ ಹೊಚ್ಚ ಹೊಸ ಸ್ಕೂಟರ್ ಖರೀದಿಗಾಗಿ ಜನರು ಕ್ಯೂ ನಲ್ಲಿದ್ದಾರೆ. ನೀವು ಸಹ ಈ ಸ್ಕೂಟರ್ ಅನ್ನು ಖರೀದಿಸಬೇಕು ಎನ್ನುವ ಯೋಜನೆ ಹಾಕಿಕೊಂಡಿದ್ದರೆ, ನಾವೀಗ ಈ ಲೇಖನದಲ್ಲಿ Suzuki Access 125 Scooter ನ ಖರೀದಿಗೆ ಲಭ್ಯವಿರುವ ಆಕರ್ಷಕ ಹಣಕಾಸು ಯೋಜನೆಯ ಬಗ್ಗೆ ಮಾಹಿತಿ ನೀಡಲಿದ್ದೇವೆ.

Suzuki Access 125 EMI Details
Image Credit: 91wheels

ಕಡಿಮೆ ಬೆಲೆ ಜೊತೆಗೆ ಕಡಿಮೆ EMI ನಲ್ಲಿ ಖರೀದಿಸಿ ಸುಜುಕಿ ಆಕ್ಸೆಸ್ 125
•ಹೊಸ ಸುಜುಕಿ ಆಕ್ಸೆಸ್ 125 ವಿವಿಧ ರೂಪಾಂತರಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಲಭ್ಯವಿದೆ. ಇದರ ‘ರೈಡ್ ಕನೆಕ್ಟ್ ಎಡಿಷನ್ – ಡಿಸ್ಕ್’ ಮಾದರಿಯು ಬೆಂಗಳೂರಿನಲ್ಲಿ ರೂ 1,16,923 ಆನ್ ರೋಡ್ ಬೆಲೆ ಹೊಂದಿದೆ. ನೀವು ಈ ಸ್ಕೂಟರ್ ಅನ್ನು ರೂ.10,000 ಡೌನ್ ಪಾವತಿಯೊಂದಿಗೆ ಖರೀದಿಸಿದರೆ, ನೀವು .9.7% ಬಡ್ಡಿ ದರದಲ್ಲಿ ರೂ.1,06,923 ಸಾಲದ ಮೊತ್ತಕ್ಕೆ ರೂ.3,435 ರ ಮಾಸಿಕ EMI ಅನ್ನು ಮೂರು ವರ್ಷಗಳ ಅವಧಿಗೆ (36 ತಿಂಗಳುಗಳು) ಪಾವತಿಸಬೇಕು.

•ಸುಜುಕಿ ಆಕ್ಸೆಸ್ 125 ‘ಸ್ಪೆಷಲ್ ಎಡಿಷನ್ – ಡಿಸ್ಕ್’ ಆವೃತ್ತಿಯ ಆನ್ ರೋಡ್ ಬೆಲೆ ರೂ.1,12,574 ಆಗಿದೆ. ರೂ.10,000 ಮುಂಗಡ ಪಾವತಿ ಮಾಡಿದ ನಂತರ ನೀವು ಈ ಸ್ಕೂಟರ್ ಅನ್ನು ಮನೆಗೆ ತಂದರೆ, ನೀವು ರೂ.1,02,574 ಸಾಲದ ಮೊತ್ತಕ್ಕೆ 9.7% ಬಡ್ಡಿಯೊಂದಿಗೆ 3 ವರ್ಷಗಳವರೆಗೆ ತಿಂಗಳಿಗೆ ರೂ.3,295 ರ ಇಎಂಐ ಪಾವತಿಸಬೇಕು.

•ಆಕ್ಸೆಸ್ 125 ‘ಡಿಸ್ಕ್’ ಮಾದರಿಯ ಆನ್ ರೋಡ್ ಬೆಲೆ 1,10,531 ರೂ. ಆಗಿದೆ. ನೀವು ರೂ.10,000 ಮುಂಗಡ ಪಾವತಿಯ ಮೂಲಕ ಈ ಸ್ಕೂಟರ್ ಅನ್ನು ಖರೀದಿಸಿದರೆ, ಉಳಿದ ಸಾಲದ ಮೊತ್ತ ರೂ.1,00,531 ಕ್ಕೆ 9.7% ಬಡ್ಡಿ ದರದಲ್ಲಿ ಮೂರು ವರ್ಷಗಳ ಅವಧಿಗೆ ರೂ.3,230 ರ ಮಾಸಿಕ EMI ಪಾವತಿಸಬೇಕು.

Join Nadunudi News WhatsApp Group

•ಹೊಸ ಸುಜುಕಿ ಆಕ್ಸೆಸ್ 125 ‘ಡ್ರಮ್’ ರೂಪಾಂತರವು ರೂ.1,02,689 ಆನ್ ರೋಡ್ ಬೆಲೆಯನ್ನು ಹೊಂದಿದೆ. ನೀವು ಈ ಸ್ಕೂಟರ್ ಅನ್ನು ರೂ.10,000 ಡೌನ್ ಪಾವತಿಯೊಂದಿಗೆ ಖರೀದಿಸಿದರೆ, 9.7% ಬಡ್ಡಿದರದೊಂದಿಗೆ ರೂ.92,689 ಸಾಲದ ಮೊತ್ತಕ್ಕೆ ನೀವು 3 ವರ್ಷಗಳವರೆಗೆ ಪ್ರತಿ ತಿಂಗಳು ರೂ.2,978 ರ EMI ಅನ್ನು ಪಾವತಿಸಬೇಕು.

Suzuki Access 125 Price In India
Image Credit: 91wheels

ಒಂದು ಲೀಟರ್ ಪೆಟ್ರೋಲ್ ನಲ್ಲಿ 45Km ಮೈಲೇಜ್
ಹೊಸ ಸುಜುಕಿ ಆಕ್ಸೆಸ್ 125 ಸ್ಕೂಟರ್ 124 ಸಿಸಿ ಸಿಂಗಲ್ ಸಿಲಿಂಡರ್ ಪೆಟ್ರೋಲ್ ಎಂಜಿನ್‌ ನಿಂದ ಚಾಲಿತವಾಗಿದ್ದು, ಇದು 8.7 ಪಿಎಸ್ ಗರಿಷ್ಠ ಶಕ್ತಿ ಮತ್ತು 10 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ಒಂದು ಲೀಟರ್ ಪೆಟ್ರೋಲ್ ನಲ್ಲಿ 45 km ವರೆಗೆ ಮೈಲೇಜ್ ನೀಡುತ್ತದೆ. ಸುರಕ್ಷತೆಗಾಗಿ ಡಿಸ್ಕ್/ಡ್ರಮ್ ಬ್ರೇಕ್ ಆಯ್ಕೆ ಲಭ್ಯವಿದೆ. ಆಕ್ಸೆಸ್ 125 ಮಾದರಿಯು ಎಲ್ಇಡಿ ಹೆಡ್ ಲೈಟ್, ಸೆಮಿ ಡಿಜಿಟಲ್ ಮಾಹಿತಿ ಫಲಕ, ಸುಜುಕಿ ರೈಡ್ ಕನೆಕ್ಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಇದು ಮುಂಭಾಗದ ಟೆಲಿಸ್ಕೋಪಿಕ್ ಫೋರ್ಕ್ ಸಸ್ಪೆನ್ಷನ್ ಸೆಟಪ್ ಅನ್ನು ಹೊಂದಿದೆ ಮತ್ತು 103 ಕೆಜಿ ತೂಕವಿದೆ.

Suzuki Access 125 Mileage
Image Credit: 91wheels

Join Nadunudi News WhatsApp Group