Swavalambi Sarathi: ಸ್ವಂತ ವಾಹನ ಖರೀದಿಸುವವರಿಗೆ ಸರ್ಕ್ರದಿಂದ ಸಿಗಲಿದೆ 4 ಲಕ್ಷ ರೂ, ಸ್ವಾವಲಂಬಿ ಸಾರಥಿ ಯೋಜನೆ ಜಾರಿ

ನಿರುದ್ಯೋಗಿಗಗಳ ಸ್ವಂತ ಉದ್ಯೋಗದ ಕನಸಿಗಾಗಿ "ಸ್ವಾಲಂಭಿ ಸಾರಥಿ ಯೋಜನೆ"

Swavalambi Sarathi Scheme Subsidy Hike: ರಾಜ್ಯ ಸರ್ಕಾರ ಜನತೆಗಾಗಿ ಈಗಾಗಲೇ ಸಾಕಷ್ಟು ಕಲ್ಯಾಣ ಯೋಜನೆಗಳನ್ನು ರೂಪಿಸಿದ್ದು, ಇನ್ನು ಕೂಡ ಸಾಕಷ್ಟು ಯೋಜನೆ ಜಾರಿಗೆ ಬರಲಿದೆ. ಸದ್ಯ ರಾಜ್ಯ ಸರ್ಕಾರ ಕರ್ನಾಟಕದ ನಿರುದ್ಯೋಗಿಗಳಿಗಾಗಿ ವಿಶೇಷ ಯೋಜನೆಯನ್ನು ರೂಪಿಸಿದೆ. ಈಗಾಗಲೇ ಈ ಯೋಜನೆಯು ರಾಜ್ಯದಲ್ಲಿ ಆನುಷ್ಠಾನಗೊಂಡಿದ್ದು, ಸದ್ಯ ರಾಜ್ಯ ಸರಕಾರ ಈ ಯೋಜನೆಯಡಿ ಸಿಗುವ ಸಹಾಯಧನದ ಮೊತ್ತವನ್ನು ಹೆಚ್ಚಳ ಮಾಡಲು ನಿರ್ಧರಿಸಿದೆ.

swavalambi sarathi scheme karnataka
Image Credit: Original Source

ನಿರುದ್ಯೋಗಿಗಗಳ ಸ್ವಂತ ಉದ್ಯೋಗದ ಕನಸಿಗಾಗಿ “ಸ್ವಾಲಂಭಿ ಸಾರಥಿ ಯೋಜನೆ
ಸಧ್ಯ ರಾಜ್ಯ ಸರ್ಕಾರದಿಂದ ಸ್ವ ಉದ್ಯೋಗಕ್ಕಾಗಿ ಹೊಸ ಯೋಜನೆಯನ್ನು ರೂಪಿಸಿದೆ. ರಾಜ್ಯದ ಪರಿಶಿಷ್ಟ ಜಾತಿ, ಪಂಗಡವರನ್ನು ಸ್ವಾವಲಂಭಿಗಳನ್ನಾಗಿ ಸ್ವ ಉದ್ಯೋಗ ಕೈಗೊಳ್ಳಲು ರಾಜ್ಯ ಸರಕಾರ “ಸ್ವಾಲಂಭಿ ಸಾರಥಿ ಯೋಜನೆ”ಯನ್ನು ರೂಪಿಸಿದೆ.

ಈ ಯೋಜನೆಯಡಿ ಈವರೆಗೆ ಸರಕು ವಾಹನ, ಹಳದಿ ಬೋರ್ಡ್ ಟ್ಯಾಕ್ಸಿ ಖರೀದಿಗೆ 3 ಲಕ್ಷ ಸಹಾಯಧನ ಸೌಲಭ್ಯವನ್ನು ನೀಡಲಾಗುತ್ತದೆ. ಸದ್ಯ ರಾಜ್ಯ ಸರ್ಕಾರ ಈ ಸಹಾಯಧನದ ಮೊತ್ತವನ್ನು ಹೆಚ್ಚು ಮಾಡಲಿ ನಿರ್ಧರಿಸಿದೆ. ಸರಕಾರ ಸ್ವಾಲಂಭಿ ಸಾರಥಿ ಯೋಜನೆಯಡಿ ಸಹಾಯಧನವನ್ನು ಎಷ್ಟು ಹೆಚ್ಚಳ ಮಾಡಿದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

swavalambi sarathi scheme benefits
Image Credit: Original Source

ಸ್ವಾಲಂಭಿ ಸಾರಥಿ ಯೋಜನೆಯ ಸಹಾಯಧನ ಹೆಚ್ಚಳ
ರಾಜ್ಯ ಸರ್ಕಾರ ಸರಕು ವಾಹನ, ಹಳದಿ ಬೋರ್ಡ್ ಟ್ಯಾಕ್ಸಿ ಖರೀದಿಗೆ ನೀಡುತ್ತಿದ್ದ 3 ಲಕ್ಷ ಸಹಾಯಧನವನ್ನು ಇದೀಗ 4 ಲಕ್ಷಕ್ಕೆ ಹೆಚ್ಚಳ ಮಾಡಿದೆ. ಸ್ವಾಲಂಭಿ ಸಾರಥಿ ಯೋಜನೆಯಡಿ 2023 -24 ನೇ ಸಾಲಿನಿಂದ ಫಲಾನುಭವಿಗಳು 4 ಲಕ್ಶಜ ಸಹಾಯಧನವನ್ನು ಪಡೆಯಬಹುದು. ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದವರು ಯೋಜನೆಗೆ ಅರ್ಜಿ ಸಲ್ಲಿಸಬಹುದು. ಇನ್ನು ಗ್ರಾಮೀಣ ಪ್ರದೇಶದಲ್ಲಿ 1 .5 ಲಕ್ಷ ರೂ. ನಗರ ಪ್ರದೇಶದಲ್ಲಿ 2 ಲಕ್ಷ ಆದಾಯ ಮಿತಿಯನ್ನು ಮೀರಿರಬಾರದು.

Join Nadunudi News WhatsApp Group

Join Nadunudi News WhatsApp Group