Swift 2024: ಈ ಒಂದು ಕಾರಣಕ್ಕೆ ಬೆಲೆ ಹೆಚ್ಚಾದರೂ ಜನರು ಬುಕ್ ಮಾಡುತ್ತಿದ್ದಾರೆ 2024 ರ ಸ್ವಿಫ್ಟ್ ಕಾರ್, ಭರ್ಜರಿ ಡಿಮ್ಯಾಂಡ್

ಭರ್ಜರಿ ಡಿಮ್ಯಾಂಡ್ ಪಡೆಯುತ್ತಿದೆ ಸ್ವಿಫ್ಟ್ ನೂತನ ಮಾದರಿ

Swift 2024 Price And Feature: ಪ್ರಸ್ತುತ ಮಾರುಕಟ್ಟೆಯಲ್ಲಿ ಇದೀಗ Swift 2024 ಗ್ರಾಂಡ್ ಎಂಟ್ರಿ ಕೊಟ್ಟಿದೆ. ಜನರು ಇನ್ನುಮುಂದೆ ಐಷಾರಾಮಿ ಕಾರ್ ಗಾಗಿ ಹೆಚ್ಚು ಹುಡುಕುವ ಅಗತ್ಯ ಇಲ್ಲ. ನಿಮ್ಮ ಐಷಾರಾಮಿ ಕಾರ್ ನ ಆಯ್ಕೆಗೆ ಹಾಗೆಯೆ ಬಜೆಟ್ ಬೆಲೆಯಲ್ಲಿ ಇದೀಗ Maruti Suzuki Swift 2024 ನಿಮಗಾಗಿ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕೇವಲ 6 ಲಕ್ಷ ಬಜೆಟ್ ನ ಈ ಹೈಬ್ರಿಡ್ ಕಾರ್ ಗ್ರಾಹಕರಿಗೆ ಹೆಚ್ಚು ಇಷ್ಟವಾಗಲಿದೆ.

ಮೈಲೇಜ್ ವಿಚಾರದಲ್ಲಿ ಮೊದಲೇ ಮೊದಲಿರುವ ಮಾರುತಿ ತನ್ನ ಸ್ವಿಫ್ಟ್ ಮಾದರಿಯಲ್ಲಿ ಹೈಬ್ರಿಡ್ ಎಂಜಿನ್ ಅನ್ನು ಅಳವಡಿಸಿದ್ದು, ನೀವು ಒಂದು ಲೀಟರ್ ಪೆಟ್ರೋಲ್ ನಲ್ಲಿ ಭರ್ಜರಿ ಮೈಲೇಜ್ ಅನ್ನು ಪಡೆಯಬಹುದಾಗಿದೆ. Swift 2024 ರ ಫೀಚರ್ ಅನ್ನು ಕಂಡು ಜನರು ಸ್ವಿಫ್ಟ್ ಖರೀದಿಗೆ ಕ್ಯೂ ನಲ್ಲಿದ್ದಾರೆ ಎನ್ನಬಹುದು. 2024 ರಲ್ಲಿ ಹೊಸ ಕಾರ್ ಖರೀದಿಯ ನಿಮ್ಮ ಕನಸನ್ನು ನನಸು ಮಾಡಿಕೊಳ್ಳಲು ಸ್ವಿಫ್ಟ್ ನಿಮಗೆ ಬೆಸ್ಟ್ ಆಯ್ಕೆಯಾಗಲಿದೆ.

Maruti Suzuki Swift 2024
Image Credit: Cardekho

ಈ ಒಂದು ಕಾರಣಕ್ಕೆ ಬೆಲೆ ಹೆಚ್ಚಾದರೂ ಜನರು ಬುಕ್ ಮಾಡುತ್ತಿದ್ದಾರೆ 2024 ರ ಸ್ವಿಫ್ಟ್ ಕಾರ್
ಮಾರುತಿ ಸುಜುಕಿ ಹೊಸ ತಲೆಮಾರಿನ ಸ್ವಿಫ್ಟ್ ಅನ್ನು ಅತ್ಯಂತ ಸದ್ದಿಲ್ಲದೆ ಬಿಡುಗಡೆ ಮಾಡಿದೆ. ಹೊಸ ಸ್ವಿಫ್ಟ್ ಬೆಲೆ 6.49 ಲಕ್ಷ ರೂ. ಆದರೆ ಇದರ ಟಾಪ್ ವೆರಿಯಂಟ್ ಬೆಲೆ 9.65 ಲಕ್ಷ ರೂ. ನಿಗದಿಯಾಗಿದೆ. ಈ ಎರಡೂ ಬೆಲೆಗಳು ಎಕ್ಸ್ ಶೋರೂಂ ಮತ್ತು ತೆರಿಗೆಗೆ ಒಳಪಟ್ಟಿರುತ್ತವೆ. ಹೊಸ ಸ್ವಿಫ್ಟ್ ಅನ್ನು ಸಿಂಗಲ್ ಮತ್ತು ಡ್ಯುಯಲ್ ಟೋನ್ ಬಣ್ಣವನ್ನು ಒಳಗೊಂಡಿರುವ ಬಣ್ಣದ ಆಯ್ಕೆಗಳೊಂದಿಗೆ ಬಿಡುಗಡೆ ಮಾಡಲಾಗಿದೆ. ಈಗ ಮಾರುತಿ ಸ್ವಿಫ್ಟ್ ಆರೆಂಜ್ ಬಣ್ಣದಲ್ಲಿ ಲಭ್ಯವಿದೆ. ಇದು ಇತರ ಕಾರುಗಳಿಗಿಂತ ಭಿನ್ನವಾಗಿದ್ದು, ಮಾರುಕಟ್ಟೆಯಲ್ಲಿ ಇನ್ನುಳಿದ ಕಾರ್ ಗಳಿಗೆ ಬಾರಿ ಪೈಪೋಟಿ ನೀಡಲಿದೆ.

ಇನ್ನು ಹೊಸ ಸ್ವಿಫ್ಟ್ ಹಳೆಯ ಮಾದರಿಗಿಂತ ಹೆಚ್ಚು ಮೈಲೇಜ್ ನೀಡಲಿದೆ. ಹೊಸ ಸ್ವಿಫ್ಟ್ ಶೇ.14ರಷ್ಟು ಹೆಚ್ಚು ಮೈಲೇಜ್ ನೀಡುವುದು ನಿಜ. ಇದರ ಮ್ಯಾನುವಲ್ ಟ್ರಾನ್ಸ್‌ಮಿಷನ್ ಪ್ರತಿ ಲೀಟರ್‌ ಗೆ 24.8 ಕಿಮೀ ಮೈಲೇಜ್ ನೀಡುತ್ತದೆ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಮಾದರಿಯು ಪ್ರತಿ ಲೀಟರ್‌ ಗೆ 25.75 ಕಿಮೀ ಮೈಲೇಜ್ ನೀಡುತ್ತದೆ. ಇದರ ಐದು ರೂಪಾಂತರಗಳು ವಿವಿಧ ಬಣ್ಣಗಳಲ್ಲಿ ಲಭ್ಯವಿವೆ. ನಿಮ್ಮ ಆಯ್ಕೆಗೆ ಅನುಗುಣವಾಗಿ ನೀವು ಸ್ವಿಫ್ಟ್ ಅನ್ನು ಆರಿಸಿಕೊಳ್ಳಬಹುದು.

Swift 2024 Price And Feature
Image Credit: Zigwheels

ಭರ್ಜರಿ ಡಿಮ್ಯಾಂಡ್ ಪಡೆಯುತ್ತಿದೆ ಸ್ವಿಫ್ಟ್ ನೂತನ ಮಾದರಿ
ಹೊಸ ತಲೆಮಾರಿನ ಮಾರುತಿ ಸ್ವಿಫ್ಟ್ Z ಸರಣಿಯ 1.2 ಲೀಟರ್ 3 ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಈ ಎಂಜಿನ್ 82 ಎಚ್‌ಪಿ ಶಕ್ತಿಯನ್ನು ಉತ್ಪಾದಿಸುತ್ತದೆ. ಇದರೊಂದಿಗೆ, ಇದು 108 ನ್ಯೂಟನ್ ಮೀಟರ್‌ ಗಳ ಟಾರ್ಕ್ ಅನ್ನು ಸಹ ಉತ್ಪಾದಿಸುತ್ತದೆ. ಅದರ ಕೆಲವು ರೂಪಾಂತರಗಳಲ್ಲಿ ನೀವು ಸೌಮ್ಯವಾದ ಹೈಬ್ರಿಡ್ ತಂತ್ರಜ್ಞಾನವನ್ನು ಹೊಂದಿದೆ. ಹೊಸ ತಲೆಮಾರಿನ ಮಾರುತಿ ಸ್ವಿಫ್ಟ್ ಹಳೆಯ ಸ್ವಿಫ್ಟ್ ಗಿಂತ 15 ಎಂಎಂ ಉದ್ದ, 30 ಎಂಎಂ ಎತ್ತರ ಮತ್ತು 40 ಎಂಎಂ ಅಗಲವಿದೆ.

Join Nadunudi News WhatsApp Group

ಇದರ ವ್ಹೀಲ್ ಬೇಸ್ ಹಳೆಯ ಮಾದರಿಯಂತೆಯೇ ಇದೆ. ಆದರೆ ಅದರ ಆಯಾಮಗಳನ್ನು ಸ್ವಲ್ಪ ಹೆಚ್ಚಿಸಲಾಗಿದೆ. ನೂತನ ಸ್ವಿಫ್ಟ್ ಮಾದರಿಯಲ್ಲಿ ನೀವು 6 ಏರ್ ಬ್ಯಾಗ್ ಗಳು, ಹಿಲ್ ಹೋಲ್ಡ್ ಅಸಿಸ್ಟ್, ಹೊಸ ಸಸ್ಪೆನ್ಷನ್ ಸೆಟಪ್, 3 ಪಾಯಿಂಟ್ ಸೀಟ್ ಬೆಲ್ಟ್ ಅನ್ನು ಪಡೆಯುತ್ತೀರಿ. ಒಳಗೆ, ಬಲೆನೊವನ್ನು ನೆನಪಿಸುವ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ನಿಮಗೆ ನೀಡಲಾಗಿದೆ. ಅತ್ಯಾಕರ್ಷ ಫೀಚರ್ ಇರುವ ಸ್ವಿಫ್ಟ್ ಮಾದರಿಯನ್ನು ಶೀಘ್ರದಲ್ಲೇ ನಿಮ್ಮದಾಗಿಸಿಕೊಳಬಹುದು.

Swift 2024 Price In India
Image Credit: Zigwheels

Join Nadunudi News WhatsApp Group