T20 World Cup 2024: T20 ವಿಶ್ವಕಪ್ ವಿನ್ ಆಗುವ ತಂಡಕ್ಕೆ ಸಿಗುವ ಒಟ್ಟು ಬಹುಮಾನ ಎಷ್ಟು…? ಭರ್ಜರಿ ಬಹುಮಾನ.

T20 ಪಂದ್ಯದ ವಿಜೇತರಿಗೆ ದೊಡ್ಡ ಮೊತ್ತದ ಬಹುಮಾನ ಘೋಷಿಸಿದ ICC

T20 World Cup 2024 Winning Prize Money: ಸದ್ಯ ಜೂನ್ ನಿಂದ T20 World Cup 2024 ಆರಂಭವಾಗಿದೆ. ಕ್ರಿಕೆಟ್ ಅಭಿಮಾನಿಗಳು ಈ T20 ಪಂದ್ಯಕ್ಕಾಗಿ ಬಹಳ ಕುತೂಹಲದಲ್ಲಿದ್ದರೆ. ಸದ್ಯ T20 World Cup 2024 ರ ವಿಜೇತ ತಂಡಕ್ಕೆ ಸಿಗುವ ಬಹುಮಾನದ ಬಗ್ಗೆ ಮಾಹಿತಿ ಲಭಿಸಿದೆ.

ಈ ಬಾರಿ T20 ಯಲ್ಲಿ ಗೆಲ್ಲುವ ತಂಡ ಎಷ್ಟು ಬಹುಮಾನ ಮೊತ್ತವನ್ನು ಪಡೆಯಲ್ಲಿದೆ ಎನ್ನುವ ಬಗ್ಗೆ ICC ಅಧಿಕೃತ ಘೋಷಣೆ ಹೊರಡಿಸಿದೆ. 9ನೇ ಆವೃತ್ತಿಯ ಟಿ20 ವಿಶ್ವಕಪ್ ವಿಜೇತರಿಗೆ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ಭಾರೀ ಮೊತ್ತದ ಬಹುಮಾನವನ್ನು ಘೋಷಿಸಿದೆ. ಇದು ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ಬಹುಮಾನ ಮೊತ್ತವಾಗಿದೆ.

T20 World Cup 2024 Winning Prize Money
Image Credit: Live Mint

T20 ಪಂದ್ಯದ ವಿಜೇತರಿಗೆ ದೊಡ್ಡ ಮೊತ್ತದ ಬಹುಮಾನ ಘೋಷಿಸಿದ ICC
ಜೂನ್ ನಲ್ಲಿ 28 ದಿನಗಳಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ. ಅಮೆರಿಕದ 3 ಮತ್ತು ವೆಸ್ಟ್ ಇಂಡೀಸ್‌ ನ 6 ಸೇರಿದಂತೆ ಒಟ್ಟು 9 ಕ್ರೀಡಾಂಗಣಗಳನ್ನು ಇದಕ್ಕಾಗಿ ಸಜ್ಜುಗೊಳಿಸಲಾಗಿದೆ. ಜೂನ್ 1ರಿಂದ ಆರಂಭವಾಗಿರುವ ಟಿ20 ವಿಶ್ವಕಪ್ ನ ಪ್ರಾಥಮಿಕ ಸುತ್ತಿನಲ್ಲಿ 40 ಪಂದ್ಯಗಳು ನಡೆಯಲಿದ್ದು, ನಂತರ ಸೂಪರ್ 8 ಹಂತ, ಸೆಮಿಫೈನಲ್ ಹಾಗೂ ಫೈನಲ್ ಪಂದ್ಯ ನಡೆಯಲಿದೆ. ಈ ಎಲ್ಲ ಪಂದ್ಯದಲ್ಲಿ ಜಯ ಸಾಧಿಸಿ ಕೋಣೆಯಲ್ಲಿ ಗೆದ್ದು ಬಿಗುವ ತಂಡಕ್ಕೆ ಎಷ್ಟು ಬಹುಮಾನ ಮೊತ್ತ ಸಿಗಲಿದೆ ಎನ್ನುವ ಬಗ್ಗೆ ICC ಅಧಿಕೃತವಾಗಿ ಘೋಷಿಸಿದೆ. ಅಷ್ಟಕ್ಕೂ T20 World Cup 2024 ರ ವಿಜೇತ ತಂಡಕ್ಕೆ ಎಷ್ಟು ಬಹುಮಾನ ಮೊತ್ತ ಸಿಗಲಿದೆ..? ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

2024 ICC Men's T20 World Cup
Image Credit: Lokmatnews

T20 ವಿಶ್ವಕಪ್ ವಿನ್ ಆಗುವ ತಂಡಕ್ಕೆ ಸಿಗುವ ಒಟ್ಟು ಬಹುಮಾನ ಎಷ್ಟು…? ಭರ್ಜರಿ ಬಹುಮಾನ
•ಜೂನ್ 29ರಂದು ಬಾರ್ಬಡೋಸ್‌ ನ ಕಿಂಗ್‌ ಸ್ಟನ್ ಓವಲ್‌ ನಲ್ಲಿ ನಡೆಯಲಿರುವ ಅಂತಿಮ ಪಂದ್ಯದಲ್ಲಿ ಟ್ರೋಫಿ ಎತ್ತಿ ಹಿಡಿಯುವ ತಂಡಕ್ಕೆ ಒಟ್ಟು 24.5 ಲಕ್ಷ ಅಮೆರಿಕನ್ ಡಾಲರ್ ಅಂದರೆ ಭಾರತೀಯ ರೂ. ಗಳಲ್ಲಿ 20.36 ಕೋಟಿ ಬಹುಮಾನ ನೀಡಲಾಗುವುದು.

•2ನೇ ಸ್ಥಾನ ಪಡೆಯುವ ತಂಡ 12.8 ಅಮೆರಿಕನ್ ಡಾಲರ್ ಅಂದರೆ ಭಾರತೀಯ ರೂ. ಗಳಲ್ಲಿ 10.63 ಕೋಟಿ ಬಹುಮಾನ ಪಡೆಯಲಿದೆ. ಸೆಮಿಫೈನಲ್ ಹಂತ ತಲುಪಿರುವ ತಂಡಗಳು ತಲಾ ರೂ. 6.54 ಕೋಟಿ ಬಹುಮಾನ ಪಡೆಯಲಿವೆ.

Join Nadunudi News WhatsApp Group

•ಸೂಪರ್ 8 ಹಂತದಲ್ಲಿ ಸೋತ ನಾಲ್ಕು ತಂಡಗಳು ತಲಾ ರೂ. 3.17 ಕೋಟಿ ಪಡೆಯಲಿವೆ. 9, 10, 11 ಮತ್ತು 12ನೇ ಶ್ರೇಯಾಂಕದ ತಂಡಗಳು ತಲಾ ರೂ. 2 ಕೋಟಿ ಪಡೆಯಲಿವೆ.

•ಪ್ರತಿ ತಂಡವು ಆಡುವ ಪ್ರತಿ ಪಂದ್ಯಕ್ಕೆ ಹೆಚ್ಚುವರಿಯಾಗಿ ರೂ. 25 ಲಕ್ಷ ಪಡೆಯುತ್ತದೆ.

T20 World Cup 2024
Image Credit: Jagran

Join Nadunudi News WhatsApp Group