T20 World Cup: ಕೊಹ್ಲಿ ಅಭಿಮಾನಿಗಳಿಗೆ ಬೇಸರದ ಸುದ್ದಿ, BCCI ನಿಂದ ಮಹತ್ವದ ನಿರ್ಧಾರ ಸಾಧ್ಯತೆ

ಭಾರತ, ಕೆನಡಾ ವಿರುದ್ಧದ ಪಂದ್ಯಕ್ಕೆ ಸಂಬಂಧಿಸಿದಂತೆ BCCI ನಿಂದ ಮಹತ್ವದ ನಿರ್ಧಾರ

T20 World Cup Team India: ಟಿ20 ವಿಶ್ವಕಪ್ ಅಂಗವಾಗಿ ಜೂನ್ 15 ರಂದು ಗ್ರೂಪ್ ಹಂತದ ಕೊನೆಯ ಪಂದ್ಯವನ್ನು ಟೀಂ ಇಂಡಿಯಾ ಆಡಲಿದೆ. ಫ್ಲೋರಿಡಾದ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂ ಟರ್ಫ್‌ ನಲ್ಲಿ ರೋಹಿತ್ ಪಡೆ ಕ್ರಿಕೆಟ್ ಶಿಶು ಕೆನಡಾವನ್ನು ಎದುರಿಸಲಿದೆ.

ಈ ಪಂದ್ಯದಲ್ಲಿ ಹಲವು ಬದಲಾವಣೆಗಳೊಂದಿಗೆ ಟೀಂ ಇಂಡಿಯಾ ಅಖಾಡಕ್ಕಿಳಿಯಲಿದೆ. ಈಗಾಗಲೇ ಸತತ ಮೂರು ಗೆಲುವಿನೊಂದಿಗೆ ಸೂಪರ್ 8ಕ್ಕೆ ಅರ್ಹತೆ ಪಡೆದಿರುವ ಭಾರತ, ಕೆನಡಾ ವಿರುದ್ಧದ ಪಂದ್ಯಕ್ಕೆ ಸಜ್ಜಾಗಿದೆ. ಈ ಪಂದ್ಯಕ್ಕೆ ಸಂಬಂಧಿಸಿದಂತೆ BCCI ಮಹತ್ವದ ನಿರ್ಧಾರ ಕೈಗೊಂಡಿದೆ.

T20 World Cup Team India
Image Credit: Jagranjosh

BCCI ನಿಂದ ಮಹತ್ವದ ನಿರ್ಧಾರ ಸಾಧ್ಯತೆ
ಗ್ರೂಪ್ ಹಂತದ ಕೊನೆಯ ಪಂದ್ಯದಲ್ಲಿ ಹಲವು ಬದಲಾವಣೆಗಳೊಂದಿಗೆ ಟೀಂ ಇಂಡಿಯಾ ಅಖಾಡಕ್ಕಿಳಿಯಲಿದೆ. ಈಗಾಗಲೇ ಸತತ ಮೂರು ಗೆಲುವಿನೊಂದಿಗೆ ಸೂಪರ್ 8ಕ್ಕೆ ಅರ್ಹತೆ ಪಡೆದಿರುವ ಭಾರತ, ಕೆನಡಾ ವಿರುದ್ಧದ ಪಂದ್ಯಕ್ಕೆ ಸಜ್ಜಾಗಿದೆ. ಈ ಪಂದ್ಯದ ಫಲಿತಾಂಶವು ಯಾವುದೇ ಪರಿಣಾಮ ಬೀರದಿರುವ ಕಾರಣ, ರೋಹಿತ್ ತಂಡದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲು ಮತ್ತು ಸೂಪರ್ 8 ರ ಮೊದಲು ಕೆಲವು ಸ್ಟಾರ್ ಆಟಗಾರರಿಗೆ ವಿಶ್ರಾಂತಿ ನೀಡಲು ಮುಂದಾಗಿದ್ದಾರೆ ಎನ್ನುವ ಬಗ್ಗೆ ವರದಿಯಾಗಿದೆ.

ಗ್ರೂಪ್-ಎ ನಿಂದ ಮೂರು ಗೆಲುವುಗಳೊಂದಿಗೆ ಟೀಮ್ ಇಂಡಿಯಾ ಸೂಪರ್ 8 ಗೆ ಅರ್ಹತೆ ಪಡೆದುಕೊಂಡಿದೆ. ಉಳಿದ ಒಂದು ಸ್ಥಾನಕ್ಕೆ ಅಮೆರಿಕ ಮತ್ತು ಪಾಕಿಸ್ತಾನ ಪೈಪೋಟಿ ನಡೆಸುತ್ತಿವೆ. USA ಕೂಡ ಇದರಲ್ಲಿ ಹೆಚ್ಚಿನ ಅವಕಾಶಗಳನ್ನು ಹೊಂದಿದೆ. ಅದೇನೇ ಇರಲಿ, ಸೂಪರ್ 8 ರಲ್ಲಿ ಆಸ್ಟ್ರೇಲಿಯಾ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದೊಂದಿಗೆ ಪೈಪೋಟಿ ನಡೆಸುವ ಅವಕಾಶ ಟೀಂ ಇಂಡಿಯಾಗಿದೆ.

T20 World Cup 2024
Image Credit: Thequint

ಕೊಹ್ಲಿ ಅಭಿಮಾನಿಗಳಿಗೆ ಬೇಸರದ ಸುದ್ದಿ
ಜೂನ್ 24ರಂದು ಆಸೀಸ್ ವಿರುದ್ಧದ ಪಂದ್ಯ ನಿರ್ಧಾರವಾಗಿದ್ದು, ಈ ಮಹತ್ವದ ಪಂದ್ಯಗಳಿಗೂ ಮುನ್ನ ಟೀಂ ಇಂಡಿಯಾ ತಂಡದಲ್ಲಿನ ಕೆಲ ನ್ಯೂನತೆಗಳನ್ನು ಸರಿಪಡಿಸಲು ಸಜ್ಜಾಗಿದೆ. ಈ ಟೂರ್ನಿಯಲ್ಲಿ ಇದುವರೆಗೆ ತಂಡವನ್ನು ಕಾಡುತ್ತಿರುವ ಸಮಸ್ಯೆ ಆರಂಭಿಕ ಜೋಡಿ. ರೋಹಿತ್ ಶರ್ಮಾ ಜೊತೆ ಓಪನಿಂಗ್ ಮಾಡುತ್ತಿರುವ ಕೊಹ್ಲಿ ಮೂರು ಪಂದ್ಯಗಳಲ್ಲಿ ವಿಫಲರಾಗಿದ್ದಾರೆ. ಇದರೊಂದಿಗೆ ಕೊಹ್ಲಿಗೆ ಕೊಂಚ ವಿಶ್ರಾಂತಿ ನೀಡಲಿದ್ದಾರೆ ಎನ್ನಲಾಗಿದೆ. ಕೊಹ್ಲಿ ಸ್ಥಾನವನ್ನು ಯಶಸ್ವಿ ಜೈಸ್ವಾಲ್ ಅಥವಾ ಸಂಜು ಸ್ಯಾಮ್ಸನ್ ಬದಲಾಯಿಸುವ ಸಾಧ್ಯತೆಯಿದೆ.

Join Nadunudi News WhatsApp Group

ಮತ್ತೊಬ್ಬ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ಅವರಿಗೆ ವಿಶ್ರಾಂತಿ ನೀಡಲು ತಂಡದ ಆಡಳಿತ ಮಂಡಳಿ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ. ಸೂಪರ್ 8ರಲ್ಲಿ ಹೆಚ್ಚು ಉತ್ಸಾಹದಿಂದ ಬೌಲಿಂಗ್ ಮಾಡಲು ಬುಮ್ರಾ ಸ್ವಲ್ಪ ವಿಶ್ರಾಂತಿ ನೀಡುವುದು ಉತ್ತಮ ಎಂದು ಅಭಿಪ್ರಾಯಪಟ್ಟರು. ಇದೀಗ ಕುಲದೀಪ್ ಯಾದವ್ ಮತ್ತು ಯುಜುವೇಂದ್ರ ಚಹಾಲ್ ಸೂಪರ್ 8 ಹಂತದಲ್ಲಿ ಸ್ಥಾನ ಪಡೆಯಲು ಕಠಿಣ ಅಭ್ಯಾಸದಲ್ಲಿ ತೊಡಗಿದ್ದಾರೆ. ಏಕೆಂದರೆ, ಎಲ್ಲಾ ಸೂಪರ್ 8 ಪಂದ್ಯಗಳು ವೆಸ್ಟ್ ಇಂಡೀಸ್‌ ನಲ್ಲಿ ನಡೆಯಲಿವೆ. ಅಲ್ಲಿನ ಪಿಚ್‌ ಗಳು ಸ್ಪಿನ್‌ ಗೆ ಉತ್ತಮವಾಗಿವೆ. ಹಾರ್ದಿಕ್ ಪಾಂಡ್ಯ ಕೂಡ ವಿಶ್ರಾಂತಿ ಪಡೆಯುವ ಸಾಧ್ಯತೆ ಇದೆ ಎನ್ನುವ ಬಗ್ಗೆ ವರದಿಯಾಗಿದೆ.

T20 World Cup Latest Update
Image Credit: NDTV

Join Nadunudi News WhatsApp Group