Cancer Tablet: ಕೊನೆಗೂ ಬಂತು ಕ್ಯಾನ್ಸರ್ ಗಾಗಿ ಮಾತ್ರೆ, ಒಂದು ಮಾತ್ರೆಯ ಬೆಲೆ ಎಷ್ಟಿದೆ ಗೊತ್ತಾ…?

ಕ್ಯಾನ್ಸರ್ ಖಾಯಿಲೆಯ ಒಂದು ಮಾತ್ರೆಯ ಬೆಲೆ ಎಷ್ಟಿದೆ ಗೊತ್ತಾ...?

Tablet For Cancer: ಜಗತ್ತಿನಲ್ಲಿ ಸಾಕಷ್ಟು ಭೀಕರ ಕಾಯಿಲೆಗಳಿವೆ. ಅದೆಷ್ಟೋ ಜನರು ಭಯಾನಕ ಕಾಯಿಲೆಯಿಂದ ನರಳಿ ತಮ್ಮ ಪ್ರಾಣವನ್ನು ಬಿಟ್ಟಿದ್ದಾರೆ. ಕಾಯಿಲೆಗಳಿಗೆ ಚಿಕಿತ್ಸೆ ಇದ್ದರು ಕೂಡ ಉಪಯೋಗವಾಗದೆ ಸಾಕಷ್ಟು ಪ್ರಾಣ ಹಾನಿಯಾಗಿದೆ. ಇನ್ನು ಮಾರಕ ರೋಗಗಳಲ್ಲಿ Cancer ಕೂಡ ಒಂದಾಗಿದೆ. ಯಾರೊಬ್ಬರಿಗಾದರು Cancer ಇದೆ ಎಂದು ತಿಳಿದ ತಕ್ಷಣ ಅಂತಕ ಶುರುವಾಗುತ್ತದೆ.

ಇನ್ನು Cancer ಪ್ರಾರಂಭದಲ್ಲಿ ಚಿಕಿತ್ಸೆಯನ್ನು ಪಡೆಯಲು ಸಾಧ್ಯವಾಗುತ್ತದೆ. ಆದರೆ Cancer ನ ಕೊನೆಯ ಹಂತಕ್ಕೆ ಯಾವುದೇ ಚಿಕಿತ್ಸೆ ಇರುವುದಿಲ್ಲ. ಇದೀಗ ಭಾರತದಲ್ಲಿ Cancer ಗೆ ಔಷಧಿ ಕಂಡು ಹಿಡಿಯಲಾಗಿದೆ ಎನ್ನುವ ಬಗ್ಗೆ ಮಾಹಿತಿ ಲಭಿಸಿದೆ.

Cancer Treatment
Image Credit: Telegraphindia

ಕೊನೆಗೂ ಬಂತು ಕ್ಯಾನ್ಸರ್ ಗಾಗಿ ಮಾತ್ರೆ
ದಶಕಗಳಿಂದಲೂ Cancer ಗಾಗಿ ಔಷಧಿ ಕಂಡುಹಿಡಿಯುವ ಪ್ರಯತ್ನ ನಡೆಯುತ್ತಿದೆ. ಸದ್ಯ ಭಾರತದಲ್ಲಿ Cancer ಗೆ ಔಷದಿ ಕಂಡುಹಿಡಿಯಲಾಗಿದೆ ಎನ್ನುವ ಆಬಗ್ಗೆ ಸುದ್ದಿ ವೈರಲ್ ಆಗಿದೆ. Tata Memorial ಕೇಂದ್ರದ ಸಂಶೋಧಕರು Cancer ಮಾತ್ರೆ ಕಂಡುಹಿಡಿದಿದ್ದಾರೆ ಎಂದು Tata Memorial ಕೇಂದ್ರದ ನಿರ್ದೇಶಕ Dr. Rajendra Badve ಸಂದರ್ಶನದಲ್ಲಿ ತಿಳಿಸಿದ್ದಾರೆ.

ಈ ಮಾತ್ರೆಯನ್ನು ಸಂಭಾವ್ಯ Cancer ರೋಗಿಗಳು ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಬಳಸಬಹುದು. ಮತ್ತು Cancer ಪುನರುತ್ಥಾನ ಅಥವಾ ಮರುಕಳಿಸುವಿಕೆಯನ್ನು ತಡೆಗಟ್ಟಲು ಇದನ್ನು ಅಭಿವೃದ್ಧಿಪಡಿಸಲಾಗಿದೆ ಎಂದಿದ್ದಾರೆ.

Tablet For Cancer
Image Credit: India Today

ಒಂದು ಮಾತ್ರೆಯ ಬೆಲೆ ಎಷ್ಟಿದೆ ಗೊತ್ತಾ…?
ಒಂದು ಮಾತ್ರೆಯ ಬೆಲೆ 100 ರೂಪಾಯಿ ಎನ್ನುವ ಬಗ್ಗೆ ವರದಿಯಾಗಿದೆ. Tata Memorial Hospital ನ ವೈದ್ಯರ ಒಂದು ದಶಕದ ಸುದೀರ್ಘ ಸಂಶೋಧನಾ ಅಧ್ಯಯನವು, ಸಾಯುತ್ತಿರುವ Cancer ಕೋಶಗಳು ಕೀಮೋಥೆರಪಿ ಮತ್ತು ರೇಡಿಯೊಥೆರಪಿ ನಂತರ ಕೋಶ-ಮುಕ್ತ ಕ್ರೊಮಾಟಿನ್ ಕಣಗಳನ್ನು ಬಿಡುಗಡೆ ಮಾಡುತ್ತವೆ ಎಂದು ಕಂಡುಹಿಡಿದಿದೆ. ಅದು ಆರೋಗ್ಯಕರ ಕೋಶಗಳನ್ನು Cancer ಆಗಿ ಪರಿವರ್ತಿಸುತ್ತದೆ.

Join Nadunudi News WhatsApp Group

Cancer ಚಿಕಿತ್ಸೆಯ ಅಡ್ಡ ಪರಿಣಾಮವನ್ನು ತಗ್ಗಿಸಲು ಜೂನ್-ಜುಲೈನಲ್ಲಿ ಮಾತ್ರೆಗೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ಅನುಮೋದನೆ ದೊರೆಯುವ ಸಾಧ್ಯತೆ ಇದೆ. ಒಮ್ಮೆ ಅನುಮೋದಿಸಿದ ನಂತರ, ಮಾತ್ರೆಯು ಕಿಮೊಥೆರಪಿಯಂತಹ ಚಿಕಿತ್ಸೆಗಳ ಅಡ್ಡಪರಿಣಾಮಗಳನ್ನು 50 ಪ್ರತಿಶತದಷ್ಟು ಮತ್ತು Cancer ಮರುಕಳಿಸುವಿಕೆಯ ಸಾಧ್ಯತೆಯನ್ನು 30 ರಷ್ಟು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ವೈದ್ಯರು ಹೇಳಿದ್ದಾರೆ.

Join Nadunudi News WhatsApp Group