Taliban Govt: ಮದುವೆಯಾಗದ ಮಹಿಳೆಯರು ಇನ್ಮುಂದೆ ಈ ಕೆಲಸ ಮಾಡುವಂತಿಲ್ಲ, ಕಠಿಣ ನಿಯಮ ಜಾರಿ.

ತಾಲಿಬಾನ್ ನಲ್ಲಿ ಮದುವೆಯಾಗದ ಮಹಿಳೆಯರಿಗೆ ಹೊಸ ನಿಯಮ ಜಾರಿ

Taliban Govt Rule: ತಾಲಿಬಾನ್ ಆಡಳಿತದಲ್ಲಿ ಅಫ್ಘಾನ್ ಮಹಿಳೆಯರ ಮೇಲೆ ಈಗಲೂ ದೌರ್ಜನ್ಯ ನಡೆಯುತ್ತಿದೆ. ಮಹಿಳೆಯರು ಮೇಲಿಂದ ಮೇಲೆ ಕಿರುಕುಳವನ್ನು ಅನುಭವಿಸುವಂತಾಗಿದೆ. ಮಹಿಳೆಯರಿಯೆಂದೇ ಹೊಸ ಹೊಸ ಕಠಿಣ ನಿಯಮವನ್ನು ತಾಲಿಬಾನ್ ಆಡಳಿತ ಜಾರಿಗೊಳಿಸುತ್ತಿರುತ್ತದೆ.

ತಾಲಿಬಾನ್ ಆಡಳಿತದಲ್ಲಿ ಅಫ್ಘಾನ್ ಮಹಿಳೆಯರ ಮೇಲೆ ನಿರ್ಬಂಧ ಈಗಲೂ ಕೂಡ ಮುಂದುವರೆಸಿಕೊಂಡು ಹೋಗಲಾಗುತ್ತಿದೆ. ಸದ್ಯ ತಾಲಿಬಾನ್ ನಲ್ಲಿ ಮದುವೆಯಾಗದ ಮಹಿಳೆಯರಿಗೆ ಹೊಸ ನಿಯಮ ಜಾರಿಯಾಗಿದೆ.

Taliban Govt Rule
Image Credit: Oneindia

ತಾಲಿಬಾನ್ ನಲ್ಲಿ ಕಠಿಣ ನಿಯಮ ಜಾರಿ
ತಾಲಿಬಾನ್ ಸರ್ಕಾರ ಇದೀಗ ಒಂಟಿ ಮತ್ತು ಅವಿವಾಹಿತ ಮಹಿಳೆಯರಿಹೆ ಹೊಸ ಹೊಸ ನಿರ್ಬಂಧವನ್ನು ಹೇರುತ್ತಿದೆ. ಮಹಿಳೆಯರ ಮೇಲೆ ಎಲ್ಲಾ ರೀತಿಯ ನಿರ್ಬಂಧಗಳು ಮತ್ತು ನಿಬಂಧನೆಗಳನ್ನು ಹೇರಿದ ನಂತರ, ಅಫ್ಘಾನಿಸ್ತಾನದ ಯುಎನ್ ಮಿಷನ್‌ ನ ತ್ರೈಮಾಸಿಕ ವರದಿಯು ತಾಲಿಬಾನ್ ಈಗ ತಮ್ಮ ಗಮನವನ್ನು ಬದಲಾಯಿಸಿದೆ ಮತ್ತು ಒಂಟಿಯಾಗಿರುವ ಅಥವಾ ಪುರುಷ ರಕ್ಷಕ ಅಥವಾ ‘ಮಹ್ರಮ್’ ಇಲ್ಲದ ಆಫ್ಘನ್ ಮಹಿಳೆಯರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ ಎಂದು ಹೇಳಿದೆ.

taliban new restrictions for unmarried women
Image Credit: Times Now News

ಮದುವೆಯಾಗದ ಮಹಿಳೆಯರು ಇನ್ಮುಂದೆ ಈ ಕೆಲಸ ಮಾಡುವಂತಿಲ್ಲ
ಮದುವೆಯಾಗದ ಅಥವಾ ಪುರುಷ ಪೋಷರಕನ್ನು ಹೊಂದಿರದ ಮಹಿಳೆಯಯರಿಗೆ ಹೊಸ ನಿಯಮ ಜಾರಿಯಾಗಲಿದೆ. ತಾಲಿಬಾನ್ ವೈಸ್ ಮತ್ತು ವಿಚರ್ ಸಚಿವಾಲಯದ ಅಧಿಕಾರಿಗಳು ಮಹಿಳೆಗೆ ಆರೋಗ್ಯ ಸೌಲಭ್ಯದಲ್ಲಿ ತನ್ನ ಕೆಲಸಗಳನ್ನು ಉಳಿಸಿಕೊಳ್ಳಲು ಬಯಸಿದರೆ ಮದುವೆಯಾಗುವಂತೆ ಸಲಹೆ ನೀಡಿದ ಘಟನೆಯನ್ನು ಉಲ್ಲೇಖಿಸಲಾಗಿದೆ. ‘ಅವಿವಾಹಿತ ಮಹಿಳೆ ಕೆಲಸ ಮಾಡುವುದು ಸೂಕ್ತವಲ್ಲ’ ​​ಎಂದು ಮಹಿಳೆಗೆ ತಿಳಿಸಲಾಗಿದೆ. ಅಕ್ಟೋಬರ್ 2023 ರಲ್ಲಿ ಮಹ್ರಾಮ್ ಇಲ್ಲದೆ ಕೆಲಸಕ್ಕೆ ಹೋದ ಮೂವರು ಮಹಿಳಾ ಆರೋಗ್ಯ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

Join Nadunudi News WhatsApp Group

Join Nadunudi News WhatsApp Group