Taliban Rule: ಇನ್ನುಮುಂದೆ ಗಂಡ ಹೆಂಡತಿ ಜೊತೆಯಾಗಿ ರೆಸ್ಟೋರೆಂಟ್ ಗೆ ಹೋಗುವಂತಿಲ್ಲ, ಹೊಸ ನಿಯಮ.

ಗಂಡ ಮತ್ತು ಹೆಂಡತಿ ಜೊತೆಯಾಗಿ ರೆಸ್ಟೋರೆಂಟ್ ಗೆ ಹೋಗಬಾರದು ಎಂದು ತಾಲಿಬಾನ್ ಹೊಸ ನಿಯಮವನ್ನ ಅಫಘಾನಿಸ್ತಾನ ನಲ್ಲಿ ಜಾರಿಗೆ ತಂದಿದೆ.

Taliban Rules In Afghanistan: ಆಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡಿದ್ದು ಇದರಿಂದ ಹಲವು ನಿಯಮಗಳು ತಾಲಿಬಾನ್ ಅಲ್ಲಿ ಜಾರಿಯಾಗಿದೆ. ತಾಲಿಬಾನ್ ಅಲ್ಲಿನ ಜನರಿಗೆ ಹತ್ತು ಹಲವು ನಿಯಮಗಳನ್ನು ಜಾರಿ ಮಾಡಿದೆ. ಆಫ್ಘಾನಿಸ್ತಾನದ ಹೆರಾತ್ ಪ್ರಾಂತ್ಯದಲ್ಲಿ ವಾಸಿಸುವವರಿಗೆ ತಾಲಿಬಾನ್ ಮತ್ತೊಂದು ಆದೇಶವನ್ನು ಹೊರಡಿಸಿದೆ. ಇದು ರೆಸ್ಟೋರೆಂಟ್ ವಿಚಾರಕ್ಕೆ ಸಂಬಂಧಿಸಿದೆ.

Taliban has implemented a new rule in Afghanistan that husband and wife should not go to restaurant together.
Image Credit: unocha

ಆಫ್ಘಾನಿಸ್ತಾನದ ಹೆರಾತ್ ಪ್ರಾಂತ್ಯದಲ್ಲಿ ವಾಸಿಸುವವರಿಗೆ ತಾಲಿಬಾನ್ ಹೊಸದೊಂದು ಆದೇಶ
ಆಫ್ಘಾನಿಸ್ತಾನದ ಹೆರಾತ್ ಪ್ರಾಂತ್ಯದಲ್ಲಿ ವಾಸಿಸುವವರಿಗೆ ತಾಲಿಬಾನ್ ಮತ್ತೊಂದು ಆದೇಶವನ್ನು ಹೊರಡಿಸಿದೆ. ಇದರ ಪ್ರಕಾರ ಪುರುಷರು ಫ್ಯಾಮಿಲಿ ರೆಸ್ಟೋರೆಂಟ್ ನಲ್ಲಿ ಕುಟುಂಬ ಸದಸ್ಯರೊಂದಿಗೆ ತಿನ್ನಲು ಅನುಮತಿಸುವುದಿಲ್ಲ. ಇದಲ್ಲದೆ ಪುರುಷರು ಮತ್ತು ಮಹಿಳೆಯರು ಒಟ್ಟಿಗೆ ಉದ್ಯಾವನಕ್ಕೆ ಹೋಗಲು ಅನುಮತಿಸಲಾಗುವುದಿಲ್ಲ.

ಉದ್ಯಾನವನಗಳು ಮತ್ತು ಹಸಿರು ಪ್ರದೇಶಗಳನ್ನು ಹೊಂದಿರುವ ಯಾವುದೇ ರೆಸ್ಟೋರೆಂಟ್ ಗೆ ಯಾವುದೇ ಮಹಿಳೆ ಅಥವಾ ಕುಟುಂಬಕ್ಕೆ ಭೇಟಿ ನೀಡಲು ಸಾಧ್ಯವಾಗುವುದಿಲ್ಲ ಎಂದು ತಾಲಿಬಾನ್ ಆದೇಶ ಹೇಳುತ್ತದೆ. ಇಂತಹ ಸ್ಥಳಗಳಲ್ಲಿ ಪುರುಷರು ಮಹಿಳೆಯರು ಭೇಟಿಯಾಗುತ್ತಾರೆ ಎಂಬ ಧಾರ್ಮಿಕ ಸಂಘಟನೆಗಳ ಸದಸ್ಯರು ದೂರಿನ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

A new law has been implemented for women and men in Afghanistan.
Image Credit: visitafghanistan

ತಾಲಿಬಾನ್ ನ ಹಲವು ನಿಯಮಗಳು
2021 ಆಗಸ್ಟ್ ನಲ್ಲಿ ತಾಲಿಬಾನ್ ಅಧಿಕಾರ ವಹಿಸಿಕೊಂಡ ನಂತರ ಆಫ್ಘಾನಿಸ್ತಾನದಲ್ಲಿ ಹಲವಾರು ನಿರ್ಬಂಧಗಳನ್ನು ವಿಧಿಸಲಾಗಿದೆ. ಈ ಹಿಂದೆ ಶಿಕ್ಷಣಕ್ಕೆ ಸಂಬಂಧಿಸಿದಂತೆ ನಿರ್ಬಂಧ ಹೇರಲಾಗಿತ್ತು.

ಆರನೇ ತರಗತಿಗಿಂತ ಹೆಚ್ಚಿನ ಹುಡುಗಿಯರು ಶಾಲೆಗೇ ಹೋಗುವುದನ್ನು ಮತ್ತು ಮಹಿಳೆಯರು ವಿಶ್ವವಿದ್ಯಾನಿಲಯಕ್ಕೆ ಹೋಗುವುದನ್ನು ತಾಲಿಬಾನ್ ನಿಷೇಧ ಮಾಡಿತ್ತು. ತಾಲಿಬಾನ್ ಅಲ್ಲಿ ಪಾರ್ಕ್ ಮತ್ತು ಜಿಮ್ ಗೆ ಹೋಗಲು ಸಹ ನಿಷೇಧವಿದೆ.

Join Nadunudi News WhatsApp Group

Join Nadunudi News WhatsApp Group