Tata Winger: ಅತೀ ಕಡಿಮೆ ಬೆಲೆಗೆ 14 ಸೀಟರ್ ಕಾರ್ ಲಾಂಚ್ ಮಾಡಿದ ಟಾಟಾ, ಬಾಡಿಗೆ ಮಾಡುವವರಿಗಾಗಿ.

ಅತೀ ಕಡಿಮೆ ಬೆಲೆಗೆ 14 ಸೀಟರ್ ಕಾರ್ ಲಾಂಚ್ ಮಾಡಿದ ಟಾಟಾ

Tata 14 Seater Winger: ಸದ್ಯ ದೇಶದಲ್ಲಿ ವಿಭಿನ್ನ ವಿನ್ಯಾಸದ ಹತ್ತು ಹಲವು ಮಾದರಿಯ ವಾಹನಗಳು ಲಭ್ಯವಿದೆ. ವಿವಿಧ ಕಂಪನಿಗಳು ಹೊಸ ಹೊಸ ಮಾದರಿಯ ಕಾರ್ ಅನ್ನು ಪರಿಚಯಿಸುತ್ತಿದ್ದಂತೆ ಇನ್ನಿತರ ಕಂಪನಿಗಳು ಕೂಡ ಪರಿಚಯಗೊಂಡಿರುವ ಮಾದರಿಗಿಂತ ಹೆಚ್ಚಿನ ಫೀಚರ್ ಅನ್ನು ಹೊಂದಿರುವ ವಾಹನವನ್ನು ಪರಿಚಯಿಸುವ ಮೂಲಕ ಪೈಪೋಟಿ ನೀಡುತ್ತವೆ.

ಸದ್ಯ ಜನಪ್ರಿಯ ವಾಹನ ತಯಾರಕ ಕಂಪೆನಿಯಾದ TATA ಇದೀಗ ವಿಶೇಷವಾಗಿ ದೊಡ್ಡ ಕುಟುಂಬಕ್ಕಾಗಿ ಹೊಸ ಮಾದರಿಯಲ್ಲಿ ವಾಹನವನ್ನು ಸಜ್ಜುಗೊಳಿಸಿದೆ. ಅತಿ ದೊಡ್ಡ ಕುಟುಂಬ ಈ ವಾಹನದಲ್ಲಿ ಸರಾಗವಾಗಿ ತಮ್ಮ ಪ್ರಯಾಣವನ್ನು ಮಾಡಬಹುದಾಗಿದೆ. ಹಾಗೆಯೆ ಬಾಡಿಗೆ ಬಿಸಿನೆಸ್ ಮಾಡುವವರಿಗೆ ಕೂಡ ಈ ವಾಹನ ಬೆಸ್ಟ್ ಆಯ್ಕೆ ಆಗಲಿದೆ.

Tata 14 Seater Winger
Image Credit: Indiamart

ಅತೀ ಕಡಿಮೆ ಬೆಲೆಗೆ 14 ಸೀಟರ್ ಕಾರ್ ಲಾಂಚ್ ಮಾಡಿದ ಟಾಟಾ
TATA ಇದೀಗ ದೊಡ್ಡ ಕುಟುಂಬಕ್ಕಾಗಿ 14 ಸೀಟ್ ಇರುವ ವಾಹನವನ್ನು ಪರಿಚಯಿಸಿದೆ. ಈ 14 seater ವಾಹನದ ಹೆಸರು Tata Winger. ನೂತನ ಟಾಟಾ ವಿಂಗರ್ 15S ಮೊನೊಕಾಕ್ ವಿನ್ಯಾಸದೊಂದಿಗೆ ಹೆಚ್ಚು ಆಕರ್ಷಣೀಯವಾಗಿದೆ. ವಿಂಗರ್ 15S ಪ್ರಯಾಣಿಕರಿಗಾಗಿ ಹೆಚ್ಚಿನ ವೈಶಿಷ್ಟ್ಯಗಳೊಂದಿಗೆ ಪರಿಚಯವಾಗಿದೆ. ಪ್ರತಿಯೊಂದು ಆಸನದಲ್ಲೂ ಪುಶ್- ಬ್ಯಾಕ್ ಸೀಟ್‌ ಗಳು, ಪ್ರತ್ಯೇಕ AC ವೆಂಟ್‌ ಗಳು ಮತ್ತು USB ಚಾರ್ಜಿಂಗ್ ಪಾಯಿಂಟ್‌ ಗಳನ್ನು ಹೊಂದಿದ್ದು ಸವಾರಿ ಮಾಡುವ ಪ್ರತಿಯೊಬ್ಬರೂ ಕೂಡ ಆರಾಮದಾಯ ಪ್ರಯಾಣವನ್ನು ಅನುಭವಿಸಬಹುದು.

ವಿಂಗರ್ 15S ಬಲಿಷ್ಠವಾದ 2.2 ಲೀಟರ್ ಡಿಕೋರ್ ಡೀಸೆಲ್ ಎಂಜಿನ್‌ ಅನ್ನು ಹೊಂದಿದೆ.  ಈ ಎಂಜಿನ್  98bhp ಮತ್ತು 190Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. 5 ಸ್ಪೀಡ್ ಮ್ಯಾನುವಲ್ ಗೇರ್‌ ಬಾಕ್ಸ್‌ ನೊಂದಿಗೆ ಜೋಡಿಸಿದ್ದು, ಗಂಟೆಗೆ 100 ಕಿಮೀ ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಶಕ್ತಿಶಾಲಿ ಎಂಜಿನ್ ಸಾಮರ್ಥ್ಯವನ್ನು ಹೊಂದಿರುವ Tata 14 Seater Winger ಪ್ರತಿ ಲೀಟರ್ ಗೆ 17 ಕಿಲೋಮೀಟರ್ ಮೈಲೇಜ್ ನೀಡಲಿದೆ.

Tata 14 Seater Winger Price
Image Credit: Original Source

ಬಾಡಿಗೆ ಮಾಡುವವರಿಗೆ ಬಜೆಟ್ ಬೆಲೆಯ ಕಾರ್
ಇನ್ನು ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಅನ್ನು ಸವಾರರ ಸುರಕ್ಷತೆಗಾಗಿ ಅಳವಡಿಸಲಾಗಿದೆ. ನೂತನ ವಿಂಗರ್ 3 ವರ್ಷಗಳ ವಾರಂಟಿಯೊಂದಿಗೆ 3 ಲಕ್ಷ km ವಿಸ್ಕೃತ ವಾರಂಟಿಯೊಂದಿಗೆ ಬರಲಿದೆ. ಹೆಚ್ಚು ಆರಾಮದಾಯಕ ಪ್ರಯಾಣಕ್ಕೆ Tata 14 ಆಸನಗಳ Winger ಉತ್ತಮ ಆಯ್ಕೆ ಎನ್ನಬಹುದು. ಇನ್ನು ನೂತನ Tata 14 ಆಸನಗಳಿರುವ  Winger ಗೆ ಮಾರುಕಟ್ಟೆಯಲ್ಲಿ 15.21 ಲಕ್ಷದಿಂದ 16.20 ಲಕ್ಷ ರೂ. ನಿಗದಿಪಡಿಸಲಾಗಿದೆ. ಇನ್ನು 14 ಆಸನಳಗಳಿರುವ ಕಾರಣ ಈ ಕಾರ್ ನ್ ಬೆಲೆ ಅಗ್ಗ ಎನ್ನಬಹುದು.

Join Nadunudi News WhatsApp Group

Tata 14 Seater Winger Mileage
Image Credit: Tatamotors

Join Nadunudi News WhatsApp Group