Diesel Car: ಕೇವಲ 6 ಲಕ್ಷಕ್ಕೆ 23 Km ಮೈಲೇಜ್ ಕೊಡುವ ಡೀಸೆಲ್ ಕಾರ್ ಲಾಂಚ್ ಮಾಡಿದ ಟಾಟಾ, 5 ಸ್ಟಾರ್ ರೇಟಿಂಗ್

24 ಕಿಲೋಮೀಟರ್ ಮೈಲೇಜ್ ನೀಡಲಿದೆ ಈ 5 ಸ್ಟಾರ್ ಕಾರ್

Tata Diesel Car Price And Mileage: ಭಾರತೀಯ ಆಟೋ ವಲಯದಲ್ಲಿ TATA ಕಂಪನಿಯು ಅತಿ ಹೆಚ್ಚು ಜನಪ್ರಿಯತೆಯನ್ನು ಪಡೆದಿದೆ. ಕಂಪನಿಯು ಈಗಾಗಲೇ ಹತ್ತು ಹಲವು ಮಾದರಿಯ ಕಾರ್ ಗಳನ್ನೂ ಪರಿಚಯಿಸುತ್ತ ಅತಿ ಹೆಚ್ಚು ಮಾರಾಟವಾಗುವ ಕಾರ್ ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಎನ್ನಬಹುದು. ಇನ್ನು ಟಾಟಾ ಕಂಪನಿಯು ತನ್ನ ಗ್ರಾಹಕರಿಗೆ ಎಲ್ಲ ವಿಧದ ಇಂಧನದ ಆಯ್ಕೆಯಲ್ಲಿ ಕಾರ್ ಅನ್ನು ಪರಿಚಯಿಸುತ್ತದೆ.

ಪೆಟ್ರೋಲ್, ಡೀಸೆಲ್, ಸಿಎನ್ ಜಿ ಯಾ ತಮ್ಮ ಇಚ್ಛೆಗೆ ಅನುಗುನವಾಗಿ ಗ್ರಾಹಕರು ಆಯ್ಕೆಯನ್ನು ಮಾಡಿಕೊಳ್ಳಬಹುದು. ಸದ್ಯ ಕಂಪನಿಯು ಇದೀಗ ತನ್ನ Tata Altroz ಮಾದರಿಯನ್ನು ಮೂರು ಇಂಧನಗಳ ಆಯ್ಕೆಯಲ್ಲಿ ಗ್ರಾಹಕರಿಗೆ ನೀಡಿದೆ. ನಾವೀಗ ಈ ಲೇಖನದಲ್ಲಿ Tata Altroz ಕಾರ್ ನ ಫೀಚರ್ ಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.

Tata Altroz Price And Features
Image Credit: Cartrade

24km ಮೈಲೇಜ್ ನೀಡುವ ಈ ಮಾದರಿಗೆ 5 ಸ್ಟಾರ್ ರೇಟಿಂಗ್
ಟಾಟಾ Altroz ಬೆಲೆ ಮಾರುಕಟ್ಟೆಯಲ್ಲಿ 6.65 ಲಕ್ಷದಿಂದ 10.80 ಲಕ್ಷ ರೂ. ಆಗಿದೆ. ಇದರ ಡೀಸೆಲ್ ರೂಪಾಂತರವು 8.90 ಲಕ್ಷದಿಂದ ಪ್ರಾರಂಭವಾಗುತ್ತದೆ. Altroz ಮಾದರಿಯು ​​1.5 ಲೀಟರ್ ಡೀಸೆಲ್ ಎಂಜಿನ್‌ ನಿಂದ ನಿಯಂತ್ರಿಸಲ್ಪಡುತ್ತದೆ, ಇದು 90PS ಪವರ್ ಮತ್ತು 200Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಡೀಸೆಲ್ ಎಂಜಿನ್ ಹೊಂದಿರುವ ಆಲ್ಟ್ರೋಜ್ 23.64 kmpl ಮೈಲೇಜ್ ನೀಡುತ್ತದೆ.

ಇದಲ್ಲದೆ, 1.2-ಲೀಟರ್ ನೈಸರ್ಗಿಕವಾಗಿ ಆಸ್ಪಿರೇಟೆಡ್ ಪೆಟ್ರೋಲ್ ಮತ್ತು 1.2-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಆಯ್ಕೆಗಳು ಸಹ ಲಭ್ಯವಿದೆ. 5-ಸ್ಪೀಡ್ ಮ್ಯಾನುವಲ್ ಗೇರ್‌ ಬಾಕ್ಸ್ ಅನ್ನು ಮೂರು ಆಯ್ಕೆಗಳಲ್ಲಿಯೂ ನೋಡಬಹುದು. ಇನ್ನು ಮಾರುಕಟ್ಟೆಯಲ್ಲಿ Tata Altroz ಮಾದರಿಯು ಮಾರುತಿ ಬಲೆನೊ ಮಾದರಿಗಳಿಗೆ ನೇರ ಪೈಪೋಟಿ ನೀಡಲಿದೆ. ಮೈಲೇಜ್ ಹಾಗೂ ವೈಶಿಷ್ಟ್ಯಗಳ ವಿಚಾರವಾಗಿ ಇನ್ನಿತರ ಮಾದರಿಗಿಂತ Tata Altroz ಹೆಚ್ಚು ಸ್ಥಾನದಲ್ಲಿದೆ. ಕಂಪನಿಯು ತನ್ನ Tata Altroz ಮಾದರಿಯಲ್ಲಿ ಅತ್ಯಾಧುನಿಕ ಫೀಚರ್ ಗಳನ್ನೂ ಅಳವಡಿಸಿದೆ. ನೀವು Tata Altroz ಮಾದರಿಯಲ್ಲಿ ಈ ಕೆಳಗಿನ ಎಲ್ಲ ಫೀಚರ್ ಗಳನ್ನು ನೋಡಬಹುದಾಗಿದೆ.

Tata Altroz Price In India
Image Credit: Cartrade

Tata Altroz ನಲ್ಲಿ ಏನೆಲ್ಲಾ ಫೀಚರ್ ಇರಲಿದೆ ಗೊತ್ತಾ…?
•7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್

Join Nadunudi News WhatsApp Group

•ಅರೆ ಡಿಜಿಟಲ್ ಉಪಕರಣ ಕ್ಲಸ್ಟರ್

•ಕ್ರೂಸ್ ಕಂಟ್ರೋಲ್

•ಸಿಂಗಲ್ ಪೇನ್ ಸನ್‌ರೂಫ್

•ಸ್ವಯಂಚಾಲಿತ ಹವಾಮಾನ ನಿಯಂತ್ರಣ

•ಎತ್ತರ ಹೊಂದಾಣಿಕೆ ಚಾಲಕ ಸೀಟ್

•ಪವರ್ ವಿಂಡೋ

•ಲೆದರ್ ಸ್ಟೀರಿಂಗ್ ಚಕ್ರ

•ಲೆದರ್ ಆಸನಗಳು

•ಅಡ್ಜೆಸ್ಟೇಬಲ್ ಹೆಡ್‌ ಲೈಟ್‌ ಗಳು

•ಬ್ಯಾಕ್ ಡಿಫಾಗರ್

•ಮಳೆ ಸಂವೇದನೆ ವೈಪರ್‌ಗಳು

•ಮಿಶ್ರಲೋಹದ ಚಕ್ರಗಳು

Tata Altroz Car Mileage
Image Credit: Cartrade

Join Nadunudi News WhatsApp Group