Tata Price: ಟಾಟಾ ಕಾರ್ ಖರೀದಿ ಮಾಡುವವರಿಗೆ ಬೇಸರದ ಸುದ್ದಿ, ಈ ಕಾರುಗಳ ಮೇಲೆ ಏರಿಕೆಗೆ ನಿರ್ಧಾರ

ಟಾಟಾ ಕಂಪನಿಯ ಕಾರ್ ಖರೀದಿಸುವ ನಿರೀಕ್ಷೆಯಲ್ಲಿರುವವರಿಗೆ ಬಿಗ್ ಶಾಕ್, ಕಾರುಗಳ ಬೆಲೆಯಲ್ಲಿ ದಿಢೀರ್ ಏರಿಕೆ

Tata Car Price Hike In February 1st:  ಭಾರತೀಯ ಆಟೋ ವಲಯದಲ್ಲಿ TATA ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಮಾರುಕಟ್ಟೆಯಲ್ಲಿ ಟಾಟಾ ಕಾರ್ ಗಳಿಗೆ ಬಾರಿ ಬೇಡಿಕೆ ಇದೆ ಎನ್ನಬಹದು. ಹೆಚ್ಚಿನ ಮೈಲೇಜ್ ನೀಡುವ ಕಾರ್ ಗಳನ್ನೂ ಟಾಟಾ ಮಾರುಕಟ್ಟೆಯಲ್ಲಿ ಬಜೆಟ್ ಬೆಲೆಯಲ್ಲಿ ಪರಿಚಯಿಸುತ್ತಿದೆ. ಪೆಟ್ರೋಲ್, CNG ಹಾಗೆಯೆ ಎಲೆಕ್ಟ್ರಿಕ್ ರೂಪಾಂತರಗಳಲ್ಲಿ ಟಾಟಾ ಮಾದರಿಯ ಕಾರ್ ಗಳನ್ನೂ ಖರೀದಿಸಬಹುದು. ಸದ್ಯ ಜನಪ್ರಿಯ ಕಾರ್ ತಯಾರಕ ಕಂಪೆನಿಯಾದ ಟಾಟಾ ಗ್ರಾಹಕರಿಗೆ ಶಾಕಿಂಗ್ ಸುದ್ದಿಯೊಂದನ್ನು ನೀಡಿದೆ.

Tata Punch Car Price
Image Credit: Tatamotors

ಟಾಟಾ ಕಾರುಗಳ ಬೆಲೆಯಲ್ಲಿ ದಿಢೀರ್ ಏರಿಕೆ
ಸದ್ಯ ಟಾಟಾ ಕಂಪನಿಯು ಗ್ರಾಹಕರಿಗೆ ಬೇಸರದ ಸುದ್ದಿಯೊಂದನ್ನು ನೀಡಿದೆ. Tata ಕಂಪನಿಯು ಎಲೆಕ್ಟ್ರಿಕ್ ವಾಹನಗಳು ಸೇರಿದಂತೆ ಎಲ್ಲಾ ಪ್ರಯಾಣಿಕ ವಾಹನಗಳ ಬೆಲೆಯನ್ನು ಹೆಚ್ಚಿಸುವುದಾಗಿ ಘೋಷಿಸಿದೆ. ಹೊಸ ದರಗಳು ಸರಾಸರಿ 0.7% ಹೆಚ್ಚಳವಾಗಿದೆ ಮತ್ತು ಫೆಬ್ರವರಿ 1 2024 ರಿಂದ ಜಾರಿಗೆ ಬರಲಿದೆ.

ಇನ್ಪುಟ್ ಸೇರಿದಂತೆ ವಿವಿಧ ವೆಚ್ಚಗಳನ್ನು ಭರಿಸಲು ಕಂಪನಿಯು ಸಣ್ಣ ಪ್ರಮಾಣದಲ್ಲಿ ಈ ದರ ಏರಿಕೆ ಮಾಡಿದೆ ಎನ್ನಲಾಗಿದೆ. ಆದರೆ ಕಂಪನಿಯ ಯಾವ ಕಾರುಗಳ ಬೆಲೆ ಏರಿಕೆಯಾಗಲಿದೆ ಎಂಬ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಮರುಕ್ತತೆಯಲ್ಲಿ ಲಭ್ಯವಿರುವ Tiago, Nexon, Harrier and Safari ಕಾರ್ ಗಾಲ ಬೆಲೆ ಹೆಚ್ಚಾಗುವ ನಿರೀಕ್ಷೆಯಿದೆ. ಆದರೆ ಇತ್ತೀಚಿಗೆ ಬಿಡುಗಡೆಗೊಂಡ Punch EV ಬೆಲೆ ಏರಿಕೆಯಾಗುವುದಿಲ್ಲ ಎನ್ನುವ ಬಗ್ಗೆ ಮಾಹಿತಿ ತಿಳಿದುಬಂದಿದೆ.

Tata Safari Price
Image Credit: Cardekho

Tata Punch
ಟಾಟಾ Punch ಗೆ 25kWh ಮತ್ತು 35kWh ಸಾಮರ್ಥ್ಯದ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಲಾಗಿದೆ. ಇನ್ನು ಪಂಚ್ EV ಸ್ಟ್ಯಾಂಡರ್ ಮಾದರಿಯು 280 ರಿಂದ 350km ಮೈಲೇಜ್ ನೀಡಿದರೆ ಹೈ ರೇಂಜ್ ಮಾದರಿಯು ಬರೋಬ್ಬರಿ 421 ಕಿಲೋಮೀಟರ್ ಮೈಲೇಜ್ ನೀಡಲಿದೆ. ಮಾರುಕಟ್ಟೆಯಲ್ಲಿ Tata Punch ಎಲೆಕ್ಟ್ರಿಕ್ ಮಾದರಿ ಸರಿಸುಮಾರು 10.99 ರಿಂದ 15.49 ಲಕ್ಷ ಬೆಲೆಯಲ್ಲಿ ಪರಿಚಯವಾಗಿದೆ.

Tata Safari
ಮಾರುಕಟ್ಟೆಯಲ್ಲಿ ವಿಭಿನ್ನ ಬಣ್ಣಗಳ ಆಯ್ಕೆಯಲ್ಲಿ ಹತ್ತು ರೂಪಾಂತರದಲ್ಲಿ ನೀವು ಟಾಟಾ ಸಫಾರಿ ಮಾದರಿಯನ್ನು ಖರೀದಿಸಬಹುದು. ಸ್ಮಾರ್ಟ್ (ಒ), ಪ್ಯೂರ್ (ಒ), ಅಡ್ವೆಂಚರ್, ಅಡ್ವೆಂಚರ್ ಪ್ಲಸ್, ಅಡ್ವೆಂಚರ್ ಪ್ಲಸ್ ಡಾರ್ಕ್, ಅಕಾಂಪ್ಲಿಶ್ಡ್, ಅಕಾಂಪ್ಲಿಶ್ಡ್ ಡಾರ್ಕ್ ರೂಪಾಂತರಗಳು ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ.

Join Nadunudi News WhatsApp Group

2-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದು, 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ ಮತ್ತು 16.30 kmpl ಮೈಲೇಜ್ ನೀಡುತ್ತದೆ. ಹಲವಾರು ಆಯ್ಕೆಯಲ್ಲಿ ಲಭ್ಯವಿರುವ ಟಾಟಾ ಸಫಾರಿ ಮಾರುಕಟ್ಟೆಯಲ್ಲಿ 16 ಲಕ್ಷದಿಂದ 27 ಲಕ್ಷ ಬೆಲೆಯಲ್ಲಿ ಲಭ್ಯವಾಗಲಿದೆ.

Tata Harrier Price In India
Image Credit: Theauto

Tata Harrier
ಇನ್ನು ಟಾಟಾ ಹ್ಯಾರಿಯರ್ 2 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಹೊಂದಿದೆ. ಇದು 167 BHP ಶಕ್ತಿಯನ್ನು ಉತ್ಪಾದಿಸುತ್ತದೆ. ಹ್ಯಾರಿಯರ್ ಪ್ರತಿ ಲೀಟರ್‌ಗೆ 14 ರಿಂದ 16 ಕಿಲೋಮೀಟರ್ ಮೈಲೇಜ್ ಪಡೆಯುತ್ತದೆ. ಇನ್ನು ಮಾರುಕಟ್ಟೆಯಲ್ಲಿ  Tata Harrier ಮಾದರಿಯು ಸರಿಸುಮಾರು 15 ರಿಂದ 26 ಲಕ್ಷ ಬೆಲೆಯಲ್ಲಿ ಲಭ್ಯವಾಗಲಿದೆ.

Join Nadunudi News WhatsApp Group