Commercial Vehicle: 2024 ರಲ್ಲಿ ವ್ಯವಹಾರಕ್ಕೆ ಬಳಸುವ ಈ ವಾಣಿಜ್ಯ ವಾಹನಗಳ ಬೆಲೆ ಇಷ್ಟು ಹೆಚ್ಚಳ, ಬೇಸರದಲ್ಲಿ ಗ್ರಾಹಕರು

ಹೊಸ ವರ್ಷದಿಂದ ಈ ವಾಣಿಜ್ಯ ವಾಹನಗಳ ಬೆಲೆ ಏರಿಕೆಯಾಗಲಿದೆ

Tata Commercial Vehicle Price Hike: ಸದ್ಯ ದೇಶದಲ್ಲಿ ವಾಹನಗಳಿಗೆ ಸಂಬಂಧಿಸಿದಂತೆ ಸಾಕಷ್ಟು ನಿಯಮಗಳು ಬದಲಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿಹೊಸ ವರ್ಷ ಆರಂಭವಾಗಲಿದ್ದು ಹೊಸ ವರ್ಷಕ್ಕೆ ಅನೇಕ ನಿಯಮಗಳು ಕೂಡ ಬದಲಾಗಲಿವೆ.

ಅದರಲ್ಲೂ ವಿವಿಧ ವಾಹನ ತಯಾರಕ ಕಂಪನಿಗಳು ತನ್ನ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸಲು ನಿರ್ಧರಿಸಿದೆ. ದೇಶದ ಜನಪ್ರಿಯ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿರುವ TATA ಇದೀಗ ತನ್ನ ವಾಣಿಜ್ಯ ವಾಹನಗಳ (Commercial Vehicle) ಬೆಲೆಯನ್ನು ಹೆಚ್ಚಿಸಲು ನಿರ್ಧರಿಸಿದೆ.

Tata Motors Announces Price Hike Of Its Commercial Vehicle
Image Credit: Drive Spark

2024 ಕ್ಕೆ ವ್ಯವಹಾರ ಮಾಡಲು ಬಳಸುವ ಈ ವಾಣಿಜ್ಯ ವಾಹನಗಳ ಬೆಲೆ ಇಷ್ಟು ಹೆಚ್ಚಳ
ಸಾಮಾನ್ಯವಾಗಿ ವ್ಯವಹಾರ ಮಾಡುವವರು ವಾಣಿಜ್ಯ ವಾಹನಗಳನ್ನು ಬಳಸುತ್ತಾರೆ. ಮಾರುಕಟ್ಟೆಯಲ್ಲಿ ವಾಣಿಜ್ಯ ವಾಹನಗಳಿಗೂ ಬೇಡಿಕೆ ಇದೆ. ಸದ್ಯ ಟಾಟಾ ಕಂಪನಿ ತನ್ನ ವಾಣಿಜ್ಯ ವಾಹನಗಳ ಬೆಲೆಯನ್ನು ಹೆಚ್ಚಿಸಿದ್ದು ವ್ಯವಹಾರ ಮಾಡುವವರಿಗೆ ಬೇಸರದ ಸುದ್ದಿ ನೀಡಿದೆ. ಹೊಸ ವರ್ಷದಿಂದ ವಾಣಿಜ್ಯ ವಾಹನಗಳ ಬೆಲೆ ಹೆಚ್ಚಾಗಲಿದೆ.

ಜನವರಿ 1 ರಿಂದ ವಾಣಿಜ್ಯ ವಾಹನಗಳಿಗೆ ಹೊಸ ದರ ಜಾರಿ
ಜನವರಿ 1 2024 ರಿಂದ ವಾಣಿಜ್ಯ ವಾಹನಗಳ ಬೆಲೆ ಶೇ. 3 ರಷ್ಟು ಹೆಚ್ಚಾಗಲಿದೆ. ಟಾಟಾ ಮೋಟಾರ್ಸ್ ಟಿಯಾಗೊ ಹ್ಯಾಚ್‌ ಬ್ಯಾಕ್ ಮತ್ತು ಪ್ರೀಮಿಯಂ ಎಸ್‌ ಯುವಿ ಸಫಾರಿ ಸೇರಿದಂತೆ ರೂ.5.6 ಲಕ್ಷದಿಂದ ರೂ. 25.94 ಲಕ್ಷದವರೆಗಿನ ಪ್ರಯಾಣಿಕ ವಾಹನಗಳ ವಾಹನಗಳನ್ನು ನೀಡುತ್ತದೆ. ಕಂಪನಿಯು ಈ ಹಿಂದೆ ನಿಖರವಾದ ಶೇಕಡಾವಾರು ಪ್ರಮಾಣವನ್ನು ನಿರ್ದಿಷ್ಟಪಡಿಸದೆ ಬೆಲೆ ಏರಿಕೆಯನ್ನು ಜಾರಿಗೆ ತರುವ ಉದ್ದೇಶವನ್ನು ಸೂಚಿಸಿತ್ತು.

Tata Commercial Vehicle Price Hike
Image Credit: Drive Spark

ಸದ್ಯ 2024 ರ ಜನವರಿಯಲ್ಲಿ ಕಂಪನಿಯು ಬೆಲೆಯ ಹೆಚ್ಚಳದ ಬಗ್ಗೆ ಘೋಷಿಸಲಿದೆ. ಇನ್ಪುಟ್ ಮತ್ತು ಕಾರ್ಯಾಚರಣೆಯ ವೆಚ್ಚಗಳು ಹೆಚ್ಚಿರುವ ಕಾರಣ ಕಂಪನಿ ಬೆಲೆ ಏರಿಕೆಯನ್ನು ನಿರ್ಧರಿಸಿದೆ. ಟಾಟಾದ ಜೊತೆಗೆ ಇನ್ನಿತರ ವಾಹನ ತಯಾರಕ ಕಂಪನಿಗಳು ಕೂಡ ತನ್ನ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸುವ ಬಗ್ಗೆ ಯೋಜನೆ ಹೂಡಿದೆ. ಹೊಸ ವರ್ಷದಿಂದ ವಾಹನಗಳ ಬೆಲೆ ದುಬಾರಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಹೀಗಾಗಿ ಹೊಸ ವಾಹನವನ್ನು ಖರೀದಿಸುವವರು ಈ ವರ್ಷಾಂತ್ಯದಲ್ಲಿ ಖರೀದಿಸುವುದು ಉತ್ತಮ.

Join Nadunudi News WhatsApp Group

Join Nadunudi News WhatsApp Group