Tata New Car: ಬಡವರಿಗಾಗಿ ಅಗ್ಗದ 5 ಸ್ಟಾರ್ ಕಾರ್ ಲಾಂಚ್ ಮಾಡಿದ ಟಾಟಾ, ಭರ್ಜರಿ 500 Km ಮೈಲೇಜ್

500 Km ಮೈಲೇಜ್ ಕೊಡುವ ಈ ಟಾಟಾ ಕಾರ್ ಬಡವರ ಕಾರ್ ಆಗಿದೆ

Tata Curvv Feature: ಈಗಾಗಲೇ ಮಾರುಕಟ್ಟೆಯಲ್ಲಿ TATA ಕಂಪನಿ ವಿವಿಧ ಮಾದರಿಯ ಕಾರ್ ಗಳನ್ನೂ ಪರಿಚಯಿಸುವ ಮೂಲಕ ತನ್ನ ಸ್ಥಾನವನ್ನು ಪಡೆದುಕೊಂಡಿದೆ. ವಿವಿಧ ಮಾದರಿಯ ಪೆಟ್ರೋಲ್, CNG, Electric ನ ಹಲವಾರು ಮಾದರಿಗಳನ್ನು ಟಾಟಾ ಕಂಪನಿ ಬಿಡುಗಡೆ ಮಾಡಿದೆ. ಇನ್ನು ಮಾರುಕಟ್ಟೆಯಲ್ಲಿ ಟಾಟಾ ಕಂಪನಿಯ Curvv Car ಬಗ್ಗೆ ಎಲ್ಲರಿಗೂ ತಿಳಿದೇ ಇದೆ.

ಸದ್ಯ ಮಾರುಕಟ್ಟೆಯಲ್ಲಿ Curvv ಮಾದರಿಯು ಹೆಚ್ಚಿನ ಬೇಡಿಕೆಯನ್ನು ಪಡೆದುಕೊಳ್ಳುತ್ತಿದೆ. ಅತ್ಯಾಕರ್ಷಕ ಡಿಸೈನ್ ಹೊಂದಿರುವ ಕರ್ವ್ ಮಾದರಿಯು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಇದೀಗ ನಾವು ಈ ಲೇಖನದಲ್ಲಿ ಕರ್ವ್ ಮಾದರಿಯ ವೈಶಿಷ್ಟ್ಯಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.

Tata Curvv Feature
Image Credit: Cardekho

ಮಧ್ಯಮ ವರ್ಗದವರಿಗಾಗಿ ಬೆಸ್ಟ್ ಕಾರ್
ನೂತನ ಟಾಟಾ Curvv ಎಸ್‌ಯುವಿಯ ಸೆಡ್ ವಿನ್ಯಾಸವು ಫ್ಲಶ್ ಫಿಟ್ಟಿಂಗ್ ಡೋರ್ ಹ್ಯಾಂಡಲ್‌ ಗಳೊಂದಿಗೆ ಅತ್ಯುತ್ತಮವಾಗಿದೆ. ಹಿಂದಿನ ವಿನ್ಯಾಸವು ಹೆಚ್ಚು ಅತ್ಯಾಧುನಿಕವಾಗಿದೆ. ಹೊಸ ಟಾಟಾ ಕರ್ವ್ ಕೂಪ್ ಎಸ್‌ಯುವಿ ಒಳಾಂಗಣವು ಅತ್ಯುತ್ತಮ ವಿನ್ಯಾಸವನ್ನು ಪಡೆದುಕೊಂಡಿದೆ. ಇದು ಹ್ಯಾರಿಯರ್, ಸಫಾರಿ ಮತ್ತು ನೆಕ್ಸಾನ್‌ ನಂತಹ ಎಸ್‌ಯುವಿಗಳಂತೆಯೇ ಅತ್ಯಾಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಟಾಟಾ ಲೋಗೋದೊಂದಿಗೆ 4-ಸ್ಪೋಕ್ ಸ್ಟೀರಿಂಗ್ ವೀಲ್, 12.3-ಇಂಚಿನ ಇನ್ಫೋಟೈನ್‌ ಮೆಂಟ್ ಸಿಸ್ಟಮ್, 10.25-ಇಂಚಿನ ಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ ಗಳು ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿರುವ ಸಾಧ್ಯತೆಯಿದೆ.

Tata Curvv Price
Image Credit: Cardekho

ಭರ್ಜರಿ ಮೈಲೇಜ್ ನೀಡಲಿದೆ ಈ ಟಾಟಾ ಕಾರ್
ಈ ಕಾರು ಪೆಟ್ರೋಲ್ ಮತ್ತು ಎಲೆಕ್ಟ್ರಿಕ್ ಪವರ್‌ ಟ್ರೇನ್ ಆಯ್ಕೆಗಳಲ್ಲಿ ಬಿಡುಗಡೆಯಾಗಲಿದೆ. ಟಾಟಾ ಕರ್ವ್ SUV ಹೊಸ 1.2-ಲೀಟರ್, ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಪಡೆಯುತ್ತದೆ. ಈ ಎಂಜಿನ್ ಸುಮಾರು 125bhp ಮತ್ತು 225Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಮತ್ತು 6-ಸ್ಪೀಡ್ ಡಿಸಿಟಿ ಯುನಿಟ್‌ಗೆ ಜೋಡಿಸುವ ಸಾಧ್ಯತೆಯಿದೆ. ಹಾಗೆಯೆ 1.5-ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆ ಇರುತ್ತದೆ, ಇದು 115 PS ಪವರ್ ಮತ್ತು 260 Nm ಪೀಕ್ ಟಾರ್ಕ್ ಅನ್ನು ಹೊರಹಾಕುತ್ತದೆ.

ಎಲೆಕ್ಟ್ರಿಕ್ ರೂಪಾಂತರದಲ್ಲಿ ಬರುತ್ತಿರುವ ಟಾಟಾ ಕರ್ವ್ ಕೂಪ್ ಎಸ್‌ಯುವಿ ಪವರ್ ಬ್ಯಾಟರಿ ಪ್ಯಾಕ್ ಅನ್ನು ಪಡೆಯಲಿದ್ದು, ಪೂರ್ಣ ಚಾರ್ಜ್‌ ನಲ್ಲಿ 500 ಕಿಲೋಮೀಟರ್ ಮೈಲೇಜ್ ಕೂಡ ನೀಡಲಿದೆ. ಈ ಹೊಸ ಟಾಟಾ ಕರ್ವ್ ಎಸ್‌ಯುವಿ 6 ಏರ್‌ ಬ್ಯಾಗ್‌ ಗಳು, ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), 360 – ಡಿಗ್ರಿ ಪಾರ್ಕಿಂಗ್ ಕ್ಯಾಮೆರಾ, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸಂವೇದಕಗಳು, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಸೇರಿದಂತೆ ಹಲವು ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರಲಿದೆ.

Join Nadunudi News WhatsApp Group

Tata Curvv Mileage
Image Credit: Cardekho

Join Nadunudi News WhatsApp Group