Tata Electric Scooter: ಇನ್ಮುಂದೆ ನಡೆಯಲ್ಲ ಓಲಾ, ಅಥೇರ್ ಮತ್ತು TVS ಆಟ, ಬಂತು ಅಗ್ಗದ ಟಾಟಾ ಎಲೆಕ್ಟ್ರಿಕ್ ಸ್ಕೂಟರ್.

ಬಂತು ಅಗ್ಗದ ಟಾಟಾ ಎಲೆಕ್ಟ್ರಿಕ್ ಸ್ಕೂಟರ್, ಭರ್ಜರಿ ಮೈಲೇಜ್

Tata Electric Scooter Price And Feature: ಭಾರತೀಯ ಮಾರುಕಟ್ಟೆಯಲ್ಲಿ ಕಾರ್ ಗಳ ವಿಭಾಗದಲ್ಲಿ TATA ಕಂಪನಿಯು ಹೆಚ್ಚು ಜನಪ್ರಿಯತೆ ಪಡೆದಿದೆ. ಟಾಟಾ ಕಾರ್ ಎಂದರೆ ಹೆಚ್ಚು ಸೇಫ್ಟಿ ನೀಡುವ ಕಾರ್ ಆಗಿ ಗುರುತಿಸಿಕೊಂಡಿದೆ. ಸದ್ಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲೂ ಸಂಚಲನ ಮೂಡಿಸಲು ಇದೀಗ ಟಾಟಾ ಸಜ್ಜಾಗಿದೆ.

ಹೌದು, ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚಿಗೆ ಹೆಚ್ಚು ಬೇಡಿಕೆ ಪಡೆಯುತ್ತಿರುವ Electric Scooter ಅನ್ನು ಬಿಡುಗಡೆ ಮಾಡಲು ಟಾಟಾ ನಿರ್ಧರಿಸಿದೆ. ಟಾಟಾ ನೂತನ ಎಲೆಕ್ಟ್ರಿಕ್ ಸ್ಕೂಟರ್ ನ ಬಗ್ಗೆ ಮಾಹಿತಿ ಇಲ್ಲಿದೆ.

Tata Electric Scooter Price And Features
Image Credit: Tazatimesnews

ಇನ್ಮುಂದೆ ನಡೆಯಲ್ಲ ಓಲಾ, ಅಥೇರ್ ಮತ್ತು TVS ಆಟ
ಜನಪ್ರಿಯ ಕಂಪನಿಯಾಗಿರುವ ಟಾಟಾ ತನ್ನ ಅತಿ ಕಡಿಮೆಯ ಹೆಚ್ಚು ಮೈಲೇಜ್ ನೀಡುವ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ. ಈ ನೂತನ ಎಲೆಕ್ಟ್ರಿಕ್ ಸ್ಕೂಟರ್ ಮೈಲೇಜ್ ವಿಚಾರದಲ್ಲಿ ಎಲ್ಲರ ಗಮನ ಸೆಳೆಯಲಿದೆ. ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಒಂದು ಬಾರಿ ಚಾರ್ಜ್ ಮಾಡಿದರೆ 270 ಕಿ.ಮೀ ವರೆಗೆ ಮೈಲೇಜ್ ನೀಡಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಟಾಟಾದಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಈ ಎಲೆಕ್ಟ್ರಿಕ್ ಸ್ಕೂಟರ್ ಡಿಜಿಟಲ್ ಡಿಸ್ಪ್ಲೇ, ಡಿಸ್ಕ್ ಬ್ರೇಕ್, ಯುಎಸ್‌ಬಿ ಚಾರ್ಜಿಂಗ್, ಸೆಕ್ಯುರಿಟಿ ಅಲಾರ್ಮ್ ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿರಲಿದ್ದು, ಗಂಟೆಗೆ 90 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರೊಂದಿಗೆ ಇದು ಓಲಾ, ಅಥೇರ್ ಮತ್ತು TVS ಎಲೆಕ್ಟ್ರಿಕ್ ಸ್ಕೂಟರ್‌ ಗಳಿಗೆ ಪ್ರತಿಸ್ಪರ್ಧಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಇನ್ನು ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಚಾರ್ಜ್ ಮಾಡಲು ಕೇವಲ 2 ಗಂಟೆ ಸಾಕಾಗುತ್ತದೆ. ವೇಗದ ಚಾರ್ಗಿಂಗ್ ಅನ್ನು ನೀವು ನೋಡಬಹುದು.

Tata Electric Scooter Price In India
Image Credit: Original Source

ಬಂತು ಅಗ್ಗದ ಟಾಟಾ ಎಲೆಕ್ಟ್ರಿಕ್ ಸ್ಕೂಟರ್
ಟಾಟಾ ಕಂಪನಿಯ ಈ ಎಲೆಕ್ಟ್ರಿಕ್ ಸ್ಕೂಟರ್ ಈ ವರ್ಷದ ಅಂತ್ಯದ ವೇಳೆಗೆ ಮಾರುಕಟ್ಟೆಗೆ ಬರಲಿದೆ. ಮೊದಲ ಹಂತದಲ್ಲಿ ಭಾರತದ ಕೆಲವು ನಗರ ಪ್ರದೇಶಗಳಲ್ಲಿ ಮಾತ್ರ ಬಿಡುಗಡೆಯಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಮೂಲಗಳ ಪ್ರಕಾರ ಇದರ ಎಕ್ಸ್ ಶೋ ರೂಂ ಬೆಲೆ ರೂ. 67,000 ನಿಗದಿಯಾಗಿದೆ. ಆದರೆ ಈ ಸ್ಕೂಟರ್ ಖರೀದಿಸಲು ಬಯಸುವವರು ಬೆಲೆಯ ಬಗ್ಗೆ ಚಿಂತಿಸುವ ಅಗತ್ಯ ಇಲ್ಲ. ಏಕೆಂದರೆ ಕಂಪನಿಯು ಈ ಸ್ಕೂಟರ್ ಖರೀದಿಗೆ ಆಕರ್ಷಕ ಹಣಕಾಸು ಯೋಜನೆಯನ್ನು ಪರಿಚಯಿಸಿದೆ. ನೀವು ಕೇವಲ ರೂ.2,200 ಮಾಸಿಕ EMI ಕಂತುಗಳ ರೂಪದಲ್ಲಿ ಸಾಲವನ್ನು ನೀಡುತ್ತಾ ಈ ಸ್ಕೂಟರ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು.

Join Nadunudi News WhatsApp Group

Tata Electric Scooter
Image Credit: Zecat

Join Nadunudi News WhatsApp Group