Tata 2024: ಹೊಸ ವರ್ಷಕ್ಕೆ ಮಾರುಕಟ್ಟೆಗೆ ಬರಲಿದೆ ಈ 4 ಹೊಸ ಟಾಟಾ ಕಾರುಗಳು, ಕಡಿಮೆ ಬೆಲೆ ಮತ್ತು ಆಕರ್ಷಕ ಮೈಲೇಜ್

ಹೊಸ್ಸ ವರ್ಷಕ್ಕೆ 4 ಕಾರುಗಳನ್ನ ಮಾರುಕಟ್ಟೆಗೆ ಲಾಂಚ್ ಮಾಡಲು ಮುಂದಾದ ಟಾಟಾ

Tata Motors 2024 New Cars: ಟಾಟಾ ಮೋಟಾರ್ಸ್ (Tata Motors) ಪ್ರತಿಯೊಂದು ಕಾರು ಕಂಪನಿಗಳಿಗೂ ಪೈಪೋರ್ಟಿ ನೀಡುವ ಕುರಿತು ಒಂದು ಹೊಸ ಯೋಜನೆಯನ್ನು ಮಾಡಿಕೊಂಡಿದೆ. ಇನ್ನು ಕೆಲವೇ ದಿನಗಳಲ್ಲಿ ಹೊಸ ವರ್ಷ ಆರಂಭ ಆಗಲಿದ್ದು, ಕಾರು ಖರೀದಿ ಮಾಡುವವರಿಗೆ ಟಾಟಾ ಬಂಪರ್ ಕಾರುಗಳನ್ನು ರಸ್ತೆಗಿಳಿಸುವ ಯೋಜನೆಯಲ್ಲಿದೆ.

ಹೊಸ ಹೊಸ ಕಾರುಗಳು ಗ್ರಾಹಕರನ್ನು ಆಕರ್ಷಿಸಲಿದ್ದು, 2024 ರ ಅಂತ್ಯಕ್ಕೆ ಒಟ್ಟು ನಾಲ್ಕು ಹೊಸ ಕಾರುಗಳ ಬಿಡುಗಡೆಗೆ ಸಿದ್ದವಾಗುತ್ತಿದೆ. ಟಾಟಾ ಕಂಪನಿಯ ಹೊಸ ಕಾರುಗಳು ಬಹುಬೇಡಿಕೆ ಪಡೆಯಲಿದ್ದು, ಈ ಕಾರುಗಳ ಲುಕ್ ಗೆ ಗ್ರಾಹಕರು ಫಿದಾ ಆಗದೆ ಇರಲು ಸಾಧ್ಯವೇ ಇಲ್ಲಾ. ಹೊಸ ಇವಿ ಕಾರುಗಳು ವಿವಿಧ ಸೆಗ್ಮೆಂಟ್ ಗಳಲ್ಲಿ ಬಿಡುಗಡೆಯಾಗಲಿದ್ದು, ಈ ಎಲ್ಲಾ ಕಾರುಗಳ ಬಗ್ಗೆ ತಿಳಿಯೋಣ.

Tata Curvv SUV Car Feature
Image Credit: Autocarindia

Tata Curvv SUV Car Feature

ಕರ್ವ್ ಎಸ್ ಯುವಿ ಟಾಟಾದವರ ಉತ್ತಮ ಕಾರಾಗಿದ್ದು, ಈ ಕಾರು ತಂತ್ರಜ್ಞಾನ ಮತ್ತು ಫೀಚರ್ಸ್ ವಿಚಾರದಲ್ಲಿ ಗಮನಸೆಳೆಯಲಿದೆ. ಹೊಸ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿನ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೊಸ್, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ, ಸ್ಕೋಡಾ ಕುಶಾಕ್, ಫೋಕ್ಸ್ ವ್ಯಾಗನ್ ಟೈಗನ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡಲಿದ್ದು, ಇದರಲ್ಲಿ ಹೊಸ 1.5 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ಪರಿಚಯಿಸಬಹುದಾಗಿದೆ.

ಇದು ಸಾಮಾನ್ಯ ಆವೃತ್ತಿಯೊಂದಿಗೆ 115 ಹಾರ್ಸ್ ಪವರ್ ಮತ್ತು ಟರ್ಬೊ ಆವೃತ್ತಿಯೊಂದಿಗೆ 140 ಹಾರ್ಸ್ ಪವರ್ ಉತ್ಪಾದನೆ ಮೂಲಕ ಇಂಧನ ದಕ್ಷತೆಯಲ್ಲೂ ಗಮನಸೆಳೆಯಲಿದೆ ಕರ್ವ್ ಕಾನ್ಸಪ್ಟ್ ಕಾರು ಮಾದರಿಯಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಪೆಟ್ರೋಲ್ ಎಂಜಿನ್ ಜೊತೆಗೆ CNG ಆಯ್ಕೆಯನ್ನು ಸಹ ನೀಡಬಹುದಾಗಿದ್ದು, ತದನಂತರವಷ್ಟೇ ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಬಿಡುಗಡೆಯಾಗಬಹುದಾಗಿದೆ.

Join Nadunudi News WhatsApp Group

Tata Harrier Electric Car Feature
Image Credit: Carwale

Tata Harrier Electric Car Feature

ಐಷಾರಾಮಿ ಫೀಚರ್ಸ್ ಹೊಂದಿರುವ ಹ್ಯಾರಿಯರ್ ಇವಿ ಕಾರು ಸುಧಾರಿತ ಬ್ಯಾಟರಿ ಪ್ಯಾಕ್ ಪಡೆದುಕೊಂಡಿದೆ. ಹೊಸ ಕಾರಿನಲ್ಲಿ 60 ಕೆವಿಹೆಚ್ ಬ್ಯಾಟರ್ ಪ್ಯಾಕ್ ಜೋಡಣೆ ಮಾಡಬಹುದಾಗಿದ್ದು, ಇದು ಪ್ರತಿ ಚಾರ್ಜ್ ಗೆ 450ರಿಂದ 500 ಕಿ.ಮೀ ಮೈಲೇಜ್ ನೊಂದಿಗೆ ADAS ಫೀಚರ್ಸ್ ಹೊಂದಿರಲಿದೆ.

ಈ ಮೂಲಕ ಇದು ಮಧ್ಯಮ ಕ್ರಮಾಂಕದ ಬಲಿಷ್ಠ ಎಲೆಕ್ಟ್ರಿಕ್ ಎಸ್ ಯುವಿ ಮಾದರಿಯಾಗಿ ಗುರುತಿಸಿಕೊಳ್ಳಲಿದೆ, ಟಾಟಾ ಮೋಟಾರ್ಸ್ ಕಂಪನಿಯು 2024 ರ ವರ್ಷಾಂತ್ಯದಲ್ಲಿ ಹ್ಯಾರಿಯರ್ ಇವಿ ಪರಿಚಯಿಸಬಹುದಾಗಿದ್ದು, ಇದು ಎಲೆಕ್ಟ್ರಿಕ್ ವಾಹನಗಳ ಎರಡನೇ ತಲೆಮಾರಿನ ತಂತ್ರಜ್ಞಾನದೊಂದಿಗೆ ಅಭಿವೃದ್ದಿಗೊಳ್ಳುತ್ತಿದೆ. ಈ ಕಾರಿನ ಎಕ್ಸ್ ಶೋರೂಂ ಬೆಲೆ ರೂ. 25 ಲಕ್ಷದಿಂದ ರೂ. 30 ಲಕ್ಷ ಹೊಂದಿರಬಹುದಾಗಿದೆ.

Tata Altroz Facelift Car Features
Image Credit: Hindustantimes

Tata Altroz Facelift Car Features

ಟಾಟಾ ಮೋಟಾರ್ಸ್ ಕಂಪನಿಯು ಶೀಘ್ರದಲ್ಲಿಯೇ ನವೀಕೃತ ವಿನ್ಯಾಸ ಮತ್ತು ಹೆಚ್ಚಿನ ಮಟ್ಟದ ತಾಂತ್ರಿಕ ಅಂಶಗಳೊಂದಿಗೆ ಆಲ್ಟ್ರೊಜ್ ಫೇಸ್ ಲಿಫ್ಟ್ ಬಿಡುಗಡೆ ಮಾಡುವ ಯೋಜನೆಯಲ್ಲಿದೆ. ಹೊಸ ಕಾರಿನಲ್ಲಿ ಈ ಬಾರಿ ಸ್ಟ್ಯಾಂಡರ್ಡ್ ಆವೃತ್ತಿಯ ಜೊತೆಗೆ ರೇಸರ್ ಎಡಿಷನ್ ಸಹ ಬಿಡುಗಡೆಯಾಗಲಿದ್ದು, ಇದು ಟರ್ಬೊ ಪೆಟ್ರೋಲ್ ಎಂಜಿನ್ ನೊಂದಿಗೆ ಪರ್ಫಾಮೆನ್ಸ್ ಪ್ರಿಯರನ್ನು ಸೆಳೆಯಲಿದೆ.

ಹೊಸ ಫೇಸ್ ಲಿಫ್ಟ್ ಮಾದರಿಯಲ್ಲಿ ಈ ಬಾರಿ 10.25 ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ, 7 ಇಂಚಿನ ಡಿಜಿಟಲ್ ಇನ್ ಸ್ಟ್ರಮೆಂಟ್ ಕ್ಲಸ್ಟರ್, ಫ್ರಂಟ್ ವೆಂಟಿಲೆಷನ್ ಸೀಟುಗಳು, ವೈರ್ ಲೆಸ್ ಚಾರ್ಜಿಂಗ್, ಏರ್ ಪ್ಯೂರಿಫೈರ್ ಸೇರಿದಂತೆ ಸ್ಟ್ಯಾಂಡರ್ಡ್ ಆಗಿ 6 ಏರ್ ಬ್ಯಾಗ್ ಗಳನ್ನು ಪಡೆದುಕೊಳ್ಳಬಹುದಾಗಿದೆ. ಈ ಹೊಸ ಕಾರು ಎಕ್ಸ್ ಶೋರೂಂ ಬೆಲೆ ರೂ. 7 ಲಕ್ಷದಿಂದ ರೂ. 11 ಲಕ್ಷ ಅಂತರದಲ್ಲಿ ಬಿಡುಗಡೆಯಾಗಲಿದೆ.

Tata Punch Electric Car Feature
Image Credit: Zeenews

ಟಾಟಾ ಪಂಚ್ ಎಲೆಕ್ಟ್ರಿಕ್ ಕಾರಿನ ವಿಶೇಶತೆಗಳು

ಟಾಟಾ ಪಂಚ್ ಇವಿ ಕಾರು ಹೊಸ ವರ್ಷದ ಆರಂಭದಲ್ಲಿ ಬಿಡುಗಡೆಯಾಗುವ ನೀರಿಕ್ಷೆಗಳಿದ್ದು, ಈ ಕಾರು ಸಣ್ಣ ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಹೊಸ ಸಂಚಲನ ಮೂಡಿಸಲಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಟಿಯಾಗೋ ಇವಿ ಆವೃತ್ತಿಯಲ್ಲಿರುವಂತೆ ತಂತ್ರಜ್ಞಾನ ಮತ್ತು ಫೀಚರ್ಸ್ ಹೊಂದಿರಲಿರುವ ಪಂಚ್ ಇವಿ ಕಾರು ವಿವಿಧ ಸಾಮರ್ಥ್ಯದ ಎರಡು ಬ್ಯಾಟರಿ ಪ್ಯಾಕ್ ಆಯ್ಕೆ ಹೊಂದಿರಬಹುದಾಗಿದ್ದು, ಇದು ಪ್ರತಿ ಚಾರ್ಜ್ ಗೆ 280 ರಿಂದ 320 ಕಿಲೋ ಮೀಟರ್ ಮೈಲೇಜ್ ನೀಡಬಹುದಾಗಿದೆ. ಈ ಕಾರು ಎಕ್ಸ್ ಶೋರೂಂ ಬೆಲೆ ರೂಪಾಯಿ 12 ಲಕ್ಷದಿಂದ ರೂ. 14 ಲಕ್ಷ ಅಂತರದಲ್ಲಿ ಮಾರಾಟಗೊಳ್ಳಬಹುದಾಗಿದೆ.

Join Nadunudi News WhatsApp Group