Tata 2024: ಟಾಟಾ ಕಾರ್ ಖರೀದಿ ಮಾಡುವವರಿಗೆ ಬಂಪರ್ ಆಫರ್, ಈ ಕಾರಿನ ಮೇಲೆ ಭರ್ಜರಿ 2.8 ಲಕ್ಷ ರೂ ಡಿಸ್ಕೌಂಟ್

ಟಾಟಾ ನೆಕ್ಸನ್ EV ಮಾದರಿಯಲ್ಲಿ ಬರೋಬ್ಬರಿ 2.80 ಲಕ್ಷ ಡಿಸ್ಕೌಂಟ್

Tata Nexon EV Offer 2024: ಭಾರತೀಯ ಆಟೋ ವಲಯದಲ್ಲಿ TATA ಕಂಪನಿಯ Nexon EV ಮಾದರಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಎಲೆಕ್ಟ್ರಿಕ್ ವಾಹನಗಳ ವಿಭಾಗದಲ್ಲಿ ಈ Nexon ಮಾದರಿಯು ಅತಿ ಹೆಚ್ಚು ಮಾರಾಟವನ್ನು ಕಾಣುತ್ತಿದೆ.

ಸದ್ಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಅಬ್ಬರ ಹೆಚ್ಚಾಗಿರುವ ಕಾರಣ ಈ EV ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ ಎನ್ನಬಹುದು. ಸದ್ಯ ಕಂಪನಿಯು ಇದೀಗ ಈ ನೂತನ ಮಾದರಿಯ ಮೇಲೆ ಆಕರ್ಷಕ ರಿಯಾಯಿತಿಯನ್ನು ನೀಡುತ್ತಿದೆ. ನಿವು ಟಾಟಾ ನೆಕ್ಸನ್ EV ಖರೀದಿಸುವಾಗ 2 .80 ಲಕ್ಷಕ್ಕೂ ಹೆಚ್ಚು ರಿಯಾಯಿತಿಯನ್ನು ಪಡೆಯಬಹುದು.

Tata Nexon EV Offer
Image Credit Carwale

ಟಾಟಾ ನೆಕ್ಸನ್ EV ಮಾದರಿಯಲ್ಲಿ ಬರೋಬ್ಬರಿ 2.80 ಲಕ್ಷ ಡಿಸ್ಕೌಂಟ್
•ನೆಕ್ಸಾನ್ EV ಫೇಸ್‌ ಲಿಫ್ಟ್‌ ನ ಫಿಯರ್‌ ಲೆಸ್ MR, ಎಂಪವರ್ಡ್ + LR ಮತ್ತು ಎಂಪವರ್ಡ್ MR ರೂಪಾಂತರಗಳು ರೂ. 50,000 ವರೆಗೆ ರಿಯಾಯಿತಿಯನ್ನು ಪಡೆದಿವೆ.

•ಫಿಯರ್‌ ಲೆಸ್ ಎಂಆರ್, ಫಿಯರ್‌ ಲೆಸ್ ಎಸ್ ಎಂಆರ್, ಫಿಯರ್‌ ಲೆಸ್ ಎಲ್‌ ಆರ್ ವೇರಿಯಂಟ್‌ ಗಳು ರೂ.65,000 ವರೆಗೆ ರಿಯಾಯಿತಿಯೊಂದಿಗೆ ಲಭ್ಯವಿದೆ.

•ಫಿಯರ್‌ ಲೆಸ್ LR ರೂಪಾಂತರವು 85,000 ರೂ. ವರೆಗಿನ ರಿಯಾಯಿತಿಯನ್ನು ಪಡೆದಿದೆ.

Join Nadunudi News WhatsApp Group

•ಟಾಪ್- ಸ್ಪೆಕ್ ಫಿಯರ್‌ ಲೆಸ್ S LR 1 ಲಕ್ಷದವರೆಗೆ ರಿಯಾಯಿತಿಗಳು ಮತ್ತು ಹೆಚ್ಚಿನ ಪ್ರಯೋಜನಗಳನ್ನು ಪಡೆಯುತ್ತವೆ.

Tata Nexon EV Price In India
Image Credit: Cartrade

ಟಾಟಾ Nexon ನ ಮೈಲೇಜ್ ಮತ್ತು ಫೀಚರ್
Tata Nexon EV ವಿಭಿನ್ನ ರೂಪಾಂತರದಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಈ ಕಾರ್ ನಲ್ಲಿ 40.5 kWh ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಿದ್ದು, Long Range ಆಯ್ಕೆಯಲ್ಲಿ ಬರೋಬ್ಬರಿ 465 ಕಿಲೋಮೀಟರ್ ರೇಂಜ್ ನೀಡಲಿದೆ. ಇನ್ನು ಈ ಕಾರ್ 142 bhp ಪವರ್ ಮತ್ತು 215 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಇನ್ನು EV ನಲ್ಲಿ Mid Range ರೂಪಾಂತರದ ಆಯ್ಕೆ ಕೂಡ ಇದ್ದು, 30 kWh ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಿದ್ದು, ಬರೋಬ್ಬರಿ 325 ಕಿಲೋಮೀಟರ್ ರೇಂಜ್ ನೀಡಲಿದೆ. Tata Nexon EV ಮಾರುಕಟ್ಟೆಯಲ್ಲಿ Flame Red, Empowered Oxide, Fearless Purple, Pristine White, Intensity Teal, Creative Ocean and Daytona Grey ಬಣ್ಣದ ಆಯ್ಕೆಯಲ್ಲಿ ಲಭ್ಯವಿದೆ.

Join Nadunudi News WhatsApp Group