Tata 2024: ಕೇವಲ 21000 ರೂಪಾಯಿಗೆ ಬುಕ್ ಮಾಡಿ ಈ ಟಾಟಾ ಎಲೆಕ್ಟ್ರಿಕ್ ಕಾರ್, ಭರ್ಜರಿ 421 Km ಮೈಲೇಜ್

ಮಾರುಕಟ್ಟೆಗೆ ಬಂತು ಟಾಟಾ ಪಂಚ್ ಎಲೆಕ್ಟ್ರಿಕ್ ಕಾರ್, ಕಡಿಮೆ ಬೆಲೆ ಮತ್ತು ಆಕರ್ಷಕ ಫೀಚರ್

Tata Punch EV Launch In India: ಮಾರುಕಟ್ಟೆಯಲ್ಲಿ 2024 ಹೊಸ ವರ್ಷದಿಂದ ಅನೇಕ ಮಾದರಿಯ ಕಾರ್ ಗಳು ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ದೇಶದ ವಿವಿಧ ಜನಪ್ರಿಯ ಕಾರ್ ತಯಾರಕ ಕಂಪನಿಗಳು ತನ್ನ ನೂತನ ಉತ್ಪನ್ನವನ್ನು 2024 ರಲ್ಲಿ ರಸ್ತೆಗಿಳಿಸಲಿವೆ.

ಸದ್ಯ TATA ಕಂಪನಿಯು 2024 ರಲ್ಲಿ ತನ್ನ PUNCH EV ಮಾದರಿಯನ್ನು ಗ್ರಾಹಕರ ಆಯ್ಕೆಗೆ ನೀಡಲಿದೆ. ಟಾಟಾ ಕಂಪನಿಯ ನೂತನ Tata Punch ಶಕ್ತಿಶಾಲಿ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಟಾಟಾ ಪಂಚ್ EV ಮಾದರಿಯನ್ನು ಬುಕ್ ಮಾಡಲು ಜನರು ಕಾತುರದಿಂದ ಕಾಯುತ್ತಿದ್ದಾರೆ. ಕೇವಲ 21,000 ರೂ. ಮುಂಗಡ ಪಾವತಿಸುವ ಮೂಲಕ Punch EV ಯನ್ನು ನಿಮ್ಮದಾಗಿಸಿಕೊಳ್ಳಬಹುದು.

Tata Punch Electric Car Feature
Image Credit: Zeenews

ಸಿಂಗಲ್ ಚಾರ್ಜ್ ನಲ್ಲಿ 421Km ಮೈಲೇಜ್
ಟಾಟಾ Punch ಗೆ 25kWh ಮತ್ತು 35kWh ಸಾಮರ್ಥ್ಯದ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಲಾಗಿದೆ. Tata Punch.ev ಲಾಂಗ್ ರೇಂಜ್ 3.3kW AC ಹೋಮ್ ವಾಲ್ ಬಾಕ್ಸ್ ಚಾರ್ಜರ್ ಮತ್ತು 15 A ಪ್ಲಗ್ ಪಾಯಿಂಟ್ ಮೂಲಕ 10-100% ಚಾರ್ಜ್ ಮಾಡಲು 13.5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ ಮತ್ತು 7.2kW AC ಹೋಮ್ ವಾಲ್ ಬಾಕ್ಸ್ ಚಾರ್ಜರ್ ಮೂಲಕ ಇದೇ ರೀತಿಯ ಚಾರ್ಜ್ ಮಾಡಲು 5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.

ಇನ್ನು ಪಂಚ್ EV ಸ್ಟ್ಯಾಂಡರ್ ಮಾದರಿಯು 280 ರಿಂದ 350km ಮೈಲೇಜ್ ನೀಡಿದರೆ ಹೈ ರೇಂಜ್ ಮಾದ್ರಿಯು ಬರೋಬ್ಬರಿ 421 ಕಿಲೋಮೀಟರ್ ಮೈಲೇಜ್ ನೀಡಲಿದೆ. ಎಲೆಕ್ಟ್ರಿಕ್ SUV ಇಕೋ, ಸಿಟಿ ಮತ್ತು ಸ್ಪೋರ್ಟ್ ನ ಮೂರು ಡ್ರೈವ್ ಮೋಡ್‌ ಗಳೊಂದಿಗೆ ಬರುತ್ತದೆ. ನೀವು ಎಂಪವರ್ಡ್ ರೆಡ್, ಸೀವೀಡ್, ಫಿಯರ್ಲೆಸ್ ರೆಡ್, ಡೇಟೋನಾ ಗ್ರೇ ಮತ್ತು ಪ್ರಿಸ್ಟಿನ್ ವೈಟ್ ಬಣ್ಣಗಳ ಆಯ್ಕೆಯಲ್ಲಿ Punch EV ಯನ್ನು ಖರೀದಿಸಬಹುದು. ಇನ್ನು ಮಾರುಕಟ್ಟೆಯಲ್ಲಿ Tata Punch ಎಲೆಕ್ಟ್ರಿಕ್ ಮಾದರಿ ಸರಿಸುಮಾರು 10.99 ರಿಂದ 14 .99 ಲಕ್ಷ ಬೆಲೆಯಲ್ಲಿ ಪರಿಚಯವಾಗಿದೆ.

Tata Punch Booking
Image Credit: Firstpost

Tata Punch EV Feature
•10.25-inch infotainment system
•10.25 inch digital instrument cluster
•360 degree camera
•leather seats
•Electronic Parking Brake
•Auto Hill Hold Assist
•Connected Car Tech
•wireless charger
•Ventilated seats in front
•cruise control
•Sunroof

Join Nadunudi News WhatsApp Group

Join Nadunudi News WhatsApp Group