Tata CNG: 7 ಲಕ್ಷಕ್ಕೆ 26 Km ಮೈಲೇಜ್ ಕೊಡುವ CNG ಕಾರ್ ಲಾಂಚ್ ಮಾಡಿದ ಟಾಟಾ, ದಾಖಲೆಯ ಬುಕಿಂಗ್

ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿರುವ ಎರಡು CNG ಮಾದರಿಯ ಕಾರ್ ಗಳ ಬಗ್ಗೆ ಸಂಪೂರ್ಣ ಮಾಹಿತಿ.

Tata Punch CNG And Tata Altroz CNG: ಸದ್ಯ ಮಾರುಕಟ್ಟೆಯಲ್ಲಿ TATA ಮೋಟರ್ಸ್ ಕಂಪನಿಯು ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಜನರು ಹೆಚ್ಚಾಗಿ ಟಾಟಾ ಕಂಪನಿಯ ಕಾರ್ ಗಳನು ಖರೀದಿಸಲು ಇಷ್ಟಪಡುತ್ತಾರೆ. ಸದ್ಯ ಮಾರುಕಟ್ಟೆಯಲ್ಲಿ ಟಾಟಾ ಕಂಪನಿಯ ಈ ಎರಡು CNG ಮಾದರಿಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಅವುಗಳೆಂದರೆ Tata Punch CNG ಮತ್ತು Tata Altroz CNG ಮಾದರಿಗಳಾಗಿವೆ.

Tata Punch CNG
Image Credit: Carwale

ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಹೊಂದಿರುವ ಎರಡು CNG ಕಾರ್ ಲಾಂಚ್
ಇನ್ನು ಕಂಪನಿಯು ಈ ಎರಡು ಮಾದರಿಯ ಕಾರ್ ಗಳಲ್ಲಿ ವಿಶೇಷವಾಗಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ನೀಡಲಾಗಿದ್ದು, ಬೈಕ್ ನಂತೆಯೇ ಹೆಚ್ಚಿನ ಮೈಲೇಜ್ ಅನ್ನು ನೀಡುತ್ತದೆ. ನೀವು ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವ ಕಾರ್ ಅನ್ನು ಖರೀದಿಸಲು ಹುಡುಕುತ್ತಿದ್ದರೆ ಟಾಟಾದ ಈ ಎರಡು ಮಾದರಿಯ ಕಾರ್ ಗಳು ಬೆಸ್ಟ್ ಎನ್ನಬಹುದು. ಇದೀಗ ನಾವು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿರುವ ಎರಡು CNG ಮಾದರಿಯ ಕಾರ್ ಗಳ ಬಗ್ಗೆ ಸಂಪೂರ್ಣ ವಿವರ ತಿಳಿಯೋಣ.

Tata Punch CNG
ಟಾಟಾ ಪಂಚ್ ನಲ್ಲಿ ಸುರಕ್ಷತೆಗಾಗಿ ಉತ್ತಮ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ. CNG ತುಂಬುವಾಗ ಕಾರನ್ನು ನಿಲ್ಲಿಸಲು ಮೈಕ್ರೋ ಸ್ವಿಚ್ ನೀಡಲಾಗಿದೆ. ಟಾಟಾ Punch SUV 1 .2 ಲೀಟರ್ ಎಂಜಿನ್ ಅನ್ನು ಹೊಂದಿದ್ದು, 6,000 rpm ನಲ್ಲಿ 72 hp ಯ ಗರಿಷ್ಠ ಶಕ್ತಿಯನ್ನು ಮತ್ತು 3,230 rpm ನಲ್ಲಿ 103 NM ನ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. CNG ರೂಪಾಂತರದಲ್ಲಿ 5 ಸ್ಪೀಡ್ AMT ಗೇರ್‌ ಬಾಕ್ಸ್ ಅನ್ನು ನೀಡಿದೆ.

Tata Altroz CNG
Image Credit: The Hindu

Tata Punch CNG ಮೈಲೇಜ್ ಬಗ್ಗೆ ಮಾತಾಡುದಾದರೆ, ಪ್ರತಿ KG CNG ಗೆ 26 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ. Tata Punch CNG ಆರಂಭಿಕ ಬೆಲೆ ಎಕ್ಸ್ ಶೋರೂಮ್ ಪ್ರಕಾರ 7.10 ಲಕ್ಷ ಆಗಿದ್ದು ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯನ್ನು ಪಡೆದುಕೊಂಡಿದೆ. ಟಾಟಾ ಪಂಚ್ CNG ಯಲ್ಲಿ ಧ್ವನಿ ಸಹಾಯದ ಎಲೆಕ್ಟ್ರಿಕ್ ಸನ್‌ ರೂಫ್, LED DRL , 16-ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್‌ಗಳು, 7-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಂ, ರೈನ್ ಸೆನ್ಸಿಂಗ್ ವೈಪರ್‌ಗಳು, ಎತ್ತರ ಹೊಂದಾಣಿಕೆ ಡ್ರೈವರ್ ಸೀಟ್ ಲಭ್ಯವಿದೆ.

Tata Altroz CNG
Tata Motor ತನ್ನ ಹೊಚ್ಚ ಹೊಸ ಟಾಟಾ Tata Altroz CNG ಅನ್ನು ದೇಶಿಯ ಮಾರುಕಟ್ಟೆಯಲ್ಲಿ ವಿಶೇಷ ದರದಲ್ಲಿ ಬಿಡುಗಡೆ ಮಾಡಿದೆ. ಟಾಟಾ ಅಲ್ಟ್ರೋಜ್ ಸಿಎನ್ ಜಿ ಕಾರಿನ ಎಕ್ಸ್ ಶೋ ರೂಮ್ಬೆಲೆ ರೂ. 7.55 ದಿಂದ 10.55 ಲಕ್ಷ ಆಗಿದೆ.ಹೊಚ್ಚ ಹೊಸ ಟಾಟಾ ಅಲ್ಟ್ರೋಜ್ ಸಿಎನ್ ಜಿ ಕಾರಿನಲ್ಲಿ 1 .2 ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ ಐಸಿಎನ್ ಜಿ ತಂತ್ರಜ್ಞಾನ ಜೋಡಣೆ ಮಾಡಲಾಗಿದೆ.

Join Nadunudi News WhatsApp Group

Tata Punch CNG And Tata Altroz CNG
Image Credit: Jagran

ಪ್ರತಿ ಕೆಜಿ ಸಿಎನ್ ಜಿ ಗೆ ಬರೋಬ್ಬರಿ 26 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಇನ್ನು ನೀವು ಆಲ್ಟ್ರಾಜ್ ಮಾದರಿಯಲ್ಲಿ 7-inch touchscreen infotainment system, Connected car tech, Semi Digital Instrument Cluster, Ambient Lighting, Cruise control Single pane sunroof, Dual front airbags, ISOFIX child-seat anchor, Auto park lock, Rare parking sensors ಸೇರಿದಂತೆ ಹೆಚ್ಚಿನ ವೈಶಿಷ್ಟ್ಯಗಳನ್ನು ನೋಡಬಹುದು.

Join Nadunudi News WhatsApp Group