Tata CNG: 30 ಕಿಲೋ ಮೀಟರ್ ಮೈಲೇಜ್ ಮತ್ತು 10 ಲಕ್ಷಕ್ಕೂ ಕಡಿಮೆ ಬೆಲೆ, ಟಾಟಾ ಈ CNG ಕಾರಿಗೆ ಭರ್ಜರಿ ಡಿಮ್ಯಾಂಡ್.

ಟಾಟಾ ಈ CNG ಕಾರ್ ನ ಬೆಲೆ ಹಾಗೂ ಮೈಲೇಜ್ ನೋಡಿ ಕಾರ್ ಖರೀದಿಸಲು ಮುಂದಾದ ಜನರು.

Tata CNG Cars: ಪ್ರತಿಷ್ಠಿತ ಕಾರ್ ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ (Tata Motors) ಹೊಸ ಹೊಸ ಮಾದರಿಯ ಕಾರ್ ಬಿಡುಗಡೆ ಮಾಡುವ ಮೂಲಕ ತನ್ನ ಮಾರಾಟವನ್ನು ಹೆಚ್ಚಿಸಿಕೊಂಡಿದೆ.

ಇನ್ನು ಮಾರುಕಟ್ಟೆಯಲ್ಲಿ ಟಾಟಾ ಕಂಪನಿಯ ಪೆಟ್ರೋಲ್, ಡಿಸೇಲ್ ಎಲೆಕ್ಟ್ರಿಕ್ ರೂಪಾಂತರದ ಕಾರ್ ಅನ್ನು ಬಿಡುಗಡೆ ಮಾಡಿದೆ. ಇದೀಗ ತನ್ನ ನೂತನ ಮಾದರಿಯ ಸಿಎನ್ ಜಿ ರೂಪಾಂತರವನ್ನು ಬಿಡುಗಡೆ ಮಾಡಲು ಕಂಪನಿಯು ಸಿದ್ಧತೆ ನಡೆಸುತ್ತಿದೆ. ಈ ಕಾರ್ ಬಿಡುಗಡೆಗೊಳ್ಳುತ್ತಿದ್ದಂತೆ ಅಧಿಕ ಬುಕ್ಕಿಂಗ್ ಕಂಡುಕೊಂಡಿದೆ.

Tata Punch CNG engine capacity
Image Credit: Hindustantimes

ಟಾಟಾ ಪಂಚ್ ಸಿಎನ್ ಜಿ
ಕಳೆದ ಜನವರಿಯಲ್ಲಿ ದೆಹಲಿಯಲ್ಲಿ ನಡೆದ ಆಟೋ ಎಕ್ಸ್ಪೋ ದಲ್ಲಿ ಕಂಪನಿಯು ಟಾಟಾ ಪಂಚ್ ಸಿಎನ್ ಜಿ ರೂಪಾಂತರವನ್ನು ಪ್ರದರ್ಶಿಸಿತ್ತು. ಪ್ರದರ್ಶನಗೊಂಡ ಬಳಿಕ ಆಯ್ದ ಡೀಲರ್ ಶಿಪ್ ಗಳು ಸಿಎನ್ ಜಿ ಚಾಲಿತ ಪಂಚ್ ಎಸ್ ಯೂವಿಗಾಗಿ ಆರ್ಡರ್ ಬುಕಿಂಗ್ ಆರಂಭಗೊಂಡಿರುವ ಬಗ್ಗೆ ವರದಿಯಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಟಾಟಾ ಪಂಚ್ ಸಿಎನ್ ಜಿ ಕಾರ್ ಮಾರುಕಟ್ಟೆಗೆ ಪರಿಚಯವಾಗಲಿದೆ.

ಟಾಟಾ ಪಂಚ್ ಸಿಎನ್ ಜಿ ಎಂಜಿನ್ ವಿಶೇಷತೆ
ಟಾಟಾ ಪಂಚ್ ಸಿಎನ್ ಜಿ ಕಾರ್ 1.2 ಲೀಟರ್ ನ್ಯಾಚುಲರ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಪಡೆಯಲಿದ್ದು, ಸಿಎನ್ ಜಿ ಮಾಡ್ ನಲ್ಲಿ 76 bhp ಗರಿಷ್ಟ ಪವರ್ ಹಾಗೂ 97 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಇದನ್ನು ಖರೀದಿಸಬಹುದಾಗಿದೆ. ಇನ್ನು ಈ ಕಾರ್ ನಲ್ಲಿ ಎರಡು ಸಿಲಿಂಡರ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ.

Tata Punch CNG Price and Mileage
Image Credit: V3cars

ಟಾಟಾ ಪಂಚ್ ಸಿಎನ್ ಜಿ ಬೆಲೆ ಮತ್ತು ಮೈಲೇಜ್
6 ಏರ್‌ಬ್ಯಾಗ್ಸ್, ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ಸ್, 16 ಇಂಚಿನ ಅಲಾಯ್ ವೀಲ್ಸ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಎಲೆಕ್ಟ್ರಿಕ್ ಸನ್‌ರೂಫ್‌ ಹೊಂದಿದ್ದು ಮಾರುಕಟ್ಟೆಯಲ್ಲಿ ಸುಮಾರು 10 ಲಕ್ಷ ಬೆಲೆಯನ್ನು ನಿಗದಿಪಡಿಸಲಾಗಿದೆ. ಈ ಟಾಟಾ ಪಂಚ್ ಸಿಎನ್ ಜಿ ಕಾರ್ 30kmpl ಮೈಲೇಜ್ ನೀಡಲಿದೆ. ಇನ್ನು ಕಂಪನಿಯು ಟಾಟಾ ಪಂಚ್ ಸಿಎನ್ ಜಿ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗಪಡಿಸಿಲ್ಲ.

Join Nadunudi News WhatsApp Group

Join Nadunudi News WhatsApp Group