Tata New Ev: 421 ಕಿಲೋಮೀಟರ್ ಮೈಲೇಜ್ ಕೊಡುವ ಈ ಟಾಟಾ ಕಾರಿಗೆ ಸಕತ್ ಡಿಮ್ಯಾಂಡ್, ಬೆಲೆ ಕೂಡ ಕಡಿಮೆ

ಕಡಿಮೆ ಬೆಲೆಯಲ್ಲಿ ಹೆಚ್ಚಿನ ಮೈಲೇಜ್ ನೀಡುವಂತ ಟಾಟಾದ ನೂತನ EV

Tata Punch EV 2024: ದೇಶಿಯ ಮಾರುಕಟ್ಟೆಯಲ್ಲಿ Tata Motors ತನ್ನ ಮಾರಾಟವನ್ನು ಹೆಚ್ಚಿಸಿಕೊಂಡಿದೆ. ಹೊಸ ಮಾದರಿಯ ಕಾರ್ ಗಳನ್ನೂ ಬಿಡುಗಡೆ ಮಾಡುವ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ. ಇತ್ತೀಚೆಗಂತೂ ಕಚ್ಚಾ ತೈಲಗಳ ಬೆಲೆ ಏರಿಕೆಯಾಗುತ್ತಿದೆ. ಕಚ್ಚಾ ತೈಲಗಳ ಬೆಲೆಯ ಏರಿಕೆಯ ಕಾರಣ ಜನರು ಎಲೆಕ್ಟ್ರಿಕ್ ವಾಹನಗಳ ಖರೀದಿಯತ್ತ ಮುಖ ಮಾಡುತ್ತಿದ್ದಾರೆ.

ಇದೀಗ ಭಾರತೀಯ ಮಾರುಕಟ್ಟೆಗೆ ಟಾಟಾ ನೂತನ ಮಾದರಿಯ ಎಲೆಕ್ಟ್ರಿಕ್ ಕಾರ್ ಬಿಡುಗಡೆಗೆ ಸಜ್ಜಾಗಿದೆ. ಟಾಟಾ ಮೋಟಾರ್ಸ್ ಕಂಪನಿಯು ಇದೀಗ ಇತರ ಎಲೆರ್ಕ್ಟ್ರಿಕ್ ಕಾರ್ ಗಳಿಗೆ ಪೈಪೋಟಿ ನೀಡಲು ಹೊಸ ವಿನ್ಯಾಸದ ಕಾರ್ ಅನ್ನು ಪರಿಚಯಿಸಿದೆ. ಇದೀಗ ನಾವು ಕಡಿಮೆ ಬೆಲೆಯಲ್ಲಿ ಹೆಚ್ಚಿನ ಮೈಲೇಜ್ ನೀಡುವಂತ ಟಾಟಾದ ನೂತನ ಎಲೆಕ್ಟ್ರಿಕ್ ಮಾದರಿಯ ಬಗ್ಗೆ ವಿವರ ತಿಳಿಯೋಣ.

Tata Punch EV Price And Feature
Image Credit: Jagran

ಎಲೆಕ್ಟ್ರಿಕ್ ರೂಪಾಂತರದಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ಟಾಟಾ ಪಂಚ್
ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲೆಕ್ಟ್ರಿಕ್ ಮಾದರಿಗಳಿಗೆ ಠಕ್ಕರ್ ನೀಡಲು ಟಾಟಾ ನೂತನವಾಗಿ ತನ್ನ PUNCH EV ಪರಿಚಯಿಸಿದೆ. ಟಾಟಾ Punch ಗೆ 25kWh ಮತ್ತು 35kWh ಸಾಮರ್ಥ್ಯದ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಲಾಗಿದೆ. Tata Punch EV  ಲಾಂಗ್ ರೇಂಜ್ 3.3kW AC ಹೋಮ್ ವಾಲ್ ಬಾಕ್ಸ್ ಚಾರ್ಜರ್ ಮತ್ತು 15 A ಪ್ಲಗ್ ಪಾಯಿಂಟ್ ಮೂಲಕ 10-100% ಚಾರ್ಜ್ ಮಾಡಲು 13.5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ ಮತ್ತು 7.2kW AC ಹೋಮ್ ವಾಲ್ ಬಾಕ್ಸ್ ಚಾರ್ಜರ್ ಮೂಲಕ ಇದೇ ರೀತಿಯ ಚಾರ್ಜ್ ಮಾಡಲು 5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.

ಬರೋಬ್ಬರಿ 421km ಮೈಲೇಜ್ ನೀಡುವ ಈ EV ಮಾದರಿಯ ಬೆಲೆ ಎಷ್ಟಿದೆ..?
ಇನ್ನು ಪಂಚ್ EV ಸ್ಟ್ಯಾಂಡರ್ ಮಾದರಿಯು 280 ರಿಂದ 350km ಮೈಲೇಜ್ ನೀಡಿದರೆ ಹೈ ರೇಂಜ್ ಮಾದ್ರಿಯು ಬರೋಬ್ಬರಿ 421 ಕಿಲೋಮೀಟರ್ ಮೈಲೇಜ್ ನೀಡಲಿದೆ. ಎಲೆಕ್ಟ್ರಿಕ್ SUV ಇಕೋ, ಸಿಟಿ ಮತ್ತು ಸ್ಪೋರ್ಟ್ ನ ಮೂರು ಡ್ರೈವ್ ಮೋಡ್‌ ಗಳೊಂದಿಗೆ ಬರುತ್ತದೆ. ನೀವು ಎಂಪವರ್ಡ್ ರೆಡ್, ಸೀವೀಡ್, ಫಿಯರ್ಲೆಸ್ ರೆಡ್, ಡೇಟೋನಾ ಗ್ರೇ ಮತ್ತು ಪ್ರಿಸ್ಟಿನ್ ವೈಟ್ ಬಣ್ಣಗಳ ಆಯ್ಕೆಯಲ್ಲಿ Punch EV ಯನ್ನು ಖರೀದಿಸಬಹುದು. ಇನ್ನು ಮಾರುಕಟ್ಟೆಯಲ್ಲಿ Tata Punch ಎಲೆಕ್ಟ್ರಿಕ್ ಮಾದರಿ ಸರಿಸುಮಾರು 10.99 ರಿಂದ 14 .99 ಲಕ್ಷ ಬೆಲೆಯಲ್ಲಿ ಪರಿಚಯವಾಗಿದೆ.

Tata Punch EV 2024
Image Credit: Ecovahan

ಟಾಟಾ ಇವಿಯ ವೈಶಿಷ್ಟ್ಯಗಳ ಬಗ್ಗೆ ಇಲ್ಲಿದೆ ವಿವರ
ನೀವು ಟಾಟಾ ಪಂಚ್ ಮಾದರಿಯನ್ನು ಕೇವಲ 21,000 ರೂ. ಮುಂಗಡ ಪಾವತಿಸುವ ಮೂಲಕ Punch EV ಯನ್ನು ನಿಮ್ಮದಾಗಿಸಿಕೊಳ್ಳಬಹುದು. ನೀವು ಟಾಟಾದ ಎಲೆಕ್ಟ್ರಿಕ್ ಮಾದರಿಯಲ್ಲಿ 10.25-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಂ, 10.25 ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 360 ಡಿಗ್ರಿ ಕ್ಯಾಮೆರಾ, leather ಆಸನಗಳು, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಆಟೋ ಹಿಲ್ ಹೋಲ್ಡ್ ಅಸಿಸ್ಟ್, Connected Car Tech, ವೈರ್ಲೆಸ್ ಚಾರ್ಜರ್, Ventilated seats in fron, cruise control, ಸನ್ರೂಫ್ ಸೇರಿದಂತೆ ಹೆಚ್ಚಿನ ಫೀಚರ್ ಅನ್ನು ಕಾಣಬಹುದು.

Join Nadunudi News WhatsApp Group

Join Nadunudi News WhatsApp Group