Tata India: 11 ಲಕ್ಷಕ್ಕೆ ಸಿಗುವ ಈ ಟಾಟಾ ಕಾರ್ ಮೈಲೇಜ್ ಭರ್ಜರಿ 421 Km, ದೇಶದಲ್ಲಿ ದಾಖಲೆಯ ಬುಕಿಂಗ್

ಹೊಸ ವಿನ್ಯಾಸದಲ್ಲಿ ಭರ್ಜರಿಯಾಗಿ ಲಾಂಚ್ ಆಗಿದೆ Punch EV

Tata Punch EV Booking: ಸದ್ಯ ಭಾರತೀಯ ಆಟೋ ವಲಯದಲ್ಲಿ Tata ಕಂಪನಿಯ ಈ ನೂತನ EV ಬಾರಿ ಸದ್ದು ಮಾಡುತ್ತಿದೆ. ಬಿಡುಗಡೆಗೂ ಮುನ್ನವೇ ಈ ಪಂಚ್ EV ಗ್ರಾಹಕರನ್ನು ಸೆಳೆಯುತ್ತಿದೆ. ಸದ್ಯ ಜನರು Tata Punch EV ಖರೀದಿಗಾಗಿ ಕಾಯುತ್ತಿದ್ದಾರೆ.

ಈಗಾಗಲೇ ಕಂಪನಿಯು ಬುಕಿಂಗ್ ಅನ್ನು ಕೂಡ ಆರಂಭಿಸಿದೆ. ಟಾಟಾ ಪಂಚ್‌ ಐಸಿಇ ಎಂಜಿನ್‌ ಕಾರಿನಂತೆಯೇ ಕಾಣುವ ಹೊಸ Punch EV ಇದೀಗ ಮಾರುಕಟ್ಟೆಗೆ ಲಾಂಚ್ ಆಗಿದೆ. ಇದೀಗ ನಾವು ಈ ಲೇಖನದಲ್ಲಿ ನೂತನ ಮಾದರಿಯ Tata Punch EV ಬಗ್ಗೆ ಸಂಪೂರ್ಣ ವಿವರನ್ನು ತಿಳಿದುಕೊಳ್ಳೋಣ.

Tata Punch EV Booking
Image Credit: Zigwheels

ಹೊಸ ವಿನ್ಯಾಸದಲ್ಲಿ ಭರ್ಜರಿಯಾಗಿ ಲಾಂಚ್ ಆಗಿದೆ Punch EV
ನೂತನ ಮಾದರಿಯ ಪಂಚ್ EV ಯಲ್ಲಿ ನೀವು ಅತ್ಯಾಧುನಿಕ ಫೀಚರ್ ಅನ್ನು ನೋಡಬಹುದು. ಹೊಸ ಟಾಟಾ ಪಂಚ್ ಎಲೆಕ್ಟ್ರಿಕ್ ಪೂರ್ಣ LED ಲೈಟಿಂಗ್ ಸೆಟಪ್ ಅನ್ನು ಒಳಗೊಂಡಿದೆ. ಮುಂಭಾಗದ ಗ್ರಿಲ್ ಅನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ ಮತ್ತು 360 ಡಿಗ್ರಿ ಕ್ಯಾಮೆರಾವನ್ನು ಸಹ ಇರಿಸಲಾಗಿದೆ. ಇಷ್ಟೇ ಅಲ್ಲ ಈ ಕಾರಿನ ವಿನ್ಯಾಸದಲ್ಲಿ ನೀವು ಕಾರಿನ ಗ್ರಿಲ್‌ ನಲ್ಲಿ ಚಾರ್ಜಿಂಗ್ ಸಾಕೆಟ್ ಅನ್ನು ಸಹ ಪಡೆಯುತ್ತೀರಿ.

ಟಾಟಾ ನೆಕ್ಸಾನ್‌ ನಂತೆ, ಈ ಕಾರು ಸಹ LED DRL ಗಳನ್ನು ಹೊಂದಿದ್ದು, ಈ ಕಾರಿನ ವಿನ್ಯಾಸವನ್ನು ಇನ್ನಷ್ಟು ಬೆರಗುಗೊಳಿಸಲಿದೆ. ಈ DRL ನ ಕೆಳಗಿನ ಕೇಂದ್ರದಲ್ಲಿ ಟಾಟಾ ಲೋಗೋ ಸಹ ಲಭ್ಯವಿದೆ. ಈ ಲೋಗೋವನ್ನು ಕಪ್ಪು ಮತ್ತು ಬಿಳಿ ಫಿನಿಶಿಂಗ್‌ ನಲ್ಲಿ ನೀಡಲಾಗಿದೆ. ಬಂಪರ್ ಕೂಡ ಸರಾಸರಿ ಪಂಚ್‌ ಗಿಂತ ಸ್ವಲ್ಪ ಭಿನ್ನವಾಗಿದೆ ಎನ್ನಬಹುದು. ಇನ್ನು ORVM ನಲ್ಲಿ ಕ್ಯಾಮರಾಗಳು ಇದ್ದು ಇದು 360 ಡಿಗ್ರಿ ಕ್ಯಾಮೆರಾ ಸೆಟಪ್ ಗೆ ಸಹಾಯ ಮಾಡುತ್ತದೆ.

Tata Punch EV 2024
Image Credit: Hindustantimes

ಕೇವಲ 10.99 ಲಕ್ಷಕ್ಕೆ ಬರೋಬ್ಬರಿ 421km ರೇಂಜ್ ನೀಡುವ EV ಲಾಂಚ್
ಟಾಟಾ Punch ಯಲ್ಲಿ 25kWh ಮತ್ತು 35kWh ಸಾಮರ್ಥ್ಯದ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಲಾಗಿದೆ. ಇನ್ನು ಪಂಚ್ EV ಸ್ಟ್ಯಾಂಡರ್ ಮಾದರಿಯು 280 ರಿಂದ 350km ಮೈಲೇಜ್ ನೀಡಿದರೆ ಹೈ ರೇಂಜ್ ಮಾದರಿಯು ಬರೋಬ್ಬರಿ 421 ಕಿಲೋಮೀಟರ್ ಮೈಲೇಜ್ ನೀಡಲಿದೆ. ಎಲೆಕ್ಟ್ರಿಕ್ SUV ಇಕೋ, ಸಿಟಿ ಮತ್ತು ಸ್ಪೋರ್ಟ್ ನ ಮೂರು ಡ್ರೈವ್ ಮೋಡ್‌ ಗಳೊಂದಿಗೆ ಬರುತ್ತದೆ.

Join Nadunudi News WhatsApp Group

ನೀವು ಎಂಪವರ್ಡ್ ರೆಡ್, ಸೀವೀಡ್, ಫಿಯರ್ಲೆಸ್ ರೆಡ್, ಡೇಟೋನಾ ಗ್ರೇ ಮತ್ತು ಪ್ರಿಸ್ಟಿನ್ ವೈಟ್ ಬಣ್ಣಗಳ ಆಯ್ಕೆಯಲ್ಲಿ Punch EV ಯನ್ನು ಖರೀದಿಸಬಹುದು. ಇನ್ನು ಮಾರುಕಟ್ಟೆಯಲ್ಲಿ Tata Punch ಎಲೆಕ್ಟ್ರಿಕ್ ಮಾದರಿ ಸರಿಸುಮಾರು 10.99 ರಿಂದ 14 .99 ಲಕ್ಷ ಬೆಲೆಯಲ್ಲಿ ಪರಿಚಯವಾಗಿದೆ. ನೀವು ಟಾಟಾ ಪಂಚ್ ಮಾದರಿಯನ್ನು ಕೇವಲ 21,000 ರೂ. ಮುಂಗಡ ಪಾವತಿಸುವ ಮೂಲಕ Punch EV ಯನ್ನು ನಿಮ್ಮದಾಗಿಸಿಕೊಳ್ಳಬಹುದು. ಹೆಚ್ಚಿನ ಮೈಲೇಜ್ ನೀಡು ಈ ಪಂಚ್ EV ಮಾರುಕಟ್ಟೆಯಲ್ಲಿ ದಾಖಲೆಯ ಬುಕಿಂಗ್ ಕಾಣುತ್ತಿದೆ.

Join Nadunudi News WhatsApp Group