Tata Safari: ಆಕಸ್ಮಿಕವಾಗಿ ಬೆಂಕಿಗೆ ಆಹುತಿಯಾದ Tata Safari, ಬೆಂಕಿ ಹತ್ತಿಕೊಂಡಿದ್ದಕ್ಕೆ ಕಾರಣ ನೀಡಿದ ಟಾಟಾ.

ಇದೀಗ ಸ್ವತಃ TATA ಕಾರ್ ಗೆ ಬೆಂಕಿ ಅನಾಹುತವಾಗಲು ಕಾರಣ ಏನೆನ್ನುವ ಬಗ್ಗೆ ಮಾಹಿತಿ ನೀಡಿದೆ.

Tata Safari Fire: ಜನಪ್ರಿಯ ಕಾರ್ ತಯಾರಕ ಬ್ರಾಂಡ್ ಆಗಿರುವ TATA Motors ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಪಡೆದಿದೆ ಎನ್ನಬಹುದು. ಹೆಚ್ಚಿನ ಜನರು ಮೈಲೇಜ್ ಆಯ್ಕೆಯಲ್ಲಿ Tata motors ಕಾರ್ ಗಳನ್ನೇ ಹೆಚ್ಚಾಗಿ ಆರಿಸುತ್ತಾರೆ. ಮೈಲೇಜ್ ಗೆ ಟಾಟಾ ಕಂಪನಿಯ ಕಾರ್ ಗಳು ಹೆಸರುವಾಸಿಯಾಗಿದೆ.

ಇನ್ನು ಕಂಪನಿಯು ತನ್ನ ಕಾರ್ ತಯಾರಿಕೆಯ ಸಮಯದಲ್ಲಿ ಹೆಚ್ಚಿನ ಸುರಕ್ಷಿತ ಫೀಚರ್ ಅನ್ನು ಅಳವಡಿಸುವುದು ಸಹಜ. ಗ್ರಾಹಕರು ಕಾರ್ ಖರೀದಿಯ ಮುನ್ನ ಗಮನ ಹರಿಸುವುದು ಸುರಕ್ಷತಾ ಫೀಚರ್ ಕಡೆ. ಹೀಗಾಗಿ ಕಾರ್ ಗಳಲ್ಲಿ ಎಷ್ಟೇ ಸುರಕ್ಷಿತ ಫೀಚರ್ ಗಳು ಇದ್ದರು ಕೂಡ ಅದು ಕಡಿಮೆಯೇ.

Tata Safari Fire
Image Credit: Hindustantimes

ಆಕಸ್ಮಿಕವಾಗಿ ಬೆಂಕಿಗೆ ಆಹುತಿಯಾದ Tata Safari
ಇನ್ನು ಮಾರುಕಟ್ಟೆಯಲ್ಲಿ Tata ತನ್ನ 5 ಸ್ಟಾರ್ ರೇಟಿಂಗ್ ಕಾರ್ ಗಳನ್ನೂ ಗ್ರಾಹಕರಿಗಾಗಿ ಪರಿಚಯಿಸುತ್ತಿದೆ. ಆದರೆ ಇತ್ತೀಚೆಗಷ್ಟೇ ಪಂಜಾಬ್ ನ ಲುಧಿಯಾದಲ್ಲಿ Tata safari Car ನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಟಾಟಾ ಸಫಾರಿ ಬೆಂಕಿಗೆ ಆಹುತಿಯಾಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗಿದೆ. ಇನ್ನು ಕಾರ್ ಗೆ ಆಕಸ್ಮಿಕ ಬೆಂಕಿ ಹತ್ತಿಕೊಳ್ಳಲು ಕಾರಣ ಏನಿರಬಹುದು ಎನ್ನುವ ಪ್ರಶ್ನೆ ಎಲ್ಲರಲ್ಲೂ ಮಾಡಿದೆ. ಇದೀಗ ಸ್ವತಃ TATA ಕಾರ್ ಗೆ ಬೆಂಕಿ ಅನಾಹುತವಾಗಲು ಕಾರಣ ಏನೆನ್ನುವ ಬಗ್ಗೆ ಮಾಹಿತಿ ನೀಡಿದೆ.

Safari SUV ಗೆ ಬೆಂಕಿ ಹತ್ತಿಕೊಂಡಿದ್ದು ಹೇಗೆ..?
ಪಂಜಾಬ್ ನ ಲುಧಿಯಾದಲ್ಲಿ ಕಳೆದ ವಾರ ಹೌಸಿಂಗ್ ಸೊಸೈಟಿಯ ಪಾರ್ಕಿಂಗ್ ಲೌಟ್ ನಲ್ಲಿ ಬೂದು ಬಣ್ಣದ Safari SUV ಬೆಂಕಿಗೆ ಹಾನಿಗೊಳಲಾಗಿದೆ. ಈ ಬಗ್ಗೆ Safari ಮಾಲೀಕರು ಹೇಳಿಕೆ ನೀಡಿದ್ದಾರೆ. ‘ನಾನು ಟಾಟಾ ಸಫಾರಿ ಟಾಪ್ ಎಂಡ್ ರೂಪಾಂತರವನ್ನು ಹೊಂದಿದ್ದೇನೆ. ಎಲ್ಲ ಅಧಿಕೃತ ಟಾಟಾ ಡೀಲರ್ ನಿಂದ ಮಾತ್ರಾ ಸರ್ವಿಸ್ ಮತ್ತು ನಿರ್ವಹಣೆ ಮಾಡುತ್ತಿದ್ದೇನೆ. ಅದನ್ನು ನಿಲ್ಲಿಸುವಾಗ ಬೆಂಕಿ ಹೊತ್ತಿಕೊಂಡಿತು’ ಎಂದು ವಾಹನ ಮಾಲೀಕರು ಮಾಹಿತಿ ನೀಡಿದ್ದಾರೆ.

Join Nadunudi News WhatsApp Group

ಬೆಂಕಿ ಹತ್ತಿಕೊಂಡಿದ್ದಕ್ಕೆ ಕಾರಣ ನೀಡಿದ ಟಾಟಾ
Tata Motors ಘಟನೆಯ ಬಗ್ಗೆ ಹಲವರು ಟಾಟಾ ಸಫಾರಿ ಸುರಕ್ಷಿತ ವಾಹನವಲ್ಲವೆಂದು ಟೀಕಿಸಿದ್ದಾರೆ. ಇದೀಗ ಟಾಟಾ ಕಾರ್ ನ ಸುರಕ್ಷತೆಯ ಬಗ್ಗೆ ಟೀಕಿಸಿದವರಿಗೆ ಟಾಟಾ ಖಡಕ್ ಉತ್ತರ ನೀಡಿದೆ. ಟಾಟಾ ಮೊದಲು ಈ ಬೆಂಕಿಗೆ ಅಸುರಕ್ಷಿತ ಅರ್ಕಿಂಗ್ ಕಾರಣವಿರಬಹುದು ಎಂದು ಹೇಳಿದೆ. ಇದರ ಜೊತೆಗೆ ಟಾಟಾ ತನ್ನ ತನಿಖಾ ವರದಿಯನ್ನು ಬಹಿರಂಗಪಡಿಸಿದೆ. ಟಾಟಾ ಮೋಟಾರ್ಸ್ ತನಿಖೆಯ ವರದಿ ಪ್ರಕಾರ, ಈ SUV ಹಾಟ್ ಸೈಲೆನ್ಸರ್ ಅಸೆಂಬ್ಲಿ ಬಳಿಯ ಅಂಡರ್ ಬಾಡಿ ಇಂಜಿನ್ ಗಾರ್ಡ್ ನಲ್ಲಿ ಸಂಗ್ರಹವಾದ ಒಣ ಎಲೆಗಳು ಮತ್ತು ಪೇಪರ್ ಕಪ್ ಗಳಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ವರದಿ ಮಾಡಿದೆ. ವಾಹನಗಳನ್ನು ನಿಲ್ಲಿಸುವಾಗ ಸುರಕ್ಷಿತ ಸ್ಥಳಗಳನ್ನು ಆರಿಸಿ ಎಂದು ಟಾಟಾ ಹೇಳಿದೆ.

Join Nadunudi News WhatsApp Group