Income Tax Exemption: ಆದಾಯ ತೆರಿಗೆ ಕಟ್ಟುವವರಿಗೆ ಕೇಂದ್ರದಿಂದ ಸಿಹಿಸುದ್ದಿ, ಈಗ ಈ 5 ಆದಾಯಗಳಿಗೆ ಯಾವುದೇ ತೆರಿಗೆ ಇಲ್ಲ.

ಹೊಸ ನಿಯಮದ ಪ್ರಕಾರ ಈ ಐದು ಆದಾಯಗಳಿಗೆ ಯಾವುದೇ ತೆರಿಗೆ ಪಾವತಿ ಮಾಡುವ ಅಗತ್ಯ ಇರುವುದಿಲ್ಲ.

Income Tax Exemption: ಪ್ರಸ್ತುತ 2023 -24 ಸಾಲಿನ ಹಣಕಾಸು ವರ್ಷ ಏಪ್ರಿಲ್ 1 2023 ರಿಂದ ಆರಂಭಗೊಂಡಿದೆ. ಸದ್ಯ 2022 -23 ನೇ ಸಾಲಿನ ಆದಾಯ ತೆರಿಗೆ ಪಾವತಿಗೆ ಜುಲೈ 31 2023 ಕೊನೆಯ ದಿನಾಂಕವಾಗಿತ್ತು.

ಇನ್ನೂ ನಿಗದಿತಾ ಸಮಯದೊಳಗೆ ಆದಾಯ ತೆರಿಗೆ ಪಾವತಿ ಮಾಡದೆ ಇದ್ದವರಿಗೆ ಇಲಾಖೆ ಈಗಾಗಲೇ ದಂಡವನ್ನು ವಿಧಿಸಿದೆ. ಆದಾಯ ತೆರಿಗೆ ಪಾವತಿದಾರರಿಗೆ ಇಲಾಖೆ ಹೊಸ ಹೊಸ ನಿಯಮವನ್ನು ಜಾರಿಗೊಳಿಸುತ್ತಲೇ ಇರುತ್ತದೆ. ತೆರಿಗೆ ಪಾವತಿದಾರರು ಇಲಾಖೆಯ ನಿಯಮಾನುಸಾರ ತೆರಿಗೆ ಪಾವತಿಸ ಬೇಕಾಗುತ್ತದೆ.

Income tax rules in India have been changed again
Image Credit: informalnewz

ಆದಾಯ ತೆರಿಗೆ ಕಟ್ಟುವವರಿಗೆ ಕೇಂದ್ರದಿಂದ ಸಿಹಿಸುದ್ದಿ
ಇನ್ನೂ ಯಾವುದೇ ವ್ಯಾಪಾರ ಅಥವಾ ಉದ್ಯೋಗದಿಂದ ಬಂದ ಆದಾಯದ ಮೂಲಗಳಿಗೆ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ವ್ಯಕ್ತಿಯ ಆದಾಯದ ಶೇಕಡಾವಾರು ಮೇಲೆ ಆತನಿಗೆ ನೀಡಲಾಗುವ ತೆರಿಗೆ ಅವಲಂಭಿಸಿರುತ್ತದೆ. ಇನ್ನೂ ಎಲ್ಲಾ ಮೂಲದ ಆದಾಯಕ್ಕೂ ತೆರಿಗೆ ಪಾವತಿಸುವ ಅಗತ್ಯ ಇರುವುದಿಲ್ಲ. ಇಲಾಖೆಯು ಕೆಲ ಮೂಲದ ಆದಾಯಕ್ಕೆ ತೆರಿಗೆ ವಿನಾಯಿತಿಯನ್ನು ನೀಡುತ್ತದೆ. ಇಂತಹ ಮೂಲದಿಂದ ಬಂದ ಆದಾಯಕ್ಕೆ ಯಾವುದೇ ರೀತಿಯ ತೆರಿಗೆ ಪಾವತಿಸುವ ಅಗತ್ಯ ಇರುವುದಿಲ್ಲ.

ಈ ಐದು ಆದಾಯಕ್ಕೆ ತೆರಿಗೆ ವಿನಾಯಿತಿ ಲಭ್ಯವಿದೆ
*ಸರ್ಕಾರೀ ನೌಕರರ ಮರಣದ ನಂತರ ಪಡೆದ ಗ್ರಾಚುಟಿಯ (Gratuity) ಮೇಲಿಯ ಆದಾಯವು ತೆರಿಗೆ ಮುಕ್ತವಾಗಿದೆ. 5 ವರ್ಷಗಳ ನಂತರ ವ್ಯಕ್ತಿಯು ಕಂಪನಿಯನ್ನು ತೊರೆದರೆ ಈ ಸಮಯದಲ್ಲಿ ಉದ್ಯೋಗಸ್ಥನೂ ಗ್ರಾಚುಟಿಯ ಪ್ರಯೋಜನವನ್ನು ಪಡೆಯುತ್ತಾರೆ. ಈ ಗ್ರಾಚುಟಿಯ ಮೊತ್ತದ ಮೇಲಿನ ಆದಾಯವು ತೆರಿಗೆ ಮುಕ್ತವಾಗಿದೆ.

There is no need to pay any tax on these five incomes.
Image Credit: indiafilings

*ಇನ್ನು ಸರ್ಕಾರಿ ನೌಕರರ 20 ಲಕ್ಷದ ವರೆಗಿನ ಆದಾಯವು ತೆರಿಗೆ ಮುಕ್ತವಾಗಿದೆ. ಖಾಸಗಿ ಉದ್ಯೋಗಿಗಳ 10 ಲಕ್ಷದ ವರೆಗಿನ ಆದಾಯವು ತೆರಿಗೆ ಮುಕ್ತವಾಗಿದೆ. ಪಿಪಿಎಫ್ (PPF) ಮತ್ತು ಇಪಿಎಸ್ (EPS) ಗಳ ಮೇಲೆ ತೆರಿಗೆ ಇರುವುದಿಲ್ಲ. ಉದ್ಯೋಗಿ 5 ವರ್ಷಗಳ ಕಾಲ ನಿರಂತರವಾಗಿ ಕೆಲಸ ಮಾಡಿದ ನಂತರ ತನ್ನ ಇಪಿಎಫ್ ಅನ್ನು ಹಿಂಪಡೆದರೆ ಆ ಮೊತ್ತಕ್ಕೆ ಯಾವುದೇ ತೆರಿಗೆ ಪಾವತಿಸಬೇಕೆಗಿಲ್ಲ.

Join Nadunudi News WhatsApp Group

*ಕುಟುಂಬದವರಿಂದ, ಪೋಷಕರಿಂದ ಉಡುಗೊರೆಯಾಗಿ ಹಣ, ಆಸ್ತಿ, ಆಭರಣಗಳನ್ನು ಪಡೆದಿದ್ದರೆ ಅದು ತೆರಿಗೆ ಮುಕ್ತವಾಗುತ್ತದೆ. ಕೇಂದ್ರ ಸರ್ಕಾರ 1961 RA ಆದಾಯ ತೆರಿಗೆ ಕಾಯ್ದೆ ಅಡಿಯಲ್ಲಿ ಕೃಷಿಯೇತರ ಆದಾಯಗಳಿಗೆ ತೆರಿಗೆ ವಿಧಿಸಿಲ್ಲ.

*ದೇಶದ ರೈತರು ಕೃಷಿಯಿಂದ ಗಳಿಸಿದ ಆದಾಯಗಳು ತೆರಿಗೆ ಮುಕ್ತವಾಗಿರುತ್ತದೆ. ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 10 (2 ) ಅಡಿಯಲ್ಲಿ, ಹಿಂದೂ ಅವಿಭಜಿತ ಕುಟುಂಬದಿಂದ ಪಿತ್ರಾರ್ಜಿತ ರೂಪದಲ್ಲಿ ಪಡೆದ ಆದಾಯವು ತೆರಿಗೆ ಮುಕ್ತ ಆಗಿರುತ್ತದೆ.

*ಇನ್ನು ಉಳಿತಾಯ ಖಾತೆಯ ಹೂಡಿಕೆಯ ಬಡ್ಡಿಯಿಂದ ಗಳಿಸಿದ ಹಣಕ್ಕೆ ಯಾವುದೇ ರೀತಿಯ ತೆರಿಗೆ ಕಟ್ಟಬೇಕಿಲ್ಲ. ಇನ್ನು 5 ಲಕ್ಷಕ್ಕಿಂತ ಹೆಚ್ಚಿನ VRS ನಲ್ಲಿ ಪಡೆದ ಮೊತ್ತದ ಮೇಲೆ ತೆರಿಗೆ ವಿನಾಯಿತಿ ಲಭ್ಯವಿದೆ.ಇನ್ನು ವಿದ್ಯಾರ್ಥಿಗಳಿಗೆ ನೀಡಲಾಗುವ ವಿದ್ಯಾರ್ಥಿ ವೇತನದ ಮೊತ್ತ ಅಥವಾ ಪ್ರಶಸ್ತಿಯ ಮೊತ್ತಕ್ಕೆ ತೆರಿಗೆ ವಿನಾಯಿತಿ ಲಭ್ಯವಿದೆ.

Join Nadunudi News WhatsApp Group