SSY Tax: ಸುಕನ್ಯಾ ಸಮೃದ್ಧಿ ಖಾತೆ ಇದ್ದವರಿಗೆ ಗುಡ್ ನ್ಯೂಸ್, ನಿಮಗೆ ಸಿಗಲಿದೆ ಇಷ್ಟು ತೆರಿಗೆ ವಿನಾಯಿತಿ.

SSY ಖಾತೆಯಲ್ಲಿ ಹೂಡಿಕೆ ಮಾಡಿದರೆ ಇಷ್ಟು ತೆರಿಗೆ ಕಡಿತವನ್ನು ಪಡೆಯಬಹುದು.

Tax Exemption In SSY: ಸಾಮಾನ್ಯವಾಗಿ ಕೇಂದ್ರ ಸರ್ಕಾರ ದೇಶದ ಮಹಿಳೆಯರಿಗೆ ಹೆಚ್ಚಿನ ಯೋಜನೆಯನ್ನು ಪರಿಚಯಿಸುತ್ತಿದೆ. ಹೆಣ್ಣು ಮಕ್ಕಳು ಒಂದು ರೀತಿಯಲ್ಲಿ ಆರ್ಥಿಕವಾಗಿ ಹಿಂದುಳಿದಿದ್ದಾರೆ ಎನ್ನಬಹುದು. ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಹಣ ಅವಶ್ಯಕತೆ ಇರುತ್ತದೆ. ಇನ್ನು ಮನೆಯಲ್ಲಿ ಹೆಣ್ಣು ಮಗು ಜನಿಸಿದರೆ ತಂದೆ ತಾಯಿಗೆ ಆ ಮಗುವಿನ ಭವಿಷ್ಯದ ಚಿಂತೆ ಹೆಚ್ಚಿರುತ್ತದೆ.

ತಮ್ಮ ಮಗಳಿಗೆ ಉತ್ತಮ ಜೀವನದ ಜೊತೆಗೆ ಶಿಕ್ಷಣವನ್ನು ನೀಡಬೇಕೆನ್ನುವ ಆಸೆ ಎಲ್ಲ ಪೋಷಕರಲ್ಲಿಯೂ ಇರುವುದು ಸಾಮಾನ್ಯ. ಹೀಗಾಗಿ ಕೇಂದ್ರ ಸರಕಾರ ಹೆಣ್ಣು ಮಕ್ಕಳ ಭವಿಷ್ಯದ ಚಿಂತೆಯನ್ನು ಪೋಷಕರಿಗೆ ಕಡಿಮೆ ಮಾಡಲು SSY ಹೂಡಿಕೆ ಯೋಜನೆಯನ್ನು ಪರಿಚಯಿಸಿದೆ. ನೀವು ನಿಮ್ಮ ಮಗುವಿನ ಹೆಸರಿನಲ್ಲಿ SSY ಹೂಡಿಕೆ ಮಾಡಿದರೆ ಎಷ್ಟು ಲಾಭವನ್ನು ಪಡೆಯಬಹುದು ಎನ್ನುವ ಬಗ್ಗೆ ವಿವರ ಇಲ್ಲಿದೆ.

Sukanya Samriddhi Scheme Latest News
Image Credit: Informal News

ಸುಕನ್ಯಾ ಸಮೃದ್ಧಿ ಖಾತೆ ಇದ್ದವರಿಗೆ ಗುಡ್ ನ್ಯೂಸ್
ಈಗಾಗಲೇ ಕೇಂದ್ರ ಸರಕಾರ ಸಾಕಷ್ಟು ಸಣ್ಣಾ ಉಳಿತಾಯ ಯೋಜನೆಯನ್ನು ಪರಿಚಯಿಸಿದ್ದು, ಅದರಲ್ಲಿ Sukanya Samruddhi Yojana ಹೆಣ್ಣು ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಉತ್ತಮ ಆಯ್ಕೆಯಾಗಿದೆ. ನಿಮ್ಮ ಮನೆಯಲ್ಲಿ ಹೆಣ್ಣು ಮಗುವಿದ್ದರೆ ನೀವು ಕೇಂದ್ರ ಸರ್ಕಾರ SSY ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ನಿಮ್ಮ ಮಗಳಿಗೆ ಉತ್ತಮ ಭವಿಷ್ಯವನ್ನು ನೀಡಬಹುದು. ಇನ್ನು SSY ಖಾತೆಯಲ್ಲಿ ಹೂಡಿಕೆ ಮಾಡಿದರೆ IT ಕಾಯ್ದೆ ಸೆಕ್ಷನ್ 80 C ಅಡಿಯಲ್ಲಿ ತೆರಿಗೆ ಕಡಿತವನ್ನು ಪಡೆಯಬಹುದು.

ನಿಮಗೆ ಸಿಗಲಿದೆ ಇಷ್ಟು ತೆರಿಗೆ ವಿನಾಯಿತಿ
ನೀವು SSY ಉಳಿತಾಯ ಯೋಜನೆಯಾ ಹೂಡಿಕೆಯ ಹಣದಿಂದ ಗಳಿಸಿದ ಮೊತ್ತಕ್ಕೆ ಯಾವ TAX ಕಟ್ಟುವ ಅಗತ್ಯ ಇರುವುದಿಲ್ಲ. SSY ಯೋಜನೆಯಲ್ಲಿನ ಹೂಡಿಕೆಯು ನೀವು ಹೆಚ್ಚಿನ ಲಾಭವನ್ನು ನೀಡುತ್ತದೆ. ಇನ್ನು ಸುಕನ್ಯಾ ಸಮೃದ್ಧಿ ಯೋಜನೆಗೆ ಸರ್ಕಾರವು 8 ಪ್ರತಿಶತದಷ್ಟು ಬಡ್ಡಿಯನ್ನು ನೀಡಲಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ನಿಮ್ಮ ಮಗುವಿನ ವಯಸ್ಸು 10 ವರ್ಷವಾಗಿರಬೇಕು. ನೀವು 15 ವರ್ಷದವರೆಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನಿಮ್ಮ ಮಗುವಿಗೆ 21 ವರ್ಷವಾದಾಗ ನೀವು ಈ ಯೋಜನೆಯ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಬಹುದು.

Tax Exemption In SSY
Image Credit: Wintwealth

ಈ ರೀತಿಯಾಗಿ SSY ಯೋಜನೆಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ
•ನೀವು RBI , ಇಂಡಿಯನ್ ಪೋಸ್ಟ್ ಅಥವಾ ಬ್ಯಾಂಕ್‌ ನ ಅಧಿಕೃತ ವೆಬ್‌ ಸೈಟ್‌ ಗೆ ಹೋಗಬೇಕು.

Join Nadunudi News WhatsApp Group

•ಇಲ್ಲಿ ನೀವು ಸುಕನ್ಯಾ ಸಮೃದ್ಧಿ ಯೋಜನೆಯ ಅರ್ಜಿ ನಮೂನೆಯನ್ನು ಡೌನ್‌ ಲೋಡ್ ಮಾಡಬೇಕು.

•ಈಗ ಎಲ್ಲಾ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ.

•ಇದರ ನಂತರ, ಫಾರ್ಮ್ ಅನ್ನು ಸ್ಕ್ಯಾನ್ ಮಾಡಿ ಮತ್ತು ಅದನ್ನು ಅಪ್ಲೋಡ್ ಮಾಡಿ.

•ಫಾರ್ಮ್ ಅನ್ನು ಅಪ್‌ ಲೋಡ್ ಮಾಡಿದ ನಂತರ ನೀವು ಡಾಕ್ಯುಮೆಂಟ್‌ ಗಳನ್ನು ಅಪ್‌ ಲೋಡ್ ಮಾಡಬೇಕಾಗುತ್ತದೆ.

•ಈ ಪ್ರಕ್ರಿಯೆ ಮುಗಿದ ಬಳಿಕ ಫಾರ್ಮ್ ಅನ್ನು ಯಶಸ್ವಿಯಾಗಿ ಸಲ್ಲಿಸಿದರೆ, ನೀವು ಮೇಲ್ ಅಥವಾ ಮೊಬೈಲ್ ಸಂಖ್ಯೆಯಲ್ಲಿ ಎಲ್ಲಾ ಮಾಹಿತಿಯನ್ನು ಪಡೆಯುತ್ತೀರಿ.

Join Nadunudi News WhatsApp Group