Tax Free Income: 2024 ರ ಕೇಂದ್ರದ ಬಹುದೊಡ್ಡ ಘೋಷಣೆ, ಇನ್ಮುಂದೆ ಈ ಆದಾಯಗಳಿಗೆ ಯಾವುದೇ ತೆರಿಗೆ ಇಲ್ಲ

ಈ ಮೂಲದ ಆದಾಯಕ್ಕೆ ಯಾವುದೇ ತೆರಿಗೆ ಪಾವತಿಸುವ ಅಗತ್ಯ ಇಲ್ಲ

Tax Free Income 2024: ದೇಶದಲ್ಲಿ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಯಲ್ಲಿ ಕೂಡ ಹೊಸ ನಿಯಮಗಳು ಜಾರಿಯಾಗಿವೆ. ಭಾರತದಲ್ಲಿ ಹಲವು ಆದಾಯಗಳಿಗೆ ತೆರಿಗೆ ಇಲ್ಲ ಅನ್ನುವ ಮಾಹಿತಿ ಇನ್ನೂ ಕೂಡ ಸಾಕಷ್ಟು ಜನರಿಗೆ ತಿಳಿದಿಲ್ಲ ಎಂದು ಹೇಳಬಹುದು. ಇತ್ತೀಚಿಗೆ ನಿರ್ಮಲ ಸೀತಾರಾಮನ್ (Nirmala Sitharaman) ಅವರು ತೆರಿಗೆ ಪಾವತಿಯಲ್ಲಿ ಅನೇಕ ವಿನಾಯಿತಿಯನ್ನು ನೀಡುತ್ತಿದ್ದಾರೆ.

ವ್ಯಾಪಾರ ಅಥವಾ ಉದ್ಯೋಗದಿಂದ ಬಂದ ಆದಾಯದ ಮೂಲಗಳಿಗೆ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಆದಾಯ ಇಲಾಖೆಯು ಕೆಲ ಮೂಲದ ಆದಾಯಕ್ಕೆ ತೆರಿಗೆ ವಿನಾಯಿತಿಯನ್ನು ನೀಡುತ್ತದೆ. ಇದೀಗ ಯಾವ ಆದಾಯಕ್ಕೆ ತೆರಿಗೆ ಪಾವತಿಸುವ ಅಗತ್ಯ ಇರುವುದಿಲ್ಲ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

Tax Free Income
Image Credit: Original Source

ಇನ್ಮುಂದೆ ಈ ಆದಾಯಗಳಿಗೆ ಯಾವುದೇ ತೆರಿಗೆ ಇಲ್ಲ
*ಕೃಷಿಯಿಂದ ಗಳಿಸಿದ ಆದಾಯ
ದೇಶದ ರೈತರು ಕೃಷಿಯಿಂದ ಗಳಿಸಿದ ಆದಾಯಗಳು ತೆರಿಗೆ ಮುಕ್ತವಾಗಿರುತ್ತದೆ. ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 10 (2 ) ಅಡಿಯಲ್ಲಿ, ಹಿಂದೂ ಅವಿಭಜಿತ ಕುಟುಂಬದಿಂದ ಪಿತ್ರಾರ್ಜಿತ ರೂಪದಲ್ಲಿ ಪಡೆದ ಆದಾಯವು ತೆರಿಗೆ ಮುಕ್ತ ಆಗಿರುತ್ತದೆ.

*ಉಡುಗೊರೆಯಿಂದ ಬಂದ ಆದಾಯ
ಕುಟುಂಬದವರಿಂದ, ಪೋಷಕರಿಂದ ಉಡುಗೊರೆಯಾಗಿ ಹಣ, ಆಸ್ತಿ, ಆಭರಣಗಳನ್ನು ಪಡೆದಿದ್ದರೆ ಅದು ತೆರಿಗೆ ಮುಕ್ತವಾಗುತ್ತದೆ. ಆದರೆ ನಿಮ್ಮ ಸಂಬಂಧಿ ಹೊರತುಪಡಿಸಿ ಬೇರೆ ಯಾರಾದರೂ ಉಡುಗೊರೆಯಾಗಿ ನೀಡಿದರೆ 50,000 ರೂ. ವರೆಗೆ ಮಾತ್ರ ವಿನಾಯಿತಿ ನೀಡಲಾಗುತ್ತದೆ.

*ಗ್ರಾಚುಟಿಯ ಮೇಲಿನ ಆದಾಯ
ಸರ್ಕಾರೀ ನೌಕರರ ಮರಣದ ನಂತರ ಪಡೆದ ಗ್ರಾಚುಟಿಯ (Gratuity) ಮೇಲಿನ ಆದಾಯವು ತೆರಿಗೆ ಮುಕ್ತವಾಗಿದೆ. 5 ವರ್ಷಗಳ ನಂತರ ವ್ಯಕ್ತಿಯು ಕಂಪನಿಯನ್ನು ತೊರೆದರೆ ಈ ಸಮಯದಲ್ಲಿ ಉದ್ಯೋಗಸ್ಥನೂ ಗ್ರಾಚುಟಿಯ ಪ್ರಯೋಜನವನ್ನು ಪಡೆಯುತ್ತಾರೆ. ಈ ಗ್ರಾಚುಟಿಯ ಮೊತ್ತದ ಮೇಲಿನ ಆದಾಯವು ತೆರಿಗೆ ಮುಕ್ತವಾಗಿದೆ.

Join Nadunudi News WhatsApp Group

Tax Free Income In India
Image Credit: Indiafilings

*ಉಳಿತಾಯ ಖಾತೆಯ ಹೂಡಿಕೆಯ ಬಡ್ಡಿಯಿಂದ ಗಳಿಸಿದ ಆದಾಯ
ಇನ್ನು ಉಳಿತಾಯ ಖಾತೆಯ ಹೂಡಿಕೆಯ ಬಡ್ಡಿಯಿಂದ ಗಳಿಸಿದ ಹಣಕ್ಕೆ ಯಾವುದೇ ರೀತಿಯ ತೆರಿಗೆ ಕಟ್ಟಬೇಕಿಲ್ಲ. ಇನ್ನು 5 ಲಕ್ಷಕ್ಕಿಂತ ಹೆಚ್ಚಿನ VRS ನಲ್ಲಿ ಪಡೆದ ಮೊತ್ತದ ಮೇಲೆ ತೆರಿಗೆ ವಿನಾಯಿತಿ ಲಭ್ಯವಿದೆ.ಇನ್ನು ವಿದ್ಯಾರ್ಥಿಗಳಿಗೆ ನೀಡಲಾಗುವ ವಿದ್ಯಾರ್ಥಿ ವೇತನದ ಮೊತ್ತ ಅಥವಾ ಪ್ರಶಸ್ತಿಯ ಮೊತ್ತಕ್ಕೆ ತೆರಿಗೆ ವಿನಾಯಿತಿ ಲಭ್ಯವಿದೆ.

*ವಿದ್ಯಾರ್ಥಿ ವೇತನದ ಆದಾಯ
ಇನ್ನು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ವಿದ್ಯಾರ್ಥಿ ವೇತನದ ಆದಾಯಕ್ಕೆ ಯಾವುದೇ ತೆರಿಯನ್ನು ವಿಧಿಸಲಾಗುವುದಿಲ್ಲ. ಮಹಾವೀರ ಚಕ್ರ, ಪರಮ ವೀರ ಚಕ್ರ, ವೀರ ಚಕ್ರ ಮತ್ತು ಇತರ ಪಿಂಚಣಿದಾರರಂತಹ ಶೌರ್ಯ ಪ್ರಶಸ್ತಿಗಳ ವಿಜೇತರು ಪಡೆಯುವ ಪಿಂಚಣಿಗೆ ತೆರಿಗೆಯಿಂದ ವಿನಾಯಿತಿ ನೀಡಲಾಗುತ್ತದೆ.

Join Nadunudi News WhatsApp Group