Tax Free Incomes: ಇನ್ಮುಂದೆ ಈ ಮೂಲಗಳಿಂದ ಬರುವ ಆದಾಯಗಳಿಗೆ ಯಾವುದೇ ಟ್ಯಾಕ್ಸ್ ಕಟ್ಟುವ ಅಗತ್ಯ ಇಲ್ಲ, ಕೇಂದ್ರದ ಆದೇಶ.

ಆದಾಯ ಇಲಾಖೆಯು ಯಾವೆಲ್ಲ ಮೂಲದ ಆದಾಯಕ್ಕೆ ತೆರಿಗೆ ವಿನಾಯಿತಿಯನ್ನು ನೀಡಿದೆ

Tax Free Income 2024: ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಆದಾಯ ತೆರಿಗೆ ಪಾವತಿ ಮುಖ್ಯ ಪಾತ್ರ ವಹಿಸುತ್ತದೆ. ಪ್ರಸ್ತುತ 2022 -23 ITR ಸಲ್ಲಿಕೆಯ ಗಡುವು ಮುಗಿದಿದೆ. ಪ್ರಸ್ತುತ ಆದಾಯ ತೆರಿಗೆ ಪಾವತಿದಾರರು 2023 -24 ITR ಸಲ್ಲಿಕೆಯ ಬಗ್ಗೆ ಗಮನಹರಿಸುತ್ತಿದ್ದಾರೆ. ಸದ್ಯ ಕೇಂದ್ರ ಸರ್ಕಾರ ಆದಾಯ ತೆರಿಗೆ ಪಾವತಿದಾರರಿಗೆ ಹೊಸ ವರ್ಷಕ್ಕೆ ಉಡುಗೊರೆಯನ್ನು ನೀಡಿದೆ.

ಕೆಲ ಮೂಲದ ಆದಾಯಕ್ಕೆ ತೆರಿಗೆ ಇಲಾಖೆಯು ವಿನಾಯಿತಿಯನ್ನು ನೀಡಿದೆ. ನೀವು ಇಂತಹ ಮೂಲದಿಂದ ಆದಾಯವನ್ನು ಗಳಿಸಿದರೆ ತೆರಿಗೆ ಪಾವತಿಸುವ ಅಗತ್ಯ ಇರುವುದಿಲ್ಲ. ಆದಾಯ ಇಲಾಖೆಯು ಯಾವೆಲ್ಲ ಮೂಲದ ಆದಾಯಕ್ಕೆ ತೆರಿಗೆ ವಿನಾಯಿತಿಯನ್ನು ನೀಡಿದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

Tax Free Income
Image Credit: Informal News

ಇನ್ಮುಂದೆ ಈ ಮೂಲಗಳಿಂದ ಬರುವ ಆದಾಯಗಳಿಗೆ ಯಾವುದೇ ಟ್ಯಾಕ್ಸ್ ಕಟ್ಟುವ ಅಗತ್ಯ ಇಲ್ಲ
*ಕೃಷಿಯಿಂದ ಗಳಿಸಿದ ಆದಾಯ
ದೇಶದ ರೈತರು ಕೃಷಿಯಿಂದ ಗಳಿಸಿದ ಆದಾಯಗಳು ತೆರಿಗೆ ಮುಕ್ತವಾಗಿರುತ್ತದೆ. ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 10 (2 ) ಅಡಿಯಲ್ಲಿ, ಹಿಂದೂ ಅವಿಭಜಿತ ಕುಟುಂಬದಿಂದ ಪಿತ್ರಾರ್ಜಿತ ರೂಪದಲ್ಲಿ ಪಡೆದ ಆದಾಯವು ತೆರಿಗೆ ಮುಕ್ತ ಆಗಿರುತ್ತದೆ.

*ಉಡುಗೊರೆಯಿಂದ ಬಂದ ಆದಾಯ
ಕುಟುಂಬದವರಿಂದ, ಪೋಷಕರಿಂದ ಉಡುಗೊರೆಯಾಗಿ ಹಣ, ಆಸ್ತಿ, ಆಭರಣಗಳನ್ನು ಪಡೆದಿದ್ದರೆ ಅದು ತೆರಿಗೆ ಮುಕ್ತವಾಗುತ್ತದೆ. ಆದರೆ ನಿಮ್ಮ ಸಂಬಂಧಿ ಹೊರತುಪಡಿಸಿ ಬೇರೆ ಯಾರಾದರೂ ಉಡುಗೊರೆಯಾಗಿ ನೀಡಿದರೆ 50,000 ರೂ. ವರೆಗೆ ಮಾತ್ರ ವಿನಾಯಿತಿ ನೀಡಲಾಗುತ್ತದೆ.

*ಗ್ರಾಚುಟಿಯ ಮೇಲಿನ ಆದಾಯ
ಸರ್ಕಾರೀ ನೌಕರರ ಮರಣದ ನಂತರ ಪಡೆದ ಗ್ರಾಚುಟಿಯ (Gratuity) ಮೇಲಿನ ಆದಾಯವು ತೆರಿಗೆ ಮುಕ್ತವಾಗಿದೆ. 5 ವರ್ಷಗಳ ನಂತರ ವ್ಯಕ್ತಿಯು ಕಂಪನಿಯನ್ನು ತೊರೆದರೆ ಈ ಸಮಯದಲ್ಲಿ ಉದ್ಯೋಗಸ್ಥನೂ ಗ್ರಾಚುಟಿಯ ಪ್ರಯೋಜನವನ್ನು ಪಡೆಯುತ್ತಾರೆ. ಈ ಗ್ರಾಚುಟಿಯ ಮೊತ್ತದ ಮೇಲಿನ ಆದಾಯವು ತೆರಿಗೆ ಮುಕ್ತವಾಗಿದೆ.

Join Nadunudi News WhatsApp Group

Tax Free Income In India
Image Credit: Indiafilings

*ಉಳಿತಾಯ ಖಾತೆಯ ಹೂಡಿಕೆಯ ಬಡ್ಡಿಯಿಂದ ಗಳಿಸಿದ ಆದಾಯ
ಇನ್ನು ಉಳಿತಾಯ ಖಾತೆಯ ಹೂಡಿಕೆಯ ಬಡ್ಡಿಯಿಂದ ಗಳಿಸಿದ ಹಣಕ್ಕೆ ಯಾವುದೇ ರೀತಿಯ ತೆರಿಗೆ ಕಟ್ಟಬೇಕಿಲ್ಲ. ಇನ್ನು 5 ಲಕ್ಷಕ್ಕಿಂತ ಹೆಚ್ಚಿನ VRS ನಲ್ಲಿ ಪಡೆದ ಮೊತ್ತದ ಮೇಲೆ ತೆರಿಗೆ ವಿನಾಯಿತಿ ಲಭ್ಯವಿದೆ.ಇನ್ನು ವಿದ್ಯಾರ್ಥಿಗಳಿಗೆ ನೀಡಲಾಗುವ ವಿದ್ಯಾರ್ಥಿ ವೇತನದ ಮೊತ್ತ ಅಥವಾ ಪ್ರಶಸ್ತಿಯ ಮೊತ್ತಕ್ಕೆ ತೆರಿಗೆ ವಿನಾಯಿತಿ ಲಭ್ಯವಿದೆ.

*ವಿದ್ಯಾರ್ಥಿ ವೇತನದ ಆದಾಯ
ಇನ್ನು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ವಿದ್ಯಾರ್ಥಿ ವೇತನದ ಆದಾಯಕ್ಕೆ ಯಾವುದೇ ತೆರಿಯನ್ನು ವಿಧಿಸಲಾಗುವುದಿಲ್ಲ. ಮಹಾವೀರ ಚಕ್ರ, ಪರಮ ವೀರ ಚಕ್ರ, ವೀರ ಚಕ್ರ ಮತ್ತು ಇತರ ಪಿಂಚಣಿದಾರರಂತಹ ಶೌರ್ಯ ಪ್ರಶಸ್ತಿಗಳ ವಿಜೇತರು ಪಡೆಯುವ ಪಿಂಚಣಿಗೆ ತೆರಿಗೆಯಿಂದ ವಿನಾಯಿತಿ ನೀಡಲಾಗುತ್ತದೆ.

Join Nadunudi News WhatsApp Group