Tax Notice 2024: ಈ 5 ವ್ಯವಹಾರ ಮಾಡುವವರ ಮನೆಗೆ ಟ್ಯಾಕ್ಸ್ ನೋಟೀಸ್ ಕಳುಹಿಸಲು ಕೇಂದ್ರದ ಆದೇಶ, ಹೊಸ ರೂಲ್ಸ್.

ಈ 5 ವ್ಯವಹಾರ ಮಾಡುವವರ ಮನೆಗೆ ಟ್ಯಾಕ್ಸ್ ನೋಟೀಸ್ ಕಳುಹಿಸಲು ಕೇಂದ್ರದ ಆದೇಶ

Tax Notice For These 5 Transaction: ದೊಡ್ಡ ರೀತಿಯ ನಗದು ವಹಿವಾಟುಗಳಿಗೆ ಆದಾಯ ಇಲಾಖೆ ನೋಟಿಸ್ ನೀಡುತ್ತದೆ. ಯಾವುದೇ ರೀತಿಯ ಡಿಜಿಟಲ್ ವಹಿವಾಟು ಅಥವಾ ನಗದು ವಹಿವಾಟು ಮಾಡಿದರು ಕೂಡ ಆದಾಯ ಇಲಾಖೆಗೆ ಕಣ್ಣಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

ಮಿತಿಗಿಂತ ಹೆಚ್ಚಿನ ಆದಾಯವನ್ನು ಗಳಿಸಿದರೆ ತೆರಿಗೆ ಇಲಾಖೆಯು Tax Notice ನೀಡುತ್ತದೆ. ಇನ್ನು ಹೆಚ್ಚು ನಗದು ವಹಿವಾಟು ಮಾಡಿದರು ಕೂಡ ಕೆಲವೊಮ್ಮೆ ನೋಟಿಸ್ ಬರುತ್ತದೆ. ಈ ಐದು ರೀತಿಯ ನಗದು ವಹಿವಾಟುಗಳಿಗೆ ಆದಾಯ ಇಲಾಖೆಯು Tax Notice ನೀಡುವ ಸಾಧ್ಯತೆ ಹೆಚ್ಚಿರುತ್ತದೆ.

Tax Notice For These 5 Transaction
Image Credit: Informal News

ಈ 5 ವ್ಯವಹಾರ ಮಾಡುವವರ ಮನೆಗೆ ಟ್ಯಾಕ್ಸ್ ನೋಟೀಸ್ ಕಳುಹಿಸಲು ಕೇಂದ್ರದ ಆದೇಶ
•ಕ್ರೆಡಿಟ್ ಕಾರ್ಡ್ ಬಿಲ್
ಇನ್ನು 1 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಕ್ರೆಡಿಟ್ ಕಾರ್ಡ್ ಬಿಲ್ ಆಗಿ ಠೇವಣಿ ಮಾಡಿದರೆ ಹಾಗೂ 10 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ನಗದು ರೂಪದಲ್ಲಿ ಪಾವತಿಸಿದರೆ ಆದಾಯ ಇಲಾಖೆ ಹಣದ ಮೂಲದ ಬಗ್ಗೆ ವಿಚಾರಣೆ ನಡೆಸಲು ನೋಟಿಸ್ ನೀಡುತ್ತದೆ.

•FD ಯಲ್ಲಿ ಹಣ ಠೇವಣಿ ಇಡುವುದು
ಒಂದು ಹಣಕಾಸು ವರ್ಷದಲ್ಲಿ 10 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಒಂದಕ್ಕಿಂತ ಹೆಚ್ಚು ಬಾರಿ ಠೇವಣಿ ಮಾಡಿದರೆ ಆದಾಯ ಇಲಾಖೆ ಹಣದ ಮೂಲದ ಬಗ್ಗೆ ವಿಚಾರಣೆ ನಡೆಸಲು ನೋಟಿಸ್ ನೀಡುತ್ತದೆ. ಇನ್ನು ಚಾಲ್ತಿ ಕತೆಯಲ್ಲಿ ಗರಿಷ್ಠ ಮಿತಿ 50 ಲಕ್ಷ ರೂ. ಆಗಿದೆ.

•ರಿಯಲ್ ಎಸ್ಟೇಟ್ ವ್ಯವಹಾರ
ನೀವು 30 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಆಸ್ತಿಯನ್ನು ನಗದು ರೂಪದಲ್ಲಿ ಖರೀದಿಸಿದರೆ ಅಥವಾ ಮಾರಾಟ ಮಾಡಿದರೆ ಆಸ್ತಿ ರಿಜಿಸ್ಟ್ರಾರ್ ಪರವಾಗಿ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ಹೋಗುತ್ತದೆ.

Join Nadunudi News WhatsApp Group

Tax Notice Latest Update
Image Credit: Okcredit

•ಷೇರುಗಳು, ಮ್ಯೂಚುವಲ್ ಫಂಡ್‌ ಸೇರಿದಂತೆ ಇನ್ನಿತರ ಬಾಂಡ್‌ ಗಳನ್ನೂ ಖರೀದಿಸುವುದು
ಷೇರುಗಳು, ಮ್ಯೂಚುವಲ್ ಫಂಡ್‌ಗಳು, ಡಿಬೆಂಚರ್‌ಗಳು ಮತ್ತು ಬಾಂಡ್‌ ಗಳಲ್ಲಿ ದೊಡ್ಡ ನಗದು ವಹಿವಾಟುಗಳನ್ನು ನಡೆಸುವಂತಿಲ್ಲ. ಆರ್ಥಿಕ ವರ್ಷದಲ್ಲಿ ಗರಿಷ್ಟ 10 ಲಕ್ಷದ ವರೆಗೆ ಮಾತ್ರ ಠೇವಣಿ ಮಾಡಬಹುದಾಗಿದೆ.

•ಬ್ಯಾಂಕ್ ಖಾತೆಯಲ್ಲಿ ಹಣ ಜಮಾ ಮಾಡುವುದು
ಒಂದು ವರ್ಷದಲ್ಲಿ ನೀವು ಎಫ್ ಡಿಯಲ್ಲಿ 10 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಒಂದಕ್ಕಿಂತ ಹೆಚ್ಚು ಬಾರಿ ಠೇವಣಿ ಮಾಡಿದರೆ ಆದಾಯ ಇಲಾಖೆ ಹಣದ ಮೂಲದ ಬಗ್ಗೆ ವಿಚಾರಣೆ ನಡೆಸಲು ನೋಟಿಸ್ ನೀಡುತ್ತದೆ.

Join Nadunudi News WhatsApp Group