Bigg Boss Prize Money: ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಗೆ ಸಿಕ್ಕ 50 ಲಕ್ಷ ಹಣದಲ್ಲಿ ಸರ್ಕಾರಕ್ಕೆ ಎಷ್ಟು ತೆರಿಗೆ ಕಟ್ಟಬೇಕು, ತೆರಿಗೆ ನಿಯಮ.

ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಗೆ ಸಿಕ್ಕ 50 ಲಕ್ಷ ಹಣದಲ್ಲಿ ಇಷ್ಟು ಹಣವನ್ನು ಸರ್ಕಾರಕ್ಕೆ ತೆರಿಗೆ ಕಟ್ಟಬೇಕು

Tax On Bigg Boss Prize Money: ಸದ್ಯ ಅಭುನಿರೀಕ್ಷಿತ BBK10 ರ ಫೈನಲ್ ಮುಗಿದಿದ್ದು, ಜನರ ನೆಚ್ಚಿನ ಕಾರ್ತಿಕ ಮಹೇಶ್ ಬಿಗ್ ಬಾಸ್ ಸೀಸನ್ 10 ರ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಇನ್ನು 112 ದಿನಗಳು ಬಿಗ್ ಬಾಸ್ ಪ್ರಸಾರಗೊಂಡಿದ್ದು ಪ್ರೇಕ್ಷಕರ ಗಮನ ಸೆಳೆದಿತ್ತು. ಎಲ್ಲೆಡೆ ಬರಿ ಬಿಗ್ ಬಾಸ್ ಸದ್ದು ಕೇಳಿಬರುತ್ತಿತ್ತು.

ಇನ್ನು ಬಿಗ್ ಬಾಸ್ ನ ಕೊನೆಯ ವಾರದಲ್ಲಂತೂ ಬಿಗ್ ಬಾಸ್ ವಿನ್ನರ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಾರಿ ಚರ್ಚೆ ಶುರುವಾಗಿತ್ತು. ಈ ಬಾರಿ ಸೀಸನ್ 10 ರ ವಿನ್ನರ್ ಯಾರಾಗುತ್ತಾರೆ ಎನ್ನುವುದೇ ಎಲ್ಲರ ಪ್ರಶೆಯಾಗಿತ್ತು. ಸದ್ಯ ಈ ಕುತೂಹಲಕ್ಕೆ ತೆರೆ ಬಿದ್ದು, ಕಿಚ್ಚ ಸುದೀಪ್ ಅವರು ನಿನ್ನೆ ವಿನ್ನರ್ ಯಾರೆಂದು ಘೋಷಿಸಿದ್ದಾರೆ.

Tax On Bigg Boss Prize Money
Image Credit: Times Now

ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಮಹೇಶ್ ಎಷ್ಟು ಹಣ ಪಡೆದಿದ್ದಾರೆ..?
BBK10 ರಲ್ಲಿ ಜನರ ನೆಚ್ಚಿನ “ಕಾರ್ತಿಕ್ ಮಹೇಶ್” ಬಿಗ್ ಬಾಸ್ ಟ್ರೋಫಿ ಪಡೆದುಕೊಂಡಿದ್ದಾರೆ. ಅತಿ ಹೆಚ್ಚು ವೋಟ್ ಗಳನ್ನೂ ಪಡೆದುಕೊಂಡು ಕಾರ್ತಿಕ್ ಟಾಪ್ ಒನ್ ಸ್ಥಾನವನ್ನು ಪಡೆದಿದ್ದಾರೆ. ಇನ್ನು ಗ್ ಬಾಸ್ 10 ರ ವಿನ್ನರ್ ಕಾರ್ತಿಕ್ ಗೆ ಬರೋಬ್ಬರಿ 50 ಲಕ್ಷ ನಗದು ಬಹುಮಾನ ಲಭಿಸಿದೆ.

ಇದರ ಜೊತೆಗೆ Maruti Suzuki Brezza Car ಹಾಗೂ Bounce Infinity Electric Scooter ಅನ್ನು ಬಹುಮಾನವಾಗಿ ನೀಡಲಾಗಿದೆ. ವಿನ್ನರ್ ಆದ ಕಾರ್ತಿಕ್ ಬರೋಬರಿ 50 ಲಕ್ಷ ಹಣ ಪಡೆದರು ಕೂಡ ಅಷ್ಟು ಹಣವನ್ನು ಕಾರ್ತಿಕ್ ಮನೆಗೆ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ಕಾರಣ ನಗದು ಬಹುಮಾದ ಮೊತ್ತಕ್ಕೆ ಟ್ಯಾಕ್ಸ್ ಬೀಳುತ್ತದೆ. ಇದೀಗ ನಾವು ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಗೆ ಸಿಕ್ಕ 50 ಲಕ್ಷ ಹಣದಲ್ಲಿ ಸರ್ಕಾರಕ್ಕೆ ಎಷ್ಟು ತೆರಿಗೆ ಕಟ್ಟಬೇಕು ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

Bigg Boss Prize Money
Image Credit: News Next Live

ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಗೆ ಸಿಕ್ಕ 50 ಲಕ್ಷ ಹಣದಲ್ಲಿ ಸರ್ಕಾರಕ್ಕೆ ಎಷ್ಟು ತೆರಿಗೆ ಕಟ್ಟಬೇಕು
ಕರ್ನಾಟಕದಲ್ಲಿ 10 ಸಾವಿರಕ್ಕಿಂತ ಮೇಲಿನ ಮೊತ್ತಕ್ಕೆ ಟ್ಯಾಕ್ಸ್ ಅನ್ವಯವಾಗಲಿದೆ. ಹೀಗಾಗಿ ಕಾರ್ತಿಕ್ ಪಡೆದಿರುವ 50 ಲಕ್ಷಕ್ಕೆ ಹೆಚ್ಚಿನ ಟ್ಯಾಕ್ಸ್ ಬೀಳುವುದಂತೂ ನಿಜ. ಕರ್ನಾಟಕದಲ್ಲಿ ನಗದು ಬಹುಮಾನಕ್ಕೆ ಟ್ಯಾಕ್ಸ್ ಶೇ. 31 .2 ಆಗಿದೆ. ಅಂದರೆ 50 ಲಕ್ಷಕ್ಕೆ 31 .2 % ಟ್ಯಾಕ್ಸ್ ಅನ್ವಯವಾದಾಗ 50 ಲಕ್ಷದಲ್ಲಿ ಕಾರ್ತಿಕ್ ಮಹೇಶ್ ಪಡೆಯುವ ಒಟ್ಟು ಮೊತ್ತ 34 .40 ಲಕ್ಷ ಮಾತ್ರ ಹಣ ಸಿಗಲಿದೆ. ಉಳಿದ 14 .60 ಲಕ್ಷ ಹಣ ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ತಲುಪುತ್ತದೆ.

Join Nadunudi News WhatsApp Group

ಇನ್ನು 5 ನೇ ಸ್ಥಾನ ಪಡೆದ ತುಕಾಲಿ ಸಂತೋಷ್ ಹಾಗೂ ನಾಲ್ಕನೇ ಸ್ಥಾನವನ್ನ ಪಡೆದ ಹಳ್ಳಿಕಾರ್ ವರ್ತೂರ್ ಸಂತೋಷ್ ಅವರಿಗೆ 2 ಲಕ್ಷ ಬಹುಮಾನ ಮೊತ್ತವನ್ನು ನೀಡಲಾಗಿದೆ. ಮೂರನೇ ರನ್ನರ್ ಅಪ್ ಆಗಿ ವಿನಯ್ ಹೊರಹೊಮ್ಮಿದ್ದು, 5 ಲಕ್ಷ ಬಹುಮಾನ ಪಡೆದುಕೊಂಡಿದ್ದಾರೆ. ಇನ್ನು ಸೆಕೆಂಡ್ ರನ್ನರ್ ಅಪ್ ಆದ ಸಂಗೀತ ಅವರಿಗೆ 7 ಲಕ್ಷ ಬಹುಮಾನ ನೀಡಲಾಗಿದ್ದು, ಫಸ್ಟ್ ರನ್ನರ್ ಅಪ್ ಡ್ರೋನ್ ಪ್ರತಾಪ್ ಗೆ 10 ಲಕ್ಷ ಹಣ ನೀಡಲಾಗಿದೆ.

Join Nadunudi News WhatsApp Group