Tax On EPF: PF ಖಾತೆ ಇದ್ದವರಿಗೆ ಬೇಸರದ ಸುದ್ದಿ, ಜಾರಿಗೆ ಬಂತು ಹೊಸ ತೆರಿಗೆ ನಿಯಮ

Tax On EPF Withdrawal: EPF ದೀರ್ಘಾವಧಿಯ ಹೂಡಿಕೆಯು ನಿವೃತ್ತಿಯ ನಂತರದ ಬದುಕಿಗೆ ಸಹಾಯ ಮಾಡುತ್ತದೆ. ಉದ್ಯೋಗಸ್ಥರು EPF ಖಾತೆಯನ್ನು ಹೊಂದಿರುತ್ತಾರೆ. ಈ EPF ಖಾತೆಯನ್ನು EPFO ನಿರ್ವಹಿಸುತ್ತದೆ. ನಿಮ್ಮ ಸಂಬಳದ ಕೆಲವು ಭಾಗವು PF ನಲ್ಲಿ ಠೇವಣಿಯಾಗುತ್ತದೆ. ಇದರಲ್ಲಿ ನೀವು ಠೇವಣಿ ಇಡುವಷ್ಟು ಹಣವನ್ನು ಕಂಪನಿಯೂ ಠೇವಣಿ ಇಡುತ್ತದೆ. ನಿಮ್ಮ ನಿವೃತ್ತಿಯ ನಂತರ ನಿಮಗೆ ಇದರ ಠೇವಣಿ ಹಣವನ್ನು ನೀಡಲಾಗುತ್ತದೆ.

ಸದ್ಯ ಉದ್ಯೋಗಿಗಳು EPF ಖಾತೆಯಿಂದ ಹಾವನ್ನು ಹಿಂಪಡೆಯಲು ತೆರಿಗೆ ಪಾವತಿಸಬೇಕಾಗಿಲ್ಲ ಅಂದುಕೊಳ್ಳುತ್ತಾರೆ, ಆದರೆ ನೀವು EPF ಖಾತೆಯಿಂದ ಹಣವನ್ನು ಹಿಂಪಡೆಯಲು ತೆರಿಗೆ ಪಾವತಿಸಬೇಕಾಗುತ್ತದೆ. ಇದೀಗ ನಾವು EPF ಖಾತೆಯಿಂದ ಹಣವನ್ನು ಹಿಂಪಡೆಯಲು ಎಷ್ಟು ತೆರಿಗೆ ಪಾವತಿಸಬೇಕು ಎಂದು ನೋಡೋಣ.

Tax On EPF Withdrawal
Image Credit: TV9hindi

ಈ ಸಂದರ್ಭದಲ್ಲಿ ತೆರಿಗೆಯನ್ನು ಪಾವತಿಸಬೇಕಾಗುತ್ತದೆ…?
ನೀವು ಐದು ವರ್ಷಗಳ ಮೊದಲು ಹಣವನ್ನು ಹಿಂತೆಗೆದುಕೊಂಡರೆ ತೆರಿಗೆ ಪಾವತಿಸಬೇಕಾಗುತ್ತದೆ. ಈಗ ನೀವು 5 ವರ್ಷಗಳಲ್ಲಿ ನೀವು ಒಂದು ಕಂಪನಿಯಲ್ಲಿ ಅಥವಾ ಒಂದಕ್ಕಿಂತ ಹೆಚ್ಚು ಕಂಪನಿಗಳಲ್ಲಿ ಕೆಲಸ ಮಾಡಿದ್ದೀರಿ ಎನ್ನುದು ಮುಖ್ಯ ಅಲ್ಲ. ಬದಲಾಗಿ ನೀವು 5 ವರ್ಷಗಳ ಕಾಲ ಕೆಲಸ ಮಾಡದಿದ್ದರೆ ಮತ್ತು ಖಾತೆಯಲ್ಲಿ ಠೇವಣಿ ಮಾಡಿದ ಮೊತ್ತವನ್ನು ಹಿಂತೆಗೆದುಕೊಂಡರೆ ತೆರಿಗೆ ಪಾವತಿಸಬೇಕಾಗುತ್ತದೆ.

ಯಾರಾದರೂ 2021-22ರಲ್ಲಿ PF ನಲ್ಲಿ ಠೇವಣಿ ಇಡಲು ಪ್ರಾರಂಭಿಸಿದರೆ ಮತ್ತು 2024-25 ರಲ್ಲಿ EPF ನಲ್ಲಿ ಠೇವಣಿ ಮಾಡಿದ ಮೊತ್ತವನ್ನು ಹಿಂಪಡೆಯಲು ಬಯಸಿದರೆ, ಅವರು 2024-25 ರಲ್ಲಿ ತೆರಿಗೆ ಪಾವತಿಸಬೇಕಾಗುತ್ತದೆ.

ಎಷ್ಟು TDS ಕಡಿತಗೊಳಿಸಲಾಗುತ್ತದೆ…?
5 ವರ್ಷಗಳ ಮೊದಲು ಭವಿಷ್ಯ ನಿಧಿಯಿಂದ ಹಣವನ್ನು ಹಿಂತೆಗೆದುಕೊಂಡರೆ ಮತ್ತು ಚಂದಾದಾರರ ಪಾನ್ ಕಾರ್ಡ್ ಅನ್ನು ಲಿಂಕ್ ಮಾಡದಿದ್ದರೆ, ಶೇಕಡಾ 20 ರಷ್ಟು ಕಡಿತಗೊಳಿಸಲಾಗುತ್ತದೆ.ಪಫ್ ಖಾತೆಯನ್ನು ಪಾನ್ ಕಾರ್ಡ್ ಗೆ ಲಿಂಕ್ ಮಾಡಿದರೆ ಶೇಕಡಾ 10 ರಷ್ಟು TDS ಕಡಿತಗೊಳಿಸಲಾಗುತ್ತದೆ. EPF ನಲ್ಲಿ ಠೇವಣಿ ಮಡಿದ ಮೊತ್ತ 50 ಸಾವಿರಕ್ಕಿಂತ ಕಡಿಮೆ ಇದ್ದರೆ TDS ಪಾವತಿಸಬೇಕಾಗಿಲ್ಲ.

Join Nadunudi News WhatsApp Group

EPF Latest Update
Image Credit: Navi

Join Nadunudi News WhatsApp Group