FD Tax: FD ಯಲ್ಲಿ ಹಣ ಹೂಡಿಕೆ ಮಾಡಿದರೆ ಪ್ರತಿ ವರ್ಷ ಎಷ್ಟು ತೆರಿಗೆ ಕಟ್ಟಬೇಕು…? ಇಲ್ಲಿದೆ ಡೀಟೇಲ್ಸ್.

FD ಯಲ್ಲಿ ಹಣ ಹೂಡಿಕೆ ಮಾಡಿದರೆ ಪ್ರತಿ ವರ್ಷ ಎಷ್ಟು ತೆರಿಗೆ ಕಟ್ಟಬೇಕು...? ಎನ್ನುವ ಬಗ್ಗೆ ಮಾಹಿತಿ

Tax On FD Investment: ಜನಸಾಮಾನ್ಯರು ಹೆಚ್ಚಾಗಿ ತಮ್ಮ ಉಳಿತಾಯದ ಹಣವನ್ನು FD ಯಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ. ಈ FD ಯಲ್ಲಿನ ಹೂಡಿಕೆಯು ಹೂಡಿಕೆದಾರರಿಗೆ ಹೆಚ್ಚಿನ ಲಾಭವನ್ನು ನೀಡುತ್ತದೆ. ಹೆಚ್ಚಿನ ಸುರಕ್ಷತೆ ಹಾಗೂ ಹೆಚ್ಚು ಲಾಭ ಗಳಿಸುವ ಯೋಜನೆಯನ್ನು ನೀವು ಹುಡುಕುತ್ತಿದ್ದರೆ FD ಆಯ್ಕೆ ಉತ್ತಮ ಎನ್ನಬಹದು. ಈಗಾಗಲೇ ಸಾಕಷ್ಟು ಜನರು FD ಯಲ್ಲಿ ಹೂಡಿಕೆಯನ್ನು ಆರಂಭಿಸಿರಬಹುದು.

ಇನ್ನು FD ಯಲ್ಲಿನ ಹೂಡಿಕೆಗೆ ನೀವು ತೆರಿಗೆ ಪಾವತಿಸಬೇಕಾಗುತ್ತದೆ ಎನ್ನುವ ಬಗ್ಗೆ ನಿಮಗೆ ಮಹಿತಿ ತಿಳಿದಿದೆಯೇ..? ಹೌದು, ಸರ್ಕಾರ ನೀವು FD ಯಿಂದ ಗಳಿಸಿದ ಅದ್ಯಕ್ಕೆ ತೆರಿಗೆಯನ್ನು ವಿಧಿಸುತ್ತದೆ. ಆದರೆ ಇದಕ್ಕೆ ಒಂದಿಷ್ಟು ಶರತ್ತುಗಳಿವೆ. ಆದಾಯ ಇಲಾಖೆಯು ತೆರಿಗೆ ವಿಧಿಸಲು ಆದಾಯದ ಮಿತಿಯನ್ನು ಅಳವಡಿಸಿದೆ. ಮಿತಿಗಿಂತ ಹೆಚ್ಚಿನ ಆದಾಯವನ್ನು ಗಳಿಸಿದರೆ ಮಾತ್ರ ತೆರಿಗೆ ಪಾವತಿಸಬೇಕಾಗುತ್ತದೆ. ಇದೀಗ ನಾವು FD ಯಲ್ಲಿ ಹಣ ಹೂಡಿಕೆ ಮಾಡಿದರೆ ಪ್ರತಿ ವರ್ಷ ಎಷ್ಟು ತೆರಿಗೆ ಕಟ್ಟಬೇಕು ಎನ್ನುವ ಬಗ್ಗೆ ತಿಳಿಯೋಣ.

Tax On Fixed Deposits
Image Credit: Futuregenerali

FD ಹೂಡಿಕೆಯಲ್ಲಿನ ತೆರಿಗೆ ನಿಯಮ ಏನು…?
FD ಯಲ್ಲಿ ನೀವು ವಾರ್ಷಿಕವಾಗಿ ಪಡೆಯುವ ಬಡ್ಡಿಯನ್ನು ನಿಮ್ಮ ವಾರ್ಷಿಕ ಆದಾಯಕ್ಕೆ ಸೇರಿಸಲಾಗುತ್ತದೆ. ನಿಮ್ಮ ಆದಾಯವು ತೆರಿಗೆಯ ವ್ಯಾಪ್ತಿಯಲ್ಲಿ ಬಂದರೆ, ಈ ಆದಾಯವನ್ನು ಸೇರಿಸಿದ ನಂತರ, ಸ್ಲ್ಯಾಬ್ ದರದ ಪ್ರಕಾರ ಲೆಕ್ಕಹಾಕಿದ ತೆರಿಗೆಯನ್ನು ನೀವು ಪಾವತಿಸಬೇಕಾಗುತ್ತದೆ. ITR ಅನ್ನು ಸಲ್ಲಿಸುವಾಗ FD ಬಡ್ಡಿಯಿಂದ ಈ ಆದಾಯವನ್ನು ಇತರ ಮೂಲಗಳಿಂದ ಬರುವ ಆದಾಯದಲ್ಲಿ ಸೇರಿಸಲಾಗುತ್ತದೆ.

FD ಯಲ್ಲಿ ಹಣ ಹೂಡಿಕೆ ಮಾಡಿದರೆ ಪ್ರತಿ ವರ್ಷ ಎಷ್ಟು ತೆರಿಗೆ ಕಟ್ಟಬೇಕು…?
ಎಫ್‌ ಡಿಯಲ್ಲಿ ಟಿಡಿಎಸ್ ಕಡಿತಗೊಳಿಸುವ ನಿಯಮಗಳೂ ಇವೆ. ನೀವು ಒಂದು ವರ್ಷದಲ್ಲಿ FD ಬಡ್ಡಿಯಿಂದ ರೂ. 40,000 ಕ್ಕಿಂತ ಹೆಚ್ಚು ಗಳಿಸಿದ್ದರೆ, ಖಾತೆಗೆ ಬಡ್ಡಿಯನ್ನು ಜಮಾ ಮಾಡುವ ಮೊದಲು ಬ್ಯಾಂಕ್ ನಿಮ್ಮಿಂದ 10 ಪ್ರತಿಶತ TDS ಅನ್ನು ಕಡಿತಗೊಳಿಸುತ್ತದೆ. ನೀವು ಒಂದು ವರ್ಷದಲ್ಲಿ ಎಫ್‌ ಡಿಯಿಂದ ರೂ. 40,000 ವರೆಗೆ ಗಳಿಸಿದರೆ, ಟಿಡಿಎಸ್ ಅನ್ನು ಕಡಿತಗೊಳಿಸಲಾಗುವುದಿಲ್ಲ. ಆದರೆ ಹಿರಿಯ ನಾಗರಿಕರಿಗೆ, ಒಂದು ವರ್ಷದಲ್ಲಿ ಎಫ್‌ ಡಿಯಿಂದ ರೂ. 50 ಸಾವಿರದ ವರೆಗಿನ ಆದಾಯದ ಮೇಲೆ ಟಿಡಿಎಸ್ ವಿಧಿಸಲಾಗುವುದಿಲ್ಲ.

Tax On FD Investment
Image Credit: Indmoney

ತೆರಿಗೆ ಉಳಿಸಲು ಈ ರೀತಿಯ ಹೂಡಿಕೆ ಮಾಡಿ
ನೀವು ತೆರಿಗೆ ಪ್ರಯೋಜನಗಳನ್ನು ಪಡೆಯಲು ಬಯಸಿದರೆ 5 ವರ್ಷಗಳ FD ನಿಮಗೆ ಉಪಯುಕ್ತವಾಗಿದೆ. 5 ವರ್ಷಗಳ FD ಅನ್ನು ತೆರಿಗೆ ಉಳಿತಾಯ FD ಎಂದು ಕರೆಯಲಾಗುತ್ತದೆ. ನೀವು ಬ್ಯಾಂಕ್‌ ನಿಂದ ಪೋಸ್ಟ್ ಆಫೀಸ್‌ಗೆ ಈ ಆಯ್ಕೆಯನ್ನು ಪಡೆಯುತ್ತೀರಿ. 5 ವರ್ಷಗಳ FD ಯಲ್ಲಿ ನೀವು ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಯ ಪ್ರಯೋಜನವನ್ನು ಪಡೆಯುತ್ತೀರಿ.

Join Nadunudi News WhatsApp Group

ಸೆಕ್ಷನ್ 80C ಅಡಿಯಲ್ಲಿ, ನಿಮ್ಮ ಒಟ್ಟು ಆದಾಯದಿಂದ 1.5 ಲಕ್ಷ ರೂಪಾಯಿಗಳ ಕಡಿತವನ್ನು ನೀವು ಕ್ಲೈಮ್ ಮಾಡಬಹುದು. ಪ್ರತಿ ಹಣಕಾಸು ವರ್ಷದಲ್ಲಿ ರೂ. 1,50,000 ವರೆಗಿನ ಹೂಡಿಕೆಯು ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿರುತ್ತದೆ. ಆದರೆ ನೀವು 5 ವರ್ಷಗಳ ಮೊದಲು ನಿಮ್ಮ FD ಅನ್ನು ಮುರಿದರೆ ಬ್ಯಾಂಕ್ ನಿಮಗೆ ದಂಡವನ್ನು ವಿಧಿಸುತ್ತದೆ. ಈ ಸಂದಭದಲ್ಲಿ ನೀವು ತೆರಿಗೆ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ.

Join Nadunudi News WhatsApp Group